Breaking
12 Jan 2026, Mon

ಆಯನೂರು – ರಿಪ್ಪನ್‌ಪೇಟೆ ನಾಲ್ಕು ದಿನ ರಸ್ತೆ ಸಂಚಾರ ತಾತ್ಕಾಲಿಕ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ !

ಆಯನೂರು – ರಿಪ್ಪನ್‌ಪೇಟೆ ನಾಲ್ಕು ದಿನ ರಸ್ತೆ ಸಂಚಾರ ತಾತ್ಕಾಲಿಕ ಬಂದ್: ಬದಲಿ ಮಾರ್ಗ ಇಲ್ಲಿದೆ ನೋಡಿ !

ಶಿವಮೊಗ್ಗ – ರಿಪ್ಪನ್‌ಪೇಟೆ ರೈಲ್ವೆ ಮಾರ್ಗದಲ್ಲಿ ನಡೆಯುತ್ತಿರುವ ಪರೀಕ್ಷಾ ಕಾರ್ಯಗಳ ಹಿನ್ನೆಲೆ ಅ.23 ರಿಂದ 26ರವರೆಗೆ ವಾಹನ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಸಂಚಾರ ನಿಷೇಧ ಅವಧಿ

▪ ಅ.23 ಬೆಳಿಗ್ಗೆ 7 ಗಂಟೆಯಿಂದ – ಅ.24 ಸಂಜೆ 6 ಗಂಟೆಯವರೆಗೆ
ಅರಸಾಳು ರೈಲ್ವೆ ಗೇಟ್ ಹತ್ತಿರ ಮಾರ್ಗ ಪರಿಶೀಲನೆ → ಸಂಚಾರ ಬಂದ್

▪ ಅ.25 ಬೆಳಿಗ್ಗೆ 7 ಗಂಟೆಯಿಂದ – ಅ.26 ಸಂಜೆ 6 ಗಂಟೆಯವರೆಗೆ
ಸೂಡೂರು ರೈಲ್ವೆ ಗೇಟ್ ಹತ್ತಿರ ಮಾರ್ಗ ಪರಿಶೀಲನೆ → ಸಂಚಾರ ಬಂದ್

✅ ಬದಲಿ ಮಾರ್ಗಗಳು

ಅ.23 ಬೆಳಿಗ್ಗೆ 07 ರಿಂದ ಅ.24 ಸಂಜೆ 06 ರವರೆಗೆ

ಮಾರ್ಗ 1:
ರಿಪ್ಪನ್‌ಪೇಟೆ → ಮೂಗೂಡ್ತಿ → ಬಸವಾಪುರ → 5 MS → ಆಯನೂರು → ಶಿವಮೊಗ್ಗ

ಮಾರ್ಗ 2:
ರಿಪ್ಪನ್‌ಪೇಟೆ → ಯಡೆಹಳ್ಳಿ → ಚೊರಡಿ → ಆಯನೂರು → ಶಿವಮೊಗ್ಗ

ಅ.25 ಬೆಳಿಗ್ಗೆ 07 ರಿಂದ ಅ.26 ಸಂಜೆ 06 ರವರೆಗೆ

ಮಾರ್ಗ 1:
ರಿಪ್ಪನ್‌ಪೇಟೆ → ಸೂಡೂರು → ಶೆಟ್ಟಿಕೆರೆ → ಚೊರಡಿ → ಆಯನೂರು

ಮಾರ್ಗ 2:
ರಿಪ್ಪನ್‌ಪೇಟೆ → ಯಡೆಹಳ್ಳಿ → ಚೊರಡಿ → ಆಯನೂರು → ಶಿವಮೊಗ್ಗ

ಮಾರ್ಗ 3:
ಆಯನೂರು → 5 MS → ಬಸವಾಪುರ → 9 MS → ಅರಸಾಳು → ರಿಪ್ಪನ್‌ಪೇಟೆ

ಸಾರ್ವಜನಿಕರು ಹಾಗೂ ವಾಹನ ಸವಾರರು ಸೂಚಿಸಿರುವ ಬದಲಿ ಮಾರ್ಗಗಳನ್ನು ನಿರ್ದಿಷ್ಟ ದಿನಾಂಕಗಳಲ್ಲಿ ಮಾತ್ರ ಬಳಸುವಂತೆ ಹಾಗೂ ಇಲಾಖೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್