January 11, 2026

ರಿಪ್ಪನ್‌ಪೇಟೆಯಲ್ಲಿ ನಿವೃತ್ತ ಯೋಧ ಗಿರೀಶ್ ಗೆ ಗೌರವ ಸಮರ್ಪಣೆ

ರಿಪ್ಪನ್‌ಪೇಟೆಯಲ್ಲಿ ನಿವೃತ್ತ ಯೋಧ ಗಿರೀಶ್ ಗೆ ಗೌರವ ಸಮರ್ಪಣೆ

ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮತ್ತು ಹಾಲಿ ಸದಸ್ಯ ಪಿ. ರಮೇಶ್ ಅವರ ಮಾಲೀಕತ್ವದ ಸಾಗರ ರಸ್ತೆಯಲ್ಲಿರುವ ಪಿ.ವಿ. ಸ್ಟೋರ್‌ನಲ್ಲಿ ಭಾರತೀಯ ಸೇನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಯೋಧ ಗಿರೀಶ್ ಅವರಿಗೆ ಗೌರವ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಯೋಧರಿಗೆ ಶಾಲು ಹೊದಿಸಿ, ಫಲತಾಂಬೂಲ ಮತ್ತು ನೆನಪಿನ ಕಾಣಿಕೆ ನೀಡಿ ಅವರ ಸೇವಾಭಾವವನ್ನು ಸ್ಮರಿಸಲಾಯಿತು. ನಂತರ ಸಿಹಿ ತಿನ್ನಿಸಿ ನಿವೃತ್ತಿ ಜೀವನವು ಸುಖಮಯವಾಗಿ ಮತ್ತು ಆರೋಗ್ಯಪೂರ್ಣವಾಗಿ ಸಾಗಲಿ ಎಂದು ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನೆಯ ರಾಮಚಂದ್ರ ಬಳೆಗಾರ, ಮುರುಳಿ ಕೆರೆಹಳ್ಳಿ, ಸುದೀರ್ ಪಿ., ಹಿರಿಯರಾದ ಕೇಶವಣ್ಣ, ಡಿ.ಎಸ್. ರಾಜೇಶ್ ಮತ್ತು ಲೇಖಕ ಮಂಜುನಾಥ್ ಭಂಡಾರಿ ಉಪಸ್ಥಿತರಿದ್ದರು.

About The Author