w
Headlines

ರಿಪ್ಪನ್‌ಪೇಟೆ : ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವನ ಸ್ಥಿತಿ ಗಂಭೀರ – ಐವರು ಗಾಯಾಳು ಮೆಗ್ಗಾನ್ ಗೆ|accident

ರಿಪ್ಪನ್ ಪೇಟೆ : ಇಲ್ಲಿನ ಹೊಸನಗರ ರಸ್ತೆಯ ತಾವರೆಕೆರೆ ಬಳಿ ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಬಿಳಿಕಿ ಗ್ರಾಮಕ್ಕೆ ತೆರಳುತಿದ್ದ ಬೈಕ್ ಹಾಗೂ ಜೇನಿ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಬೈಕ್ ನಡುವೆ ತಾವರೆಕೆರೆ ಸಮೀಪದಲ್ಲಿ ಮುಖಾಮುಖಿ ಡಿಕ್ಕಿಯಾಗಿದೆ. ಈ ರಸ್ತೆ ಅಪಘಾತದಲ್ಲಿ ಪಟ್ಟಣದ ಸಮೀಪದ ಬಿಳಿಕಿ ಗ್ರಾಮದ ರಾಕೇಶ್ ಎಂಬ ವ್ಯಕ್ತಿಯ ತಲೆಗೆ ತೀವ್ರವಾದ ಪೆಟ್ಟಾಗಿದ್ದು ಕಾಲು ಮುರಿದು ಸ್ಥಿತಿ ಗಂಭೀರವಾಗಿದೆ. ಅದೇ…

Read Full News

ಎರಡು ದಿನಗಳಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗು ಕೆರೆಯಲ್ಲಿ ಶವವಾಗಿ ಪತ್ತೆ|death

ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗು ಇಂದು ಮನೆಯ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಮನೆಯ ಬಳಿ ಆಟವಾಡುತಿದ್ದ ಮಗು ಕಾಣೆಯಾಗಿತ್ತು,ಎಲ್ಲಾ ಕಡೆ ವಿಚಾರಿಸಿ ಕೊನೆಗೆ ಪೊಲೀಸ್ ಠಾಣೆಯಲ್ಲಿ ಅವರ ತಂದೆ ದೂರು ಸಲ್ಲಿಸಿದ್ದರು. ಇಂದು ಮಗುವಿನ ಮೃತ ದೇಹ ಮನೆಯ ಸಮೀಪದ ಕೆರೆಯಲ್ಲಿ ತೇಲಿ ಬಂದಿದೆ. ರಾಗಿಗುಡ್ಡದ 7 ನೇ ತಿರುವಿನಲ್ಲಿ ಮಹ್ಮದ್ ಸೂಫಿಯನ್ ಖುರೇಷಿ ಎಂಬುವರು ತಮ್ಮ ಮೊದಲನೇ ಮಗು ಮೊಹ್ಮದ್ ಮನ್ನನ್…

Read Full News

ಅಪರೂಪದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಇಬ್ಬರ ಬಂಧನ|athin blevin

ಅಪರೂಪದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಇಬ್ಬರ ಬಂಧನ ಅಪರೂಪದದ ವನ್ಯಜೀವಿ ಮಚ್ಚೆ ಗೂಬೆಗಳ ಅಕ್ರಮ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು  ಮಾಲು ಸಮೇತ ಬಂಧಿಸಿರುವ ಘಟನೆ ಶಿವಮೊಗ್ಗ ತಾಲೂಕಿನ ಕಲ್ಲೂಪುರ ಗ್ರಾಮದಲ್ಲಿ ನಡೆದಿದೆ. ಮಚ್ಚೆ ಗೂಬೆ(ಅಥೀನ್ ಬ್ಲೆವಿನ್ )ಯನ್ನು ಅಕ್ರಮ ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಸಾಗರ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್  ಸಬ್ ಇನ್ಸ್ಪೆಕ್ಟರ್ ವಿನಾಯಕ ನೇತ್ರತ್ವದಲ್ಲಿ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು…

Read Full News

ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವು|death

ಶಿವಮೊಗ್ಗ : ಸ್ನೇಹಿತರೊಂದಿಗೆ ನದಿಗೆ ಈಜಲು ತೆರಳಿದ್ದ ಬಾಲಕ ತುಂಗಾ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಯೂಸಫ್ (14) ಮೃತಪಟ್ಟಿರುವ ಯುವಕನಾಗಿದ್ದಾನೆ. ಯೂಸುಫ್ ಇಂದು ಮೂವರು ಸ್ನೇಹಿತರೊಂದಿಗೆ ನದಿಗೆ ಈಜಲು ಹೋಗಿ ನೀರು ಪಾಲಾಗಿದ್ದನು,ಆತನ ಸ್ನೇಹಿತರು ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿದ್ದಾರೆ. ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದಿಂದ ಹುಡುಕಾಟ ಆರಂಭಿಸಿದ್ದರು ಸುಮಾರು ಒಂದುವರೆ ಗಂಟೆ ಹುಡುಕಾಟ ನಡೆಸಿದ ನಂತರ ಮೃತದೇಹ ದೊರಕಿದೆ.ತಕ್ಷಣವೇ ಮೆಗ್ಗಾನ್ ಗೆ ಕರೆದೊಯ್ಯಲಾಗಿದೆ. ವೈದ್ಯರು ಆತನ ಸಾವನ್ನ…

Read Full News

ರಿಪ್ಪನ್‌ಪೇಟೆ : ಕಾರಿನಲ್ಲಿ ಬಂದು ಗೋ ಕಳ್ಳತನಕ್ಕೆ ವಿಫಲ ಯತ್ನ – ವೀಡಿಯೋ ವೈರಲ್|cow theft

ರಿಪ್ಪನ್‌ಪೇಟೆ : ಕಾರಿನಲ್ಲಿ ಬಂದು ಗೋ ಕಳ್ಳತನಕ್ಕೆ ವಿಫಲ ಯತ್ನ – ವೀಡಿಯೋ ವೈರಲ್ ರಿಪ್ಪನ್‌ಪೇಟೆ : ಕಾರಿನಲ್ಲಿ ಬಂದು ಬೀದಿಯ ಗೋವುಗಳ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದ್ದು, ಸ್ಥಳೀಯರು ಕೂಗಿದೊಡನೆ ಖದೀಮರು ಪರಾರಿಯಾಗಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ರಸ್ತೆಯ ಗಾಂಧಿ ನಗರದಲ್ಲಿ  ಕಾರನ್ನು ಗೋವುಗಳ ಹತ್ತಿರ ತಂದು ನಿಲ್ಲಿಸಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ಗೋವುಗಳು ಕೈಗೆ ಸಿಕ್ಕಿಲ್ಲ.ಈ ಸಂಧರ್ಭದಲ್ಲಿ ಸ್ಥಳೀಯರು ಕೂಗಿದ್ದಾರೆ ನಂತರ  ಎಚ್ಚೆತ್ತುಕೊಂಡ ಖದೀಮರು ಓಡಿ ಹೋಗಿದ್ದಾರೆ. ಈ ಘಟನೆಯನ್ನು ಯಾರೋ ವೀಡಿಯೋ ಮಾಡಿದ್ದು…

Read Full News

ಗೋಮಾಂಸ ಮಾರುತಿದ್ದ ಯುವಕನ ಮೇಲೆ ಬಜರಂಗದಳ ದಾಳಿ – ಹಲ್ಲೆ : ರಾಜಕೀಯ ಬಣ್ಣ ಪಡೆದುಕೊಂಡ ಪ್ರಕರಣ|assault

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಕಂಚಿ ಬಾಗಿಲಿನಲ್ಲಿ ವ್ಯಕ್ತಿಯೊಬ್ಬ ದನದ ಮಾಂಸವನ್ನು ಮಾರಾಟ ಮಾಡಲು ಬೈಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಬಜರಂಗ ದಳದ ಯುವಕರು ಆತನಿಗೆ ಅಡ್ಡಗಟ್ಟಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಭದ್ರಾವತಿಯ ಅನ್ವರ್ ಕಾಲೋನಿಯ ಮೂಮಿನ್ ಮೊಹಲ್ಲಾ ವಾಸಿ ಅಬ್ದುಲ್ ರೆಹಮಾನ್ ಬಿನ್ ಮೊಹಮ್ಮದ್ (30) ದನದ ಮಾಂಸದ ವ್ಯಾಪಾರ ಮಾಡುವ ಯುವಕ. ಈತ ಶುಕ್ರವಾರ ಬೆಳಗ್ಗೆ 10 ರಿಂದ 12 ಕೆಜಿಯಷ್ಟು ದನದ ಮಾಂಸದ ಪ್ಯಾಕೆಟ್‌ಗಳನ್ನು ಮಾಡಿಕೊಂಡು ಮನೆ ಮನೆಗೆ ಕೊಡಲು ತನ್ನ ಬೈಕಿನಲ್ಲಿ…

Read Full News

ಸ್ನೇಹಿತರ ಜೊತೆ ಸೇರಿ ಹೆಂಡತಿಯ ಕೊಲೆಗೆ ಯತ್ನಿಸಿದ್ದ ಪತಿರಾಯ – ಕಠಿಣ ಶಿಕ್ಷೆ ವಿಧಿಸಿದ ಕೋರ್ಟ್: ಈ ಸುದ್ದಿ ನೋಡಿ|court

ಮಹಿಳೆಯೋರ್ವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಲು ಯತ್ನಿಸಿದ ಮೂವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 22 ಸಾವಿರ ರೂ ದಂಡ ವಿಧಿಸಿ‌ದೆ. 2016 ರಲ್ಲಿ ಶಿವಮೊಗ್ಗದ ಮಲವಗೊಪ್ಪ ಬಡಾವಣೆಯಲ್ಲಿ ಶೋಭಾ(26) ಮತ್ತು ಪತಿ ಹಾಲೇಶ್ ನಾಯ್ಕನಿಗೂ ಕೌಟಂಬಿಕ‌ ವಿಚಾರದಲ್ಲಿ ಗಲಾಟೆ ನಡೆದಿತ್ತು. ಇದರಿಂದ 2016 ರಲ್ಲಿ ಶೋಭಾ ತನ್ನ ತಾಯಿಯೊಂದಿಗೆ ಮಲವಗೊಪ್ಪ ಬಸ್ ನಿಲ್ದಾಣದಲ್ಲಿ ನಿಂತಾಗ ಹಾಲೇಶ್ ನಾಯ್ಕ ಹರಿತವಾದ ಆಯುಧದಿಂದ ಆಕೆಯ ತಲೆ ಹಾಗೂ…

Read Full News

ಬಸ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿ – ಚಕ್ರದಡಿ ಸಿಲುಕಿಕೊಂಡ ಸ್ಕೂಟರ್ : ಸ್ಥಳದಲ್ಲಿಯೇ ಓರ್ವ ಸಾವು|accident

ಶಿವಮೊಗ್ಗ : ಮಲ್ಲಿಗೇನಹಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ ಬಳಿ ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಖಾಸಗಿ ಸಂಸ್ಥೆಗೆ ಸೇರಿದ ಬಸ್‌ ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾದ ರಭಸಕ್ಕೆ ಸ್ಕೂಟರ್‌ ಬಸ್‌ ಚಕ್ರದಡಿ ಸಿಲುಕಿಕೊಂಡಿದ್ದು, ಸಂಪೂರ್ಣ ನುಜ್ಜುಗುಜ್ಜಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತನನ್ನು ಜಾರ್ಖಂಡ್ ಮೂಲದ ಯುವಕ ಅನ್ಸಾರಿ ಎನ್ನಲಾಗುತ್ತಿದೆ.  ಸ್ಥಳಕ್ಕೆ ಸಂಚಾರಿ ಪಶ್ಚಿಮ ಪೊಲೀಸರು ಭೇಟಿ ನೀಡಿದ್ದಾರೆ. ಮೃತ ದೇಹವನ್ನು ಮರಣೋತ್ತರ…

Read Full News

ಚೋರಡಿ ಬಳಿ ಸರಣಿ ಅಪಘಾತ – ಟ್ರಾಫಿಕ್ ಜಾಮ್|accident

ಶಿವಮೊಗ್ಗ ಜಿಲ್ಲೆಯ ಚೋರಡಿಯಲ್ಲಿ ನಾಲ್ಕು ವಾಹನಗಳ ನಡುವೆ ಸರಣಿ ಅಪಘಾತವಾಗಿದ್ದು,ಅರ್ಧ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್‌ ಆದ ಘಟನೆ ನಡೆದಿದೆ. ಖಾಸಗಿ ಬಸ್, ಗೂಡ್ಸ್ ವಾಹನ, ಲಾರಿ ಮತ್ತು ಕಾರಿನ ನಡುವೆ ಸರಣಿ ಅಪಘಾತ ಸಂಭವಿಸಿದೆ. ವಾಹನಗಳಿಗೆ ಹಾನಿ ಉಂಟಾಗಿದೆ. ಆದರೆ ಯಾವುದೆ ವಾಹನದಲ್ಲಿರುವವರಿಗು ಸಮಸ್ಯೆಯಾಗಿಲ್ಲ. ಅದೃಷ್ಟವಶಾತ್ ಎಲ್ಲರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಾಗರ ಕಡೆಯಿಂದ ಬಂದ ಖಾಸಗಿ ಬಸ್, ಚೋರಡಿ ಗ್ರಾಮದಲ್ಲಿ ಪ್ರಯಾಣಿಕರು ಇಳಿಯಲು ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಗೂಡ್ಸ್ ಆಟೋ ಬಂದಿದೆ. ಅದರ…

Read Full News

ಜೂಜಾಟದ ವೇಳೆ ಹಣಕಾಸಿನ ವಿಚಾರದಲ್ಲಿ ಗಲಾಟೆ – ಕೊಲೆಯಲ್ಲಿ ಅಂತ್ಯ|murder

ಭದ್ರಾವತಿ : ಹಣಕಾಸಿನ ವಿಚಾರದಲ್ಲಿ ಹುಟ್ಟಿಕೊಂಡ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆಯ ರಂಗನಾಥಪುರ ಗ್ರಾಮದಲ್ಲಿ ಸಂಭವಿಸಿದ ಈ ಜಗಳದಲ್ಲಿ ವೆಂಕಟೇಶ್‌ ಎಂಬವರ ಕೊಲೆಯಾಗಿದೆ. ರಂಗನಾಥ ಪುರ ಗ್ರಾಮದಲ್ಲಿ ಗಣಪತಿ ಪೆಂಡಾಲ್ ಬಳಿ ಚೌಕಾಬಾರ ಆಡುತ್ತಿದ್ದ ವೇಳೆ ಆಟವನ್ನ ನೋಡುತ್ತಿದ್ದ ವೆಂಕಟೇಶ್ ಗೆ ಅದೇ ಗ್ರಾಮದ ಪ್ರದೀಪ್ ಕಳೆದ 15 ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ನಡೆದ ಗಲಾಟೆ ವಿಚಾರವನ್ನು ಪ್ರಸ್ತಾಪಿಸಿ ಗಲಾಟೆ ಪ್ರಾರಂಭಿಸಿದ್ದಾನೆ. ಹಣಕಾಸಿನ ವಿಚಾರದಲ್ಲಿ ಗಲಾಟೆ ಶುರುವಾಗಿ ಪ್ರದೀಪ…

Read Full News

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಆಮಿಷ – ಯುವಕನಿಗೆ 72 ಸಾವಿರ ವಂಚನೆ|fraud

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗದ ಆಮಿಷವೊಡ್ಡಿ ಯುವಕನೊಬ್ಬನಿಗೆ 72 ಸಾವಿರ ರೂ. ವಂಚನೆ ಮಾಡಿರುವ ಬಗ್ಗೆ ಶಿವಮೊಗ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಳಲೂರಿನ ಯುವಕನೊಬ್ಬ ಈ ರೀತಿ ವಂಚನೆಗೊಳಗಾಗಿದ್ದಾನೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸ್ಟಾಫ್ ಆಗಿ ನೇಮಕವಾಗಿದ್ದೀರಿ ಎಂದು ಕರೆ ಮಾಡಿ, ನೋಂದಣಿ ಹೆಸರಲ್ಲಿ ಸಾವಿರಾರು ರೂ. ಪಡೆದು ವಂಚಿಸಲಾಗಿದೆ. ಹೊಳಲೂರಿನ ಯುವಕ ಮೊಬೈಲ್ ಫೋನ್ ನಲ್ಲಿ ಏರ್ ಪೋರ್ಟ್ ಅಥಾರಿಟಿ ಅಪ್ಲಿಕೇಶನ್ ತೆರೆದು ತನ್ನ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಹೆಸರು ದಾಖಲಿಸಿದ್ದರು….

Read Full News

ಅಂಗವಿಕಲ ಯುವತಿಯ ಮೇಲೆ ಅತ್ಯಾಚಾರ – ಆರೋಪಿಗೆ 10 ವರ್ಷ ಜೈಲು,40 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ

ಶಿವಮೊಗ್ಗ ಜಿಲ್ಲೆಯಲ್ಲಿ ಅಂಗವಿಕಲೆ ಯುವತಿಯ ಕೈಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ತುರುಕಿ, ಬಲತ್ಕಾರದಿಂದ ಅತ್ಯಾಚಾರ ಎಸಗಿದಂತ ಆರೋಪಿಗೆ, ಇಂದು ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆ, 40 ಸಾವಿರ ದಂಡವನ್ನು ವಿಧಿಸಿ ಆದೇಶಿಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಗಾರ್ಡರಗದ್ದೆ, ಹುರಳಿ ಗ್ರಾಮದ ಕೃಷ್ಣಯ್ಯ ಶೆಟ್ಟಿ ಎಂಬುವರ ಅಂಗವಿಕಲೆ ಮಗಳ ಮೇಲೆ, ಶಿವರಾಜಪುರ, ಸುರಳಿ ಬಾಳೆ ಬೈಲು ಗ್ರಾಮದ ಸತೀಶ್ ಎಂಬಾತ ಎಂಬಾತ, ತಮ್ಮ ಮನೆಯ ಪಕ್ಕದಲ್ಲಿಯೇ ಇದ್ದಂತ ಅಂಗವಿಕಲೆ ಯುವತಿಯನ್ನು ಕೈಕಾಲು ಕಟ್ಟಿ ಹಾಕಿ,…

Read Full News

ನವ ವಿವಾಹಿತ ಮಹಿಳೆ ಅನುಮಾನಸ್ಪದವಾಗಿ ಸಾವು|crimenews

ಶಿವಮೊಗ್ಗ : ಒಂದು ವರ್ಷ 2 ತಿಂಗಳ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ  ಅನುಮಾನಸ್ಪದವಾಗಿ  ಸಾವನ್ನಪ್ಪಿದ್ದು ಇದು ಆತ್ಮಹತ್ಯೆ ಎಂದು  ಗಂಡನ ಮನೆಯ ಕಡೆಯವರು ಹೇಳಿದರೆ ಯುವತಿಯ ತವರು ಮನೆಯವರು ಇದು ಕೊಲೆ ಎಂದು ಆರೋಪಿಸಿದ್ದಾರೆ. ಸೋಮವಾರ ಸಂಜೆ ನಗರದ ಪ್ರತಿಷ್ಠಿತ ದೇವಸ್ಥಾನಕ್ಕೆ ವಾಲಗ ಊದಲು ಪತಿ ಚಂದ್ರಶೇಖರ್ ಸಿದ್ದರಾಗುತ್ತಿದ್ದು ಆ ವೇಳೆ ಯಾವುದೊ ವಿಚಾರದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಸ್ನಾನದ ಮನೆಗೆ ಪತಿ ಹೋದಾಗ ಪತ್ನಿ ಧನ್ಯಶ್ರೀ ನೇಣು ಹಾಕಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳಿದ್ದಾರೆ. ಧನ್ಯಶ್ರೀ(23)…

Read Full News

ಅಪರೂಪದ ವನ್ಯಜೀವಿ ಪ್ಲಾಪ್ ಶೆಲ್ ಆಮೆ ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಓರ್ವನ ಬಂಧನ|arrested

ರಿಪ್ಪನ್‌ಪೇಟೆ : ಅಪರೂಪದ ವನ್ಯಜೀವಿ ಪ್ಲಾಪ್ ಶೆಲ್ ಆಮೆಯನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಯತ್ನಿಸುತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಅಪರೂಪದ ವನ್ಯ ಜೀವಿಯಾದ ಭಾರತೀಯ ಫ್ಲಾಪ್‌ಶೆಲ್ ಆಮೆ( ಲಿಸ್ಸೆಮಿಸ್ ಪಂಕ್ಟೇಟ್) ಸರೀಸೃಪವನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಆರೋಪಿ ಚಂದ್ರಹಾಸ್ ಎಂಬಾತನನ್ನು ಆಯನೂರು – ಹಾರನಹಳ್ಳಿ ರಾಜ್ಯ ಹೆದ್ದಾರಿ ಸಮೀಪದಲ್ಲಿ ಬಂಧಿಸಿ ವನ್ಯಜೀವಿಯನ್ನು ರಕ್ಷಿಸಲಾಗಿದೆ. ಭಾರತೀಯ ಫ್ಲಾಪ್‌ಶೆಲ್ ಆಮೆಯನ್ನು ರಕ್ಷಣೆ (ಲಿಸ್ಸೆಮಿಸ್ ಪಂಕ್ಟೇಟ್)ಮಾಡಿ   ವನ್ಯಜೀವಿ ಸಂರಕ್ಷಣಾ…

Read Full News

ಆನಂದಪುರ : ಅಕ್ರಮ ಕಲ್ಲು ಕ್ವಾರೆ ಮೇಲೆ ದಿಡೀರ್ ದಾಳಿ – ಎರಡು ಲಾರಿ,ಜೆಸಿಬಿ ಮತ್ತು ಟ್ರಾಕ್ಟರ್ ವಶಕ್ಕೆ|mining

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಅಕ್ರಮ ಗಣಿಗಾರಿಕೆಯ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ದಾಳಿ ನಡೆಸಿ ಅಕ್ರಮ ಗಣಿಗಾರಿಕೆಗೆ ಬಳಸುತಿದ್ದ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಆನಂದಪುರದಲ್ಲಿ ಪರವಾನಿಗೆ ಇಲ್ಲದ ಗಣಿಗಾರಿಕೆ ಪ್ರದೇಶಗಳಿಗೆ  ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಾದ ಶಶಿಕಲಾ ರವರ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ಗಣಿಗಾರಿಕೆ ನಡೆಸುವವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.  ಈ ಕಾರ್ಯಚರಣೆಯಲ್ಲಿ ಎರಡು ಲಾರಿ, ಕಲ್ಲು ಡ್ರೆಸ್ಸಿಂಗ್ ಮಾಡುವ ಎರಡು…

Read Full News

ಮಂಡಘಟ್ಟ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ : ಆನಂದಪುರದ ಸಮೀಪ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಲಾರಿ|accident

ಶಿವಮೊಗ್ಗ ಜಿಲ್ಲೆಯ ಆಯನೂರು ಸಮೀಪದ ಮಂಡಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಘಟನೆ ನಡೆದಿದೆ.  ರಿಪ್ಪನ್ ಪೇಟೆಯಿಂದ‌ ಶಿವಮೊಗ್ಗದ ಕಡೆ ಹೋಗುವಾಗ ಐ20 ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಿಪ್ಪನ್‌ಪೇಟೆಗೆ ಟೈಲ್ಸ್ ಕೆಲಸಕ್ಕೆಂದು ಬಂದು ಹಿಂದಿರುಗುತ್ತಿರುವಾಗ ಈ ಘಟನೆ ನಡೆದಿದೆ.  ಚಾಲಕ ದಸ್ತಗಿರಿ ಮತ್ತು ಜೊತೆಯಲ್ಲಿದ್ದ ಆರೀಫ್ ಗೆ ಸಣ್ಣಪುಟ್ಟಗಾಯಗಳಾಗಿದ್ದು ಮೆಗ್ಗಾನ್ ನಲ್ಲಿ ಹೊರರೋಗಿಯಾಗಿ ದಾಖಲಾಗಿ ಡಿಸ್ಚಾರ್ಜ್ ಆಗಿದ್ದಾರೆ.  ಕುಂಸಿ ಪೊಲೀಸ್…

Read Full News

ಪ್ರೀತಿಸುವಂತೆ ಮಧ್ಯ ರಸ್ತೆಯಲ್ಲಿ ವಿದ್ಯಾರ್ಥಿನಿಗೆ ಪಾಗಲ್ ಪ್ರೇಮಿಯಿಂದ ಕಿರುಕುಳ – ಆಸಿಡ್ ದಾಳಿಯ ಬೆದರಿಕೆ |ಪ್ರಕರಣ ದಾಖಲು|crime

ಶಿವಮೊಗ್ಗ ಜಿಲ್ಲೆಯ ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರೀತಿಸಬೇಕು ಎಂದು ಪಾಗಲ್ ಪ್ರೇಮಿಯೊಬ್ಬ ಹಿಂಸೆ ನೀಡಿದ ಹಿನ್ನಲೆಯಲ್ಲಿ ಶಿವಮೊಗ್ಗ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ.  ವಿದ್ಯಾರ್ಥಿನಿ ಕಾಲೇಜಿನ ಬಳಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ, ಆಕೆಯನ್ನು ಅಡ್ಡಗಟ್ಟಿದ ಯುವಕ ಆಕೆಗೆ ಪ್ರೀತಿಸಬೇಕು ಎಂದು ಹಿಂಸೆ ನೀಡಿದ್ದಾನೆ. ಅಲ್ಲದೆ ಪ್ರೀತಿಸದಿದ್ದರೇ ಆಸಿಡ್​ ಹಾಕುವುದಾಗಿ ಬೆದರಿಕೆಯನ್ನು ಸಹ ಒಡ್ಡಿದ್ದಾನೆ ಎನ್ನಲಾಗಿದೆ.  ಆಕೆಯ ಮೇಲೆ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಾನೆ. ತಕ್ಷಣ ಅಲ್ಲಿದ್ದ  ಸ್ಥಳೀಯರು ಸ್ಥಳಕ್ಕೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಜನ ಸೇರುತ್ತಲೇ ಎಸ್ಕೇಪ್​…

Read Full News

ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ – ಸರಣಿ ಕಳ್ಳತನ ಆರೋಪದಲ್ಲಿ ಕಬಾಬ್ ಗಣೇಶ್ ಬಂಧನ|theft

ಶಿವಮೊಗ್ಗ ಜಿಲ್ಲೆಯ ಹೊಸನಗರ ಪ್ರತಿಷ್ಟಿತ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಪಿಎಲ್‌ಡಿ ಬ್ಯಾಂಕ್ ಮುಂಭಾಗದ ಎರಡು ಬೀಗಗಳನ್ನು ಒಡೆದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಕಾಳಿಕಾಪುರದ ಕಬಾಬ್ ಗಣೇಶ್ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿ ಹಾಕಿಕೊಂಡಿರುವ ಆರೋಪಿಯಾಗಿದ್ದಾನೆ. ಹೊಸನಗರ ತಾಲ್ಲೂಕಿನಲ್ಲಿ ಸುಮಾರು ಎರಡು ತಿಂಗಳುಗಳಿಂದ ಕಪಿಲ ಫೈನಾನ್ಸ್, ವೀರಶೈವ ಪತ್ತಿನ ಸಹಕಾರ ಸಂಘ, ರಕ್ಷಿತಾ ಫೈನಾನ್ಸ್, ಪುನಃ ವೀರಶೈವ ಪತ್ತಿನ ಸಹಕಾರ ಸಂಘ, ನಗರ ನೀಲಕಂಠೇಶ್ವರ ಸೊಸೈಟಿ, ಪುರಪ್ಪೆಮನೆ ಸೊಸೈಟಿಗಳಲ್ಲಿ 15 ದಿನಗಳಿಗೊಮ್ಮೆ ಸಹಕಾರ ಸಂಸ್ಥೆಗಳ…

Read Full News

RIPPONPET : ಬಾರ್ ನಲ್ಲಿ ಬಿಲ್ ವಿಚಾರಕ್ಕೆ ಗಲಾಟೆ – ರಕ್ತಸಿಕ್ತವಾದ ಬಾರ್|ಪುಡಿಪುಡಿ -ಇಬ್ಬರ ವಿರುದ್ದ ಪ್ರಕರಣ ದಾಖಲು

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೋಡೂರಿನ ಕೀಳಂಬಿ ರಸ್ತೆಯಲ್ಲಿರುವ ಮೂಲಗಿರೀಶ್ ಬಾರ್ ಅಂಡ್ ರೆಸ್ಟೋರೆಂಟ್ ಬಿಲ್ ವಿಚಾರದಲ್ಲಿ ಮಾರಾಮಾರಿ ಗಲಾಟೆ ನಡೆದು ಬಾರ್ ರಕ್ತಸಿಕ್ತವಾದ ಘಟನೆ ಗುರುವಾರ ರಾತ್ರಿ ನಡೆದಿದೆ. ರಿಪ್ಪನ್‌ಪೇಟೆ ಸಮೀಪದ ಬಿಳಿಕಿ ಗ್ರಾಮದ ಕ್ರಾಂತಿ ಮತ್ತು ಸುದರ್ಶನ್ ಮೇಲೆ ಪ್ರಕರಣ ದಾಖಲಾಗಿದೆ. ಮದ್ಯ ಸೇವಿಸಲು ಬಾರ್ ಗೆ ಬಂದಿದ್ದ ಇಬ್ಬರು ಮದ್ಯ ಸೇವಿಸಿದ್ದಾರೆ.ನಂತರ ಬಿಲ್ ಪಾವತಿಸುವ ವೇಳೆಯಲ್ಲಿ ಕ್ಯಾಷಿಯರ್ ಜೊತೆ ಮಾತಿಗೆ ಮಾತು ನಡೆದು ಗಲಾಟೆ ಪ್ರಾರಂಭವಾಗಿದೆ. ಗಲಾಟೆಯಲ್ಲಿ ಮದ್ಯದ ಬಾಟಲಿಗಳನ್ನು ಒಡೆದು, ಬಾಗಿಲಿಗೆ…

Read Full News

ಲಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ..!!|deadbody

ತೀರ್ಥಹಳ್ಳಿ : ಪಟ್ಟಣದ ಹೊಸ ಕೋರ್ಟ್ ಬಳಿ  ಲಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. 4 ದಿನಗಳ ಹಿಂದೆಯೇ ಲಾರಿಯಲ್ಲೇ ಹೃದಯಾಘಾತದಿಂದ  ಸಾವನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯಿಂದ ಲಾರಿಯಲ್ಲಿ ಲೋಡ್ ತುಂಬಿಸಿಕೊಂಡು ಬಂದು ತೀರ್ಥಹಳ್ಳಿಯಲ್ಲಿ ಇಳಿಸಿ ರಾತ್ರಿ ಊಟ ಮಾಡಿ ಲಾರಿಯಲ್ಲಿ ಮಲಗಿದ್ದಾಗ ಹೃದಯಘಾತವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಅಂದಾಜು 50 ವರ್ಷದ ವ್ಯಕ್ತಿ ಎನ್ನಲಾಗುತಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜೆಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.  ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full News

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು|accident

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೇವಂಗಿ ಸಮೀಪದ ಬಾಣಂಕಿ ಬಳಿ ಶುಕ್ರವಾರ ರಾತ್ರಿ ಭೀಕರ ಕಾರು ಅಪಘಾತ ನಡೆದಿದೆ. ಶುಕ್ರವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ 5 ಮಹಿಳೆಯರು ಜೀವಾಪಾಯದಿಂದ ಪಾರಾಗಿದ್ದಾರೆ. ಕುಪ್ಪಳಿಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಟಾಟಾ ಹ್ಯಾರಿಯರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. 5 ಮಂದಿ ಮಹಿಳೆಯರಿದ್ದ ಕಾರಲ್ಲಿ ಒಬ್ಬರಿಗೆ ಗಂಭೀರ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯ ಆಗಿದೆ. ಎಲ್ಲರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ….

Read Full News

ಹುಂಚ ಸಮೀಪದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರ ವಿರುದ್ದ ಪೋಕ್ಸೋ ಪ್ರಕರಣ ದಾಖಲು|pocso

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.  ಕಳೆದೊಂದು ತಿಂಗಳ ಹಿಂದೆ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಅಸಭ್ಯವರ್ತನೆ ತೋರಿದ್ದು ನೊಂದ ಬಾಲಕಿ ತಾಯಿಯ ಬಳಿ ಘಟನೆಯ ವಿವರವನ್ನು ತಿಳಿಸಿದ್ದಾಳೆ. ಆಗ ಬಾಲಕಿಯ ತಾಯಿ ಶಾಲೆಯ ಶಿಕ್ಷಕಿಯಲ್ಲಿ ಶಿಕ್ಷಕನಿಗೆ ಬುದ್ದಿ ಹೇಳಲು ಹೇಳಿದ್ದಾರೆ. ಆದರೆ ಆದರೆ ಶಿಕ್ಷಕಿ ಘಟನೆಯ ಬಗ್ಗೆ ಪಾಲಕರಿಗೆ ಯಾವುದೇ ಮಾಹಿತಿ ನೀಡಿಲ್ಲ.  ಬಾಲಕಿಯ…

Read Full News

ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಲಾರಿ ಅಪಘಾತ – ಟ್ರಾಫಿಕ್ ಜಾಮ್ ನಿಂದ ಪರದಾಡಿದ ಪ್ರಯಾಣಿಕರು|agumbe

ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಅಪಘಾತ –  ಟ್ರಾಫಿಕ್ ಜಾಮ್ ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಲಾರಿ ಅಪಘಾತಕ್ಕಿಡಾಗಿದ್ದು ಘಾಟಿ ಸಂಚಾರದಲ್ಲಿ ಕಿ.ಮಿ.ಗಟ್ಟಲೇ ವಾಹನಗಳು ಗಂಟೆಗಟ್ಟಲೇ ನಿಂತು ಭಾರೀ ಸಮಸ್ಯೆಗೆ ಕಾರಣವಾಯಿತು. ಘಾಟಿಯ 9ನೇ ತಿರುವಿನಲ್ಲಿ ಘಾಟಿ ಇಳಿಯುತ್ತಿದ್ದ ವೇಳೆ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.  ಆದರೆ ಉಡುಪಿ ಭಾಗದಿಂದ ಹಾಗೂ ತೀರ್ಥಹಳ್ಳಿ ಮಾರ್ಗದಿಂದ ಹೋಗಿ ಬರುತಿದ್ದ ವಾಹನ ಸವಾರರು ಮತ್ತು ಪ್ರಯಾಣಿಕರು ಗಂಟೆಗಟ್ಟಲೆ ಪರದಾಟ ನಡೆಸಿದರು.

Read Full News

ಗಾಂಜಾ ಸೇವಿಸಿ ಅಸಭ್ಯವಾಗಿ ವರ್ತಿಸುತಿದ್ದ ಇಬ್ಬರು ಯುವಕರ ಬಂಧನ|arrest

ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಮಾರಿಗುಡ್ಡದ ಹೆಲಿಪ್ಯಾಡ್ ಬಳಿ ಇಬ್ಬರು ಗಾಂಜಾ ಸೇವನೆ ಮಾಡಿ ಅಸಭ್ಯವಾಗಿ ವರ್ತಿಸುತ್ತಿದ್ದು ಈ ಆರೋಪಿಗಳನ್ನು ಹೊಸನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಟ್ಟೆಮಲ್ಲಪ ಗ್ರಾಮದ ಫಯಾಜ್ ಬಿನ್ ಕರೀಂ ಸಾಬ್ ಹಾಗೂ ಮೊಹಮ್ಮದ್ ತಾಯಿಜ್ ಬಿನ್ ಮೊಹಮ್ಮದ್ ಎಂಬುವವರನ್ನು ಬಂಧಿಸಲಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ನೀರರಾಜ್ ನರಲಾರರವರ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿಗಳು ಕೇಸ್ ದಾಖಲಿಸಿಕೊಂಡು ತನಿಖೆ ಕಾರ್ಯ ಕೈಗೊಂಡಿದ್ದಾರೆ.

Read Full News

ರಿಪ್ಪನ್‌ಪೇಟೆ – ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ|deadbody

ರಿಪ್ಪನ್‌ಪೇಟೆ – ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ ರಿಪ್ಪನ್‌ಪೇಟೆ : ಇಲ್ಲಿನ ತೀರ್ಥಹಳ್ಳಿ ರಸ್ತೆಯ ಬೆಟ್ಟಿನಕೆರೆ ಗ್ರಾಮದ ಮನೆಯೊಂದರಲ್ಲಿ ಪುರುಷನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೆಟ್ಟಿನಕೆರೆ ನಿವಾಸಿ ಜೋಸ್ (ಆಲುವ) ಎಂಬ ವ್ಯಕ್ತಿ ಮೃತಪಟ್ಟಿದ್ದಾನೆ ಎನ್ನಲಾಗುತಿದೆ. ಈತನು ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದು ಪತ್ನಿ ಮತ್ತು ಮಕ್ಕಳು ಹಲವು ವರ್ಷಗಳ ಹಿಂದೆಯೇ ಈತನನ್ನು ಬಿಟ್ಟು ಹೋಗಿದ್ದರು. ಮನೆಯಲ್ಲಿ ಒಬ್ಬನೇ ವಾಸ ಮಾಡುತಿದ್ದ ಈತನು ನಾಲ್ಕು ದಿನಗಳ ಹಿಂದೆ ಈತ ಮೃತಪಟ್ಟಿರಬಹುದು ಎನ್ನಲಾಗುತ್ತಿದೆ. ಈತ ಮನೆಮನೆಗೆ…

Read Full News

ಡೆತ್ ನೋಟ್ ಬರೆದಿಟ್ಟು ಯಡಗುಡ್ಡೆ ಬೆಟ್ಟದ ಮೇಲೆ ಅಗ್ನಿಸ್ಪರ್ಶ ಮಾಡಿಕೊಂಡ ಮಹಿಳೆ…!!!! ಜ್ಯೋತಿಷಿ ಮಾತು ಕೇಳಿ ಮೋಕ್ಷ ಪ್ರಾಪ್ತಿಗೆ ಆತ್ಮಹತ್ಯೆ ಮಾಡಿಕೊಂಡರಾ ಜಯಶ್ರೀ…????ಈ ಸುದ್ದಿ ನೋಡಿ|sucide

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಯಡಗುಡ್ಡೆ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕಳೆದ ಸೋಮವಾರದಿಂದ ಹೊದಲ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಸಮೀಪದ ಹೊಸಳ್ಳಿ ಗ್ರಾಮದ ಜಯಶ್ರೀ (52) ಎಂಬುವರು ನಾಪತ್ತೆಯಾಗಿದ್ದರು.  ಜ. 23 ರಂದು ಸಂಜೆ ವಾಕಿಂಗ್ ಹೋದವರು ಮನೆಗೆ ಹಿಂದಿರುಗಿಲ್ಲ. ಎಂದು ದೂರು ದಾಖಲಾಗಿತ್ತು. ಜ. 27ರಂದು ಯಡಗುಡ್ಡೆ ಗ್ರಾಮದ ಗುಡ್ಡದ ಮೇಲೆ ಜಯಶ್ರೀ ಅವರ ಶವ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ….

Read Full News

ಕ್ಯಾಂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ – ಇಬ್ಬರಿಗೆ ತೀವ್ರ ಗಾಯ|accident

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪ ಕ್ಯಾಂಟರ್ ಹಾಗೂ ಕಾರಿನ ನಡುವೆ ಡಿಕ್ಕಿ…!!! ಸಾಗರ ತಾಲೂಕಿನ ಆನಂದಪುರ ಪೊಲೀಸ್ ಸ್ಟೇಷನ್ ಸಮೀಪದಲ್ಲಿ ಕ್ಯಾಂಟರ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಆನಂದಪುರದಿಂದ ಸಾಗರದ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಲಾರಿ ಹಾಗೂ ಸಿದ್ದೇಶ್ವರ ಕಾಲೋನಿಯಿಂದ ಆನಂದಪುರದ ಕಡೆಗೆ ಸಾಗುತ್ತಿದ್ದ ಮಾರುತಿ ಸ್ವಿಫ್ಟ್ ಕಾರಿನ(KA 17 M 9578)  ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಈ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರಿಗೆ ತೀವ್ರವಾದ ಗಾಯವಾಗಿದ್ದು…

Read Full News

ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ತೀರ್ಥಹಳ್ಳಿ ಮೂಲದ ರೋಗಿ|sucide

ಶಿವಮೊಗ್ಗ : ನಗರದ ಪ್ರತಿಷ್ಠಿತ ಮಾನಸಿಕ ಚಿಕಿತ್ಸಾ ಆಸ್ಪತ್ರೆಯಲ್ಲೇ ಮಾನಸಿಕ ಅಸ್ವಸ್ಥ ರೋಗಿಯೊಬ್ಬ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.  ಕಳೆದ 20 ವರ್ಷದಿಂದ ಮಾನಸಿಕ ಅಸ್ವಸ್ಥರಾಗಿದ್ದ ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರಿ ಗ್ರಾಮದ ಶ್ರೀನಿವಾಸ್ ರವರನ್ನು ವಾರದ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಹೋದರ ತಿಂಡಿ ತರಲು ಹೊರಗೆ ಹೋದಾಗ ಶ್ರೀನಿವಾಸ್‌ ಮೇಲೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಜ.29 ರಂದು ಆಸ್ಪತ್ರೆಗೆ ದಾಖಲಾದ ಶ್ರೀನಿವಾಸ್ ಆಸ್ಪತ್ರೆಯ ಖಾಲಿ ರೂಂ ಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ….

Read Full News

ಹೆರಿಗೆಯಾದ ಕೆಲವೇ ಗಂಟೆಗಳಲ್ಲಿ ನವಜಾತ ಶಿಶು ಸಾವು – ಆಸ್ಪತ್ರೆಯ ಗಾಜು ಒಡೆದು ಕುಟುಂಬಸ್ಥರ ಆಕ್ರೋಶ|hospital

ಶಿವಮೊಗ್ಗ: ನಗರದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲವೇ ಗಂಟೆಯಲ್ಲಿ ನವಜಾತ ಶಿಶು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವಿಗೀಡಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಪೂಜಿ ನಗರದ ಭಾಗ್ಯ ಮತ್ತು ನಾಗರಾಜ್ ದಂಪತಿಗಳಿಗೆ ಚೊಚ್ಚಲ ಗಂಡು ಮಗುವಿಗೆ ನಿನ್ನೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ತಕ್ಷಣ ತೂಕಹಾಕಿಲ್ಲ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರೇ ಸಾವಿಗೆ ಕಾರಣವಾಗಿದ್ದಾರೆ ಎಂದು ಪೋಷಕರು ಮತ್ತು ಪೋಷಕರ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಸಾವಿಗೆ ಮುಂಚೆ ವೈದ್ಯರು ಉಸಿರಾಟ ತೊಂದರೆ…

Read Full News

ಬಸ್ ಮತ್ತು ಬೈಕ್ ನಡುವೆ ಅಪಘಾತ – ಇಬ್ಬರು ಯುವಕರು ಸ್ಥಳದಲ್ಲೇ ಸಾವು|accident

ಶಿವಮೊಗ್ಗದ ಕುಂಸಿ ಬಳಿಯ ಕೆರೆ ಎರಿ ಮೇಲೆ ಶ್ರೀನಿವಾಸ್ ಬಸ್ ಹಾಗೂ ಬೈಕ್ ನಡುವೆ ರಸ್ತೆ ಅಪಘಾತ ವಾಗಿದ್ದು ಬೈಕ್ ಸವಾರರಿಬ್ಬರು ಸ್ಥಳದಲ್ಲೆ ಮೃತಪಟ್ಟ ಘಟನೆ ವರದಿಯಾಗಿದೆ. ಶಿವಮೊಗ್ಗದಿಂದ ಶಿಕಾರಿಪುರಕ್ಕೆ ಹೋಗುತ್ತಿದ್ದ ಶ್ರೀನಿವಾಸ್ ಬಸ್ ಹಾಗೂ ಹೊಸನಗರ ದಿಂದ ಶಿವಮೊಗ್ಗಕ್ಕೆ ಹೋಗುತ್ತಿದ್ದ ಬೈಕ್ ಗಳ ನಡುವೆ ಈ ಘಟನೆ ನಡೆದಿದೆ.  ಮೃತಪಟ್ಟ ಯುವಕರು ಶಿವಮೊಗ್ಗದ ಗುರುಪುರ ಮತ್ತು ಇಂದಿರಾ ನಗರದ ನಿವಾಸಿಗಳು ಎಂದು ತಿಳಿದು ಬಂದಿದೆ. ಮೃತದೇಹವನ್ನು ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.  ಸ್ಥಳಕ್ಕೆ ಕುಂಸಿ  ಠಾಣೆ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.