w
Headlines

KSRTC ಬಸ್ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಶಿವಮೊಗ್ಗ : ವೇಗವಾಗಿ ಆಗಮಿಸಿದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಮೊಪೆಡ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಬುಳ್ಳಾಪುರ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬುಳ್ಳಾಪುರ ಗ್ರಾಮದ ನಿವಾಸಿಯಾದ ಕರಿಬಸಪ್ಪ (65) ಮೃತಪಟ್ಟವರೆಂದು ಗುರುತಿಸಲಾಗಿದೆ. ಇವರ ಪುತ್ರ ಬಸವರಾಜ್ (35) ಅವರಿಗೆ ಗಾಯವಾಗಿದ್ದು, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕನ ಅಜಾಗರೂಕತೆ, ಮಿತಿಮೀರಿದ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಈ ಸಂಬಂಧ ಬಸ್ ಚಾಲಕನ…

Read Full News

ರಿಪ್ಪನ್‌ಪೇಟೆ : ಅಪ್ರಾಪ್ತ ಯುವತಿಯ ಮೇಲೆ ಯುವಕನಿಂದ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು|POCSO

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲಿ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ. ಬನಶೆಟ್ಟಿಕೊಪ್ಪ ಗ್ರಾಮದ ಮನೋಜ್ (22) ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ವಿವರ ಇಲ್ಲಿದೆ : ಸಂತ್ರಸ್ತ ಬಾಲಕಿಯ ತಂದೆ ತೀರಿಕೊಂಡಿದ್ದು ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಸದರಿಯವರ ತಂದೆ ತಾಯಿಗೆ 2 ಜನ ಮಕ್ಕಳಿದ್ದು ಹಿರಿಯವನು ಅಣ್ಣ ಡ್ರೈವಿಂಗ್ ಕೆಲಸ ಮಾಡಿಕೊಂಡಿರುತ್ತಾನೆ.ನೊಂದ ಬಾಲಕಿಯು ೨ ನೇ ತರಗತಿ ವರೆಗೆ ವಿದ್ಯಾಭ್ಯಾಸ…

Read Full News

ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತ|accident

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಅಪ್ಪಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದಿದೆ. ಬಟ್ಟೆಮಲ್ಲಪ್ಪ -ಹೊಸನಗರ ರಸ್ತೆಯ ಬ್ರಹ್ಮೇಶ್ವರ ಬಳಿ ಚಾಲಕನು ಅತಿ ವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಅಪ್ಪಳಿಸಿದೆ. ಶಿಕಾರಿಪುರ ಮೂಲದ ಕುಟುಂಬ ಮಾರುತಿ ಸುಜ಼ೂಕಿ ಗ್ರಾಂಡ್ ವಿಟಾರ ಕಾರಿನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಕಾರಿನ ಏರ್ ಬ್ಯಾಗ್ ತೆರೆದಿದ್ದರಿಂದ ಯಾವುದೇ ಹೆಚ್ಚಿನ ಅನಾಹುತವಾಗಿಲ್ಲ ಹೊಸನಗರ…

Read Full News

ರಿಪ್ಪನ್‌ಪೇಟೆ : ಪ್ರತಾಪನಿಂದ ಯುವಕನ ಮೇಲೆ ಹಲ್ಲೆ – ಪ್ರಕರಣ ದಾಖಲು|assault

ರಿಪ್ಪನ್‌ಪೇಟೆ : ಸಮೀಪದ ವಡಗೆರೆಯ ಪ್ರತಾಪ್ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಮತ್ತೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಘಟನೆಯ ಹಿನ್ನಲೆ: ಶುಕ್ರವಾರ ತಡರಾತ್ರಿ ವಡಗೆರೆ ನಿವಾಸಿ ಭರತ್ ಸಿಂಗ್ ಎಂಬಾತನು ಮನೆಯಲ್ಲಿ ಊಟಮಾಡಿಕೊಂಡು ತನ್ನ ಸ್ನೇಹಿತ ಬಾಲಾಜಿರವರ ಶುಂಠಿ ಕಾಯಲು ಮನೆಯ ಮುಂಭಾಗ ಹೋಗುತ್ತಿದ್ದಾಗ ಭರತ್ ಬೈಕ್ ಹತ್ತಿರ ಪ್ರತಾಪ್ ಸಿಂಗ್ ನಿಂತಿದ್ದು, ಯಾರು ಎಂದು ಕೇಳಿದ್ದಕೆ ಪ್ರತಾಪ್ ಸಿಂಗ್ ಏಕಾಏಕಿ ಭರತ್ ಮೇಲೆ ಅವಾಚ್ಯವಾಗಿ ನಿಂದಿಸಿ ಕೈಗಳಿಂದ ಹೊಡೆದು ನಂತರ ಅಲೆ ಇದ್ದ ದೊಣ್ಣೆಯಿಂದ…

Read Full News

ರಿಪ್ಪನ್‌ಪೇಟೆ ಸಮೀಪದ ನೆವಟೂರಿನಲ್ಲಿ ಚಲಿಸುತಿದ್ದ ರೈಲಿಗೆ ಸಿಲುಕಿ ವ್ಯಕ್ತಿ ಸಾವು|train

ಚಲಿಸುತಿದ್ದ ರೈಲಿಗೆ ಸಿಲುಕಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಇಂದು ಬೆಳಗ್ಗೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನೆವಟೂರು ಗ್ರಾಮದಲ್ಲಿ ನಡೆದಿದೆ. ನೆವಟೂರು ನಿವಾಸಿ ಸುರೇಶ್ ಆಚಾರಿ (43) ಮೃತಪಟ್ಟ ವ್ಯಕ್ತಿಯಾಗಿದ್ದಾರೆ.  ಇಂದು ಬೆಳಗ್ಗೆ 6 ಗಂಟೆಯ ಸುಮಾರಿಗೆ ನೆವಟೂರು ಬಳಿ ಈ ಘಟನೆ ನಡೆದಿದೆ ಎನ್ನಲಾಗುತಿದ್ದು ಯಾವ ರೈಲು ಹಾಗೂ ಘಟನೆಗೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ. ಮೃತದೇಹವನ್ನು ಸಾಗರದ ಉಪವಿಭಾಗೀಯ ಆಸ್ಪತೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನೆವಟೂರಿನ ಮೃತರ ಮನೆಗೆ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ…

Read Full News

ರಿಪ್ಪನ್‌ಪೇಟೆ – ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ವಶ|illegal mining

ರಿಪ್ಪನ್‌ಪೇಟೆ : ಸಮೀಪದ ಕೋಟೆತಾರಿಗ ಗ್ರಾಮದಲ್ಲಿ ಅಕ್ರಮ ಮರಳು ಸಾಗಿಸುತಿದ್ದ ಟಿಪ್ಪರ್ ಲಾರಿಯನ್ನು ರಿಪ್ಪನ್‌ಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ರಾತ್ರಿ ಕೋಟೆತಾರಿಗದಲ್ಲಿ ಗಸ್ತು ತಿರುಗುತಿದ್ದಾಗ ಕೋಟೆತಾರಿಗ ಬಸ್ ನಿಲ್ದಾಣದ ಬಳಿ ಅಕ್ರಮವಾಗಿ ಮರಳು ಸಾಗಿಸುತಿದ್ದ  ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ತುಂಬಿಕೊಂಡು ಹೊಸನಗರದಿಂದ ಕೋಟೆತಾರಿಗ ಮಾರ್ಗವಾಗಿ ಸಾಗಿಸುತ್ತಿದ್ದ  KA 42 A 4115 ನೋಂದಣಿ ಸಂಖ್ಯೆಯ ಟಿಪ್ಪರ್ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್ ಐ ಶಿವಾನಂದ್ ಕೆ, ಹೆಚ್ ಸಿ…

Read Full News

ಜಂಬಳ್ಳಿ ತಿರುವಿನಲ್ಲಿ ಅಪಘಾತ – ಮಾನವೀಯತೆ ಮೆರೆದ ಆರಗ ಜ್ಞಾನೇಂದ್ರ|accident

ತೀರ್ಥಹಳ್ಳಿ : ಅಡ್ಡ ಬಂದ ಹಸುವನ್ನ ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದ್ದು ಗಾಯಗೊಂಡಿದ್ದ ಬೈಕ್ ಸವಾರನನ್ನು ಗೃಹ ಸಚಿವರ ಬೆಂಗಾವಲು ವಾಹನದಲ್ಲಿ ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 169 ರ ಶಿವಮೊಗ್ಗ ಮತ್ತು ತೀರ್ಥಹಳ್ಳಿ ನಡುವಿನ  ತೂದುರು ಸಮೀಪದ ಜಂಬಳ್ಳಿ ತಿರುವಿನಲ್ಲಿ ಹಸುವೊಂದು ಅಡ್ಡ ಬಂದಿದ್ದರ ಪರಿಣಾಮ ಮಂಡಗದ್ದೆ ಸಮೀಪದ ಸಿಂಗನಬಿದರೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳಗ ಗ್ರಾಮದ ಬೈಕ್ ಸವಾರ ಮನೋಜ್ ಹಸುವನ್ನು ತಪ್ಪಿಸಲು ಹೋಗಿ ಅಪಘಾತಕ್ಕಿಡಾಗಿದ್ದಾರೆ.  ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ …

Read Full News

ಕೊಲೆ ಮಾಡಿ ಶವವನ್ನು ಬೈಕಿನಲ್ಲಿ ಕೂರಿಸಿಕೊಂಡು ಬಂದು ಸರ್ಕಲ್ ನಲ್ಲಿ ಮಲಗಿಸಿ ಹೋದ ಆರೋಪಿಗಳು – ಅನೈತಿಕ ಸಂಬಂಧದ ಶಂಕೆ|crime news

ದ್ವಿಚಕ್ರ ವಾಹನದಲ್ಲಿ ವ್ಯಕ್ತಿಯ ಶವವನ್ನು ಕೂರಿಸಿಕೊಂಡು ಬಂದು ಊರಿನ ಸರ್ಕಲ್ ನಲ್ಲಿ ಮಲಗಿಸಿ ಹೋಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ತಾಲೂಕಿನ ಮುತ್ತಳ್ಳಿ ಗ್ರಾಮದಲ್ಲಿ ನಡೆದಿದೆ.ಇದು ಕೊಲೆ ಎಂದು ಕುಟುಂಬ ಆರೋಪಿಸಿದೆ. ಘಟನೆಯ ಹಿನ್ನಲೆ :  ಶಿರಾಳಕೊಪ್ಪ ಪೊಲೀಸ್ ಠಾಣೆಯ ಮುತ್ತಳ್ಳಿ ಗ್ರಾಮದಲ್ಲಿ ಕೃಷಿ ಕಾರ್ಮಿಕನಾಗಿರುವ ಸೋಮಪ್ಪ(30) ಈತನಿಗೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಗಂಗಮ್ಮ ಎಂಬ ಮಹಿಳೆಯೊಂದಿಗೆ ಸ್ನೇಹವಿದ್ದು, ಆಕೆಯೇ ಕರೆಯಿಸಿ ಸೋಮಪ್ಪನನ್ನ ಕೊಲೆ ಮಾಡಿ ಕಳುಹಿಸಿರುವುದಾಗಿ ಮೃತನ‌ ಕುಟುಂಬ ಆರೋಪಿಸಿದೆ. ಸೋಮಪ್ಪ ಈ ಹಿಂದೆ ಕೆಲಸದ…

Read Full News

ಆಗುಂಬೆ ಘಾಟಿಯಲ್ಲಿ ಖಾಸಗಿ ಬಸ್ ಬ್ರೇಕ್ ವಿಫಲ – ಮರಕ್ಕೆ ಡಿಕ್ಕಿ|ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ|accident

ಆಗುಂಬೆ : ಪ್ರವಾಸಿಗರನ್ನು ಕರೆದೊಯ್ಯುತಿದ್ದ ಖಾಸಗಿ ಬಸ್ ಆಗುಂಬೆ ಘಾಟಿಯ 12 ನೇ ತಿರುವಿನಲ್ಲಿ ಬ್ರೇಕ್ ವಿಫಲವಾಗಿ‌ಮರಕ್ಕೆ ಡಿಕ್ಕಿ ಹೊಡೆದ ಘಟನೆ ಇಂದು ಸಂಜೆ ನಡೆದಿದೆ. ಘಾಟಿ ರಸ್ತೆಯ 11ನೇ ತಿರುವಿನಲ್ಲಿ ಖಾಸಗಿ ಮಿನಿ ಬಸ್ ಬ್ರೇಕ್ ವೈಫಲ್ಯಗೊಂಡಿದ್ದು ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ದೊಡ್ಡ ದುರಂತ ತಪ್ಪಿದೆ. 12ನೇ ತಿರುವಿನಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಬಸ್ ನಿಂತಿದೆ. ಬಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ 20 ಜನರಿದ್ದು ಹಲವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು…

Read Full News

ರಿಪ್ಪನ್‌ಪೇಟೆ : ಚಲಿಸುತಿದ್ದ ಬೈಕ್ ಮೇಲೆ ಬಿದ್ದ ಬೃಹತ್ ಮರ – ಓರ್ವನ ಸ್ಥಿತಿ ಗಂಭೀರ,ಮೆಗ್ಗಾನ್ ಗೆ ದಾಖಲು|accident

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಮೂಗೂಡ್ತಿ ಗ್ರಾಮದಲ್ಲಿ ಚಲಿಸುತಿದ್ದ ಬೈಕ್ ಮೇಲೆ ಮರ ಬಿದ್ದು ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ. ಮೂಗೂಡ್ತಿ – ತಳಲೆ ಮಾರ್ಗದಲ್ಲಿ ಬೈಕ್ ನಲ್ಲಿ ತೆರಳುತಿದ್ದ ಸುಳಗೋಡು ಗ್ರಾಮದ ನಿವಾಸಿ ಮಂಜುನಾಥ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ.ಬೈಕ್ ಸವಾರ ಕುಮಾರ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಳಲೆ ಮಾರ್ಗದ ಇಳಿಜಾರಿನಲ್ಲಿ ಚಲಿಸುತಿದ್ದ ಬೈಕ್ ಮೇಲೆ ಬೃಹತ್ ಮರ ಬಿದ್ದ ಹಿನ್ನಲೆಯಲ್ಲಿ ಬೈಕ್ ನಲ್ಲಿ ತೆರಳುತಿದ್ದ ಇಬ್ಬರು ಸಿಲುಕಿ ಕೊಂಡಿದ್ದಾರೆ ತಕ್ಷಣ ಸ್ಥಳೀಯರು ಹಾಗೂ…

Read Full News

Crime News – ಅಡಿಕೆ ಮಂಡಿ ವರ್ತಕನ ಪತ್ನಿ ನೇಣಿಗೆ ಶರಣು

ಶಿವಮೊಗ್ಗ ನಗರದ ಅಡಿಕೆ ಮಂಡಿ ವರ್ತಕರೊಬ್ಬರ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ನಗರದ ಅಡಿಕೆ ಮಂಡಿ ವರ್ತಕ ಪ್ರಶಾಂತ್‌ ಎನ್ನುವವರ ಪತ್ನಿ ಶ್ವೇತಾ (40) ನೇಣಿಗೆ ಶರಣಾದ ಮಹಿಳೆಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಡಿಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಇನ್ನು ಸಾವಿಗೆ ಪತಿಯ ಸಾಲ ಹಾಗೂ ಜಮೀನು ಮಾರಾಟದ ವಿಷಯವೇ ಕಾರಣ ಎಂದು ಹೇಳಲಾಗುತ್ತಿದೆ.  ಸಂಸಾರದಲ್ಲಿ ಅದೇನು ಕಲಹವಿತ್ತೋ ಗೊತ್ತಿಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಘಟನೆ ಕುರಿತು…

Read Full News

ಹೊಸನಗರ : ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಒಂದು ವರ್ಷದ ಮಗು ಸಾವು|sonale

ಹೊಸನಗರ : ನೀರು ತುಂಬಿದ ಬಕೆಟ್‌ಗೆ ಬಿದ್ದು ಒಂದು ವರ್ಷದ ಗಂಡು ಮಗು ಮೃತಪಟ್ಟಿರುವ ಘಟನೆ ತಾಲೂಕಿನ ಸೋನಲೆ ಗ್ರಾ.ಪಂ ವ್ಯಾಪ್ತಿಯ ಹೊಸಕೊಪ್ಪ ಎಂಬಲ್ಲಿ ನಡೆದಿದೆ. ಕೂಲಿ ಕೆಲಸಗಾರರಾದ ಹರೀಶ್ ಹಾಗೂ ವೀಣಾ ದಂಪತಿಗಳ ಒಂದು ವರ್ಷ ಒಂದು ತಿಂಗಳ ಸಂಕೇತ್ ಎಂಬ ಮಗು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಪೋಷಕರು ಬಕೆಟ್‌ನಲ್ಲಿ ನೀರು ಹಾಕಿ ಆಗಾಗ ಮಗುವಿಗೆ ಆಟವಾಡಿಸುವ ಅಭ್ಯಾಸ ಹೊಂದಿದ್ದರು ಎಂದು ತಿಳಿದುಬಂದಿದೆ.  ಆದರೆ ಇಂದು ದುರಂತವೆಂದರೆ ದನಗಳಿಗೆ ಕುಡಿಯಲು ಇಟ್ಟಿದ್ದ ಅರ್ಧ ಬಕೆಟ್ ನೀರಿನಲ್ಲಿ ಮಗು.ತಲೆಕೆಳಗಾಗಿ…

Read Full News

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವನ ಸ್ಥಿತಿ ಗಂಭೀರ : ಸಮಯಪ್ರಜ್ಞೆ ಮೆರೆದ ಎಸ್ಕಾರ್ಟ್ ಸಿಬ್ಬಂದಿ|Accident

ಶಿವಮೊಗ್ಗ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.  ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್ ಸವಾರರನ್ನ ಎಸ್ಕಾರ್ಟ್ ಪೊಲೀಸರಿಬ್ಬರು ಮೆಗ್ಗಾನ್ ಗೆ ತಮ್ಮ ವಾಹನದಲ್ಲಿಯೇ ಕೂರಿಸಿಕೊಂಡು ಬಂದು ದಾಖಲಿಸಿ ಕರ್ತವ್ಯ ಮತ್ತು ಮಾನವೀಯತೆ ಮೆರೆದಿದ್ದಾರೆ. ಅಬ್ಬಲಗೆರೆಯ ದೇವಸ್ಥಾನದ ಎದುರು ಎರಡು ಬೈಕ್ ನಡುವೆ ಡಿಕ್ಕಿಯಾಗಿದ್ದು ಡಿಕ್ಕಿಯಲ್ಲಿ ಗಾಯಗೊಂಡವರನ್ನ ಜಗದೀಶ್ ನಾಯ್ಕ್ ಮತ್ತು ಮಂಜು ಎಂದು ಗುರುತಿಸಲಾಗಿದೆ. ಜಗದೀಶ್ ನಾಯ್ಕ್ ರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ನಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ….

Read Full News

ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು|airport

ಶಿವಮೊಗ್ಗ : ಇಂದು ಅದ್ಧೂರಿಯಾಗಿ ನಡೆದ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸೊರಬ ತಾಲೂಕಿನ ಚಿಮ್ಮನೂರು ಗ್ರಾಮದ ಮಲ್ಲಿಕಾರ್ಜುನಪ್ಪ (50) ಎಂಬವರೇ ಮೃತಪಟ್ಟವರು. ಸೊರಬದ ಕಡೆಯಿಂದ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಇತರರು ಕಾರ್ಯಕ್ರಮಕ್ಕೆ ಬಂದಿದ್ದರು. ಮಲ್ಲಿಕಾರ್ಜುನ ಅವರು ಬೆಳಗ್ಗೆ ಗ್ರಾಮಸ್ಥರೊಂದಿಗೆ ಬಸ್ಸಿನಲ್ಲಿ ಬಂದಿದ್ದರು. ಕಾರ್ಯಕ್ರಮ ಮುಗಿಸಿ ವಾಪಸಾಗುವಾಗ ಸೋಗಾನೆ ಗ್ರಾಮದ ಕೆಇಬಿ ಕಚೇರಿ ಹತ್ತಿರ ಮಲ್ಲಿಕಾರ್ಜುನ ಅವರು ಅಸ್ವಸ್ಥರಾದರು. ಬಾಯಾರಿಕೆಯಿಂದ ನೀರು ಕೇಳಿದ್ದ ಮಲ್ಲಿಕಾರ್ಜುನ ಅವರು…

Read Full News

ರಿಪ್ಪನ್‌ಪೇಟೆ : ದೇವಸ್ಥಾನದ ಬೀಗ ಮುರಿದು ಸಾವಿರಾರು ರೂ ಕಳ್ಳತನ|theft

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಿವುಣೆ ಗ್ರಾಮದ ಶ್ರೀ ಕಲಾನಾಥೇಶ್ವರ ದೇವಸ್ಥಾನ ಬೀಗ ಮುರಿದು ಕಳ್ಳತನ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಕಳ್ಳರು ರಾತ್ರಿಯ ವೇಳೆಯಲ್ಲಿ ದೇವಸ್ಥಾನದ ಮುಂಭಾಗಿಲಿನ ಬೀಗ ಮುರಿದು ದೇವಸ್ಥಾನದ ಒಳಭಾಗಕ್ಕೆ ಪ್ರವೇಶಿಸಿ ದೇವರ ಮುಂಭಾಗದಲಿದ್ದ ಒಂದು ಕಬ್ಬಿಣದ ಮತ್ತು ಸ್ಟೀಲ್ ನ ಕಾಣಿಕೆ ಡಬ್ಬಿಗಳನ್ನು ದೇವಸ್ಥಾನದ ಹೊರಭಾಗ ಎತ್ತಿಕೊಂಡು ಹೋಗಿ ಅಲ್ಲಿ ಅವುಗಳ ಬೀಗವನ್ನು ಮುರಿದು ಅದರ ಒಳಭಾಗದಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಕಾಣಿಕೆ ಡಬ್ಬಿಗಳು…

Read Full News

ಆನಂದಪುರ ಸಮೀಪದ ಕೆಂಜಿಗಾಪುರದಲ್ಲಿ ಒಂಟಿ ಮನೆ ದರೋಡೆ – ಒಂದೇ ವಾರದಲ್ಲಿ ಎರಡು ಬಾರಿ ದರೋಡೆಗೊಳಗಾದ ಭಟ್ಟರ ಮನೆ|Robbery

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆತಂಕ ಮೂಡಿಸುವಂತಹ ದರೋಡೆ ಪ್ರಕರಣವೊಂದು ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ. ಆನಂದಪುರ ಸಮೀಪದ ಕೆಂಜಿಗಾಪುರ ಭಟ್ಟರೊಬ್ಬರ ಮನೆಯಲ್ಲಿ ರಾಬರಿ ನಡೆದಿದೆ. ಎಫ್​ಐಆರ್​ನಲ್ಲಿ ದಾಖಲಾಗಿರುವ ಪ್ರಕಾರ ಎರಡು ಸಲ ರಾಬರಿ ನಡೆದಿದೆ. ಸ್ಥಳೀಯರು ಹೇಳುವ ಪ್ರಕಾರ ಮೂರು ಸಲ ನಡೆದಿರಬಹುದು ಎನ್ನಲಾಗುತ್ತದೆ.  ಒಂದೇ ಮನೆಯನ್ನು ಟಾರ್ಗೆಟ್ ಮಾಡಿ ಕೇವಲ ಒಂದು ವಾರದಲ್ಲಿ ಎರಡು ಸಲ ರಾಬರಿ ಮಾಡಲಾಗಿದೆ.  ಹಿರಿಯ ವೃದ್ಧರನ್ನ ಕೈ ಕಾಲು ಕಟ್ಟಿ ರಾಬರಿ ಮಾಡಿ ಹೋಗುತ್ತಿರುವವರು ಯಾರು?…

Read Full News

ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ – ಇಬ್ಬರು ವಶಕ್ಕೆ|excise

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬೆಳ್ಳೂರು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಎರಡು ಅಂಗಡಿಗಳ ಮೇಲೆ ಪಟ್ಟಣದ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಬೆಳ್ಳೂರು ಗ್ರಾಮದ ಬಂಗ್ಲಿದಿಬ್ಬ ಸರ್ಕಲ್ ನಲ್ಲಿರುವ ದಿನಸಿ ಅಂಗಡಿ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಚಂದ್ರಪ್ಪ ಎಂಬಾತನನ್ನು ವಶಕ್ಕೆ ಪಡೆದು ಅಕ್ರಮ ಮದ್ಯವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಬೆಳ್ಳೂರು ಗ್ರಾಮದ ಕೋಳಿ ಅಂಗಡಿ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ…

Read Full News

ರಿಪ್ಪನ್‌ಪೇಟೆ : ನುಗ್ಗೆಕಾಯಿ ಕಿತ್ತ ವಿಚಾರದಲ್ಲಿ ಗಲಾಟೆ – ಒಬ್ಬನಿಗೆ ಮೂವರಿಂದ ಹಲ್ಲೆ,ಜೀವಬೆದರಿಕೆ|Assault

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮದಲ್ಲಿ ನುಗ್ಗೆಕಾಯಿ ವಿಚಾರಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆಯೊಂದು ನಡೆದಿದೆ.  ಸೋಮವಾರ ಸಂಜೆ ಕೆಂಚನಾಲ ಗ್ರಾಮದ ರಾಮ್ ಕುಮಾರ್  ರಿಪ್ಪನ್​ಪೇಟೆಗೆ ಹೋಗಿ ವಾಪಸ್​ ಮನೆಗೆ ಬರುವಾಗ, ಅದೇ ಗ್ರಾಮದ ನಿವಾಸಿ  ನಾಗೇಶ್ ತನ್ನ ಮನೆ ಹಿತ್ತಲಿನಲ್ಲಿ  ಬೆಳೆದಿದ್ದ ನುಗ್ಗೆಕಾಯಿಯನ್ನು ಕೀಳುತ್ತಿರುವುದು ಕಾಣಿಸಿದೆ. ಸಹಜವಾಗಿಯೇ ನಮ್ಮನೆಯ ಹಿತ್ಲಿಂದ ಯಾಕೆ ನುಗ್ಗೆಕಾಯಿ ಕಿತ್ಕೊಂಡು ಹೋಗ್ತಿದ್ದಿಯಾ, ಹೇಳೋದು ಕೇಳೋದು ಏನು ಇಲ್ವಾ ಎಂದು ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಸಿಟ್ಟಾದ ವ್ಯಕ್ತಿ ಅದು ನಿನ್ನ…

Read Full News

ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು|robbery

ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ನಗರದ ವಿನೋಬನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರಕಾಸ್ತ್ರಗಳೊಂದಿಗೆ ಒಬ್ಬಂಟಿಯಾಗಿ ಬರುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಖತರ್ ನಾಕ್ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ಬಸವನ ಗಂಗೂರು ಚಾನೆಲ್ ಮೇಲೆ ಬೊಮ್ಮನ್ ಕಟ್ಟೆಯ ಅನಿಲ್ ಕುಮಾರ್(42), ಕೋಹಳ್ಳಿಯ ಶಿವನಾಯ್ಕ (34), ಆಯನೂರಿನ ಶಿವಕುಮಾರ್ (45) ಮತ್ತು ಸಿರಿಗೆರೆಯ ಖಲೀಂ ಬಂಧಿತ ಆರೋಪಿಗಳು. ಈ ದರೋಡೆ ಸಂಚಿನ ಬಗ್ಗೆ ಮಾಹಿತಿ ತಿಳಿದ ವಿನೋಬನಗರ ಪಿಎಸ್ಐ ಸಾಗರ್ಕರ್ ನೇತೃತ್ವದಲ್ಲಿ ಪೊಲೀಸರ ತಂಡ…

Read Full News

ತುಂಗಾ ನದಿಯಲ್ಲಿ ಯುವಕನ ಶವ ಪತ್ತೆ – ಆತ್ಮಹತ್ಯೆ ಶಂಕೆ|TUNGA

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನಾನಿ ಬಳಿಯ ಹಿಂಭಾಗದ ತುಂಗಾ ನದಿಯಲ್ಲಿ ಭಾನುವಾರ ತೆಂಗಿನ ಕೊಪ್ಪದ ಯುವಕನ ಶವ ಪತ್ತೆಯಾಗಿದೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜತ್(26) ಮೃತಪಟ್ಟ ಯುವಕ. ಸಾಲೂರು ಹೊಸಮನೆ ತೆಂಗಿನಕೊಪ್ಪದ ಪ್ರಜತ್  4 ವರ್ಷದ ಹಿಂದೆ ಹಾವು ಕಚ್ಚಿದ ಕಾರಣ ತಾಯಿಯನ್ನು ಕಳೆದುಕೊಂಡಿದ್ದರು ಹಾಗೂ ತಂದೆ ಕೂಡ ಕ್ಯಾನ್ಸರ್ ರೋಗಕ್ಕೆ ಇತ್ತೀಚಿಗೆ ಬಲಿಯಾಗಿದ್ದರು. ಪ್ರಜತ್ ಸಾಲದ ಕಾರಣ ಹಾಗೂ ಒಳ್ಳೆಯ ಉದ್ಯೋಗ ಇಲ್ಲದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗುತ್ತಿದೆ….

Read Full News

ಈಜಲು ಹೋದ ಎಂಬಿಬಿಎಸ್ ವಿದ್ಯಾರ್ಥಿ ಶವವಾಗಿ ಪತ್ತೆ|death

ಶಿವರಾತ್ರಿಯ ನಿಮಿತ್ತ ಜಾಲಿ ಮೂಡ್ ನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದಕ್ಕೆ ಆಘಾತವಾಗಿದೆ ಶಿವಮೊಗ್ಗ ಜಿಲ್ಲೆಯ ಭದ್ರಾ ಚೆಕ್ ಡ್ಯಾಂ ನ ನೀರಿನಲ್ಲಿ ಈಜಲು ಹೋಗಿದ್ದ ಸಿಮ್ಸ್ ನ ವಿದ್ಯಾರ್ಥಿ ನೀರುಪಾಲಾಗಿ ಶವವಾಗಿ ಪತ್ತೆಯಾಗಿರುವ ಘಟನೆ ಇಂದು ನಡೆದಿದೆ. ಭದ್ರಾ ನದಿಯ ಗೋಂದಿ ಚೆಕ್ ಡ್ಯಾಂಗೆ ಶಿವಮೊಗ್ಗದ ಸಿಮ್ಸ್ ನ ವಿದ್ಯಾರ್ಥಿ ಜಗತ್ ಮತ್ತು ಇತರೆ ಐವರು ಸ್ನೇಹಿತರು ಈಜಲು ತೆರಳಿದ್ದಾರೆ. ಜಗತ್(21) ಜೊತೆಗೆ  ಓರ್ವ ನೀರಿಗೆ ಇಳಿದಿದ್ದಾನೆ. ಜಗತ್ ನೀರಿನಲ್ಲಿ ಮುಂದೆ ಹೋಗಿದ್ದು ಆಳವಿದ್ದುದ್ದರಿಂದ ನೀರಿನಲ್ಲಿ ಮುಳುಗಿದವನು ಮೇಲೆ…

Read Full News

ಚಲಿಸುತಿದ್ದ ರೈಲಿನಿಂದ ಕೆಳಗೆ ಬಿದ್ದು ರಿಪ್ಪನ್‌ಪೇಟೆಯ ಸರ್ಕಾರಿ ವೈದ್ಯ ಸಾವು|accident

ರಿಪ್ಪನ್‌ಪೇಟೆ : ತುಮಕೂರು ಜಿಲ್ಲೆಯ ಕ್ಯಾತಸಂದ್ರ ಬಳಿ ಚಲಿಸುತಿದ್ದ ರೈಲಿನಿಂದ ಬಿದ್ದು ಪಟ್ಟಣದ ಶಬರೀಶನಗರದ ವೈದ್ಯರೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಬರೀಶನಗರದ ಡಾ. ಗುರುರಾಜ್ ((46) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಶುಕ್ರವಾರ ಬೆಂಗಳೂರಿನಿಂದ – ಶಿವಮೊಗ್ಗಕ್ಕೆ ರೈಲಿನಲ್ಲಿ ಸಂಚರಿಸುತಿದ್ದಾಗ ಕ್ಯಾತಸಂದ್ರದ ಬಳಿ ರೈಲಿನ ಬಾಗಿಲು ತಾಗಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗುತಿದೆ. ಡಾ. ಗುರುರಾಜ್ ರಿಪ್ಪನ್‌ಪೇಟೆ,ಹೊಸನಗರ ಮತ್ತು ಗೌತಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು.ಪ್ರಸ್ತುತ ಸಂಪೆಕಟ್ಟೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯ ನಿರ್ವಹಿಸುತಿದ್ದರು.ಇತ್ತೀಚಿಗೆ ಕೊಡಗು ಜಿಲ್ಲೆಯಲ್ಲಿ…

Read Full News

ಶಿವಮೊಗ್ಗ ಜೈಲಿನಲ್ಲಿ ಮಾರಾಮಾರಿ : ಒಬ್ಬನಿಗೆ ಆರು ಜನರಿಂದ ಥಳಿತ|jail

ಶಿವಮೊಗ್ಗ : ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮೇಲೆ ಹಳೇ ದ್ವೇಷದಿಂದ ಇತರ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ. ನಾಗರಾಜ್ ಎಂಬ ವಿಚಾರಣಾಧೀನ ಕೈದಿ ಮೇಲೆ ಸಚಿನ್ ಅಲಿಯಾಸ್ ಸ್ಯಾಡೋ, ದರ್ಶನ್, ಪರಶುರಾಮ, ಅನಿಲ್‌ಕುಮಾರ್, ವಿಶ್ವನಾಥ, ವಿಶಾಲ್ ಎಂಬುವರು ಹಲ್ಲೆ ಮಾಡಿದ್ದಾರೆ. ನಾಗರಾಜ್ ಭದ್ರಾವತಿಯ ಎರಡನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಲು ಜೈಲಿನಲ್ಲಿರುವ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುವಾಗ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ. ಸ್ಥಳದಲ್ಲಿದ್ದ ಜೈಲು ನಿರೀಕ್ಷಕ ಆತ್ಮಾನಂದ ಕುದರಿ ಮತ್ತು…

Read Full News

ಸಾಗರ : ಐಗಿನಬೈಲ್ ಬಳಿ ದ್ವಿಚಕ್ರ ಹಾಗೂ ಕಾರಿನ ನಡುವೆ ಡಿಕ್ಕಿ – ಯುವತಿ ಸ್ಥಳದಲ್ಲೇ ಸಾವು|accident

ಕಾರು ಮತ್ತು ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ ನಡೆದು ಸ್ಥಳದಲ್ಲೇ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಸಾಗರ ತಾಲೂಕಿನ ಉಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಗಿನಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ 24 ವರ್ಷದ ಯುವತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಶೃತಿ(24) ಮೃತಪಟ್ಟಿರುವ ಯುವತಿಯಾಗಿದ್ದು  ಶಿವಮೊಗ್ಗದ ಸಿಟಿ ಸೆಂಟರ್ ನಲ್ಲಿ ಸೆಕ್ಯೂರಿಟಿ ಗಾರ್ಡಾಗಿ…

Read Full News

ರಿಪ್ಪನ್‌ಪೇಟೆ : KSRTC ಬಸ್ ಗೆ ಹಿಂಬದಿಯಿಂದ ಬೈಕ್ ಡಿಕ್ಕಿ – ಗಂಭಿರ ಗಾಯಗೊಂಡಿದ್ದ ಬೈಕ್ ಸವಾರ ಮೆಗ್ಗಾನ್ ಗೆ ರವಾನೆ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಗವಟೂರು ಬಳಿ ಚಲಿಸುತಿದ್ದ ಕೆ ಎಸ್ ಆರ್ ಟಿಸಿ ಬಸ್ ಗೆ ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆದು ಓರ್ವ ವ್ಯಕ್ತಿಗೆ ಗಂಭೀರ ಪೆಟ್ಟಾಗಿರುವ ಘಟನೆ ನಡೆದಿದೆ. ಬೈಕ್ ಸವಾರ ದಾನಪ್ಪ(68) ಗಂಭೀರ ಗಾಯಗೊಂಡಿದ್ದಾರೆ. ಭಟ್ಕಳ – ಬೆಂಗಳೂರು ಮಾರ್ಗದ ಕೆ ಎಸ್ ಆರ್ ಟಿಸಿ ಬಸ್ ಚಾಲಕ ಗವಟೂರು ಬಳಿ ಎದುರುಗಡೆ ವಾಹನ ಬಂದ ಹಿನ್ನಲೆಯಲ್ಲಿ ಬ್ರೇಕ್ ಹಾಕಿದ್ದಾನೆ ಹಿಂಬದಿ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಬರುತಿದ್ದ ಚಾಲಕ ಬಸ್ ಗೆ…

Read Full News

ಶಿವಮೊಗ್ಗ-ಆಯನೂರು ಹೆದ್ದಾರಿಯಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ|Robbery

ಮಾರಿ ಜಾತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ಹಾಡಹಗಲೇ ನಗ – ನಗದು ಅಪಹರಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ ಸಮೀಪ ನಡೆದಿದೆ. ಶಿವವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಬರುವ ಟ್ರೀಪಾರ್ಕ್​ನ ಸಮೀಪ ದರೋಡೆಯೊಂದು (Dacoity) ನಡೆದಿರುವ ಬಗ್ಗೆ ವರದಿಯಾಗಿದೆ. ತರಿಕೆರೆಯ ವಸಂತ್ ಎಂಬವರು ಕಾರಿನಲ್ಲಿ ಮಾರಿಜಾತ್ರೆಗೆ ಹೋಗುತ್ತಿದ್ದ  ವೇಳೆ ಅವರನ್ನು ಟ್ರೀಪಾರ್ಕ್​ ಬಳಿ ಅಡ್ಡಗಟ್ಟಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದವರನ್ನ ತಡೆದು ಕುತ್ತಿಗೆಗೆ ಮಚ್ಚು ಹಿಡಿದು ಕ್ಯಾಶ್ ಹಾಗೂ ಚಿನ್ನವನ್ನು ದೋಚಿ ಹೋಗಿದ್ದಾರೆ.  ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸಿದ್ದ…

Read Full News

ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲಿಯೇ ಸಾವು|accident

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಾವಲಿ ಮತ್ತು ಶಿವಪುರ ಗ್ರಾಮದ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಟಿಪ್ಪರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆದವಟ್ಟಿ ಗ್ರಾಮದ ಲೋಹೀತ್ ಫಕೀರಪ್ಪ( ಸುಮಾರು 25 ವರ್ಷ) ಹಾಗೂ ಶಿವಪುರ ಗ್ರಾಮದ ಶ್ರೀನಿವಾಸ ಮಾರುತಿ ( ಸುಮಾರು 25 ವರ್ಷ) ಮೃತ ದುರ್ಧೈವಿಗಳು.   ಶಿರಾಳಕೊಪ್ಪದಿಂದ ಸೊರಬ ಮಾರ್ಗವಾಗಿ ಬರುತ್ತಿದ್ದ ಟಿಪ್ಪರ್ ಸೊರಬದಿಂದ ಶಿರಾಳಕೊಪ್ಪ ಮಾರ್ಗವಾಗಿ ತೆರಳುತಿದ್ದ…

Read Full News

ಆನಂದಪುರ ಸಮೀಪದ ತಾವರೆಹಳ್ಳಿಯ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ|death

ಆನಂದಪುರ : ಇಲ್ಲಿನ ಸಮೀಪದ ತಾವರೆಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆನಂದಪುರ ಬಸವನ ಬೀದಿ ನಿವಾಸಿ  ಶರತ್ (28) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಆನಂದಪುರದ ಬಸವನ ಬೀದಿಯ ನಿವಾಸಿ ಮಾಜಿ  ಜಿಲ್ಲಾ ಪಂಚಾಯತ್ ಸದಸ್ಯರಾದ  ಗೋಪಾಲ್ ರವರ ಮಗ ಶರತ್ ಆನಂದಪುರ ಸಮೀಪದ ತಾವರೆಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ .  ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ದೇಹ ದೊರಕಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿಲ್ಲ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು…

Read Full News

ರಿಪ್ಪನ್‌ಪೇಟೆ ಸಮೀಪ ಎರಡು ಕಾರುಗಳ ನಡುವೆ ಭೀಕರ ಅಪಘಾತ : ಸ್ಥಿತಿ ಗಂಭೀರ – ಮೆಗ್ಗಾನ್ ಗೆ ದಾಖಲು|accident

ರಿಪ್ಪನ್ ಪೇಟೆ : ಇಲ್ಲಿನ ಬಾಳೂರು ಸಮೀಪದಲ್ಲಿ ಬಳಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ರಿಪ್ಪನ್‌ಪೇಟೆ ಕಡೆಯಿಂದ ಆನಂದಪುರ ಕಡೆಗೆ ತೆರಳುತಿದ್ದ ಮಾರುತಿ ಓಮಿನಿ ಕಾರು ಹಾಗೂ ಆನಂದಪುರ ಕಡೆಯಿಂದ ರಿಪ್ಪನ್‌ಪೇಟೆ ಕಡೆಗೆ ಬರುತಿದ್ದ ಸ್ಯಾಂಟ್ರೋ ಕಾರು ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಮಾರುತಿ ಓಮಿನಿ ಕಾರಿನಲ್ಲಿದ್ದ ಪಟ್ಟಣದ ಗವಟೂರು ಗ್ರಾಮದ ಬೋಟಿ ವ್ಯಾಪಾರಿ ತವಾಮಣಿ (45) ಎಂಬುವವರಿಗೆ ಗಂಭೀರ ಗಾಯಗಳಾಗಿದೆ.ಸೆವಾಮಣಿ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಯಾಂಟ್ರೋ ಕಾರಿನಲ್ಲಿದ್ದ ಶಿವಮೊಗ್ಗ…

Read Full News

ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ಎಂಸಿಎ ಓದುತ್ತಿದ್ದ ಯುವತಿ|sucide

ಶಿವಮೊಗ್ಗ : ಮದುವೆ ವಿಚಾರಕ್ಕೆ ಶಿವಮೊಗ್ಗದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ. ಮದುವೆಯಾಗುವ ಹುಡುಗನ ಕಡೆಯವರು ಹುಡುಗಿಯ ಮನೆಗೆ ಬಂದು ಶೀಘ್ರ ಮದುವೆ ಮಾಡಿಕೊಡಿ ಎಂದು ಒತ್ತಾಯಿಸಿದ್ದಲ್ಲದೆ, ಹುಡುಗಿಗೆ ಮದುವೆಗೆ ಮನಸ್ಸಿಲ್ಲ ಎಂದರೆ ಹೋಗಿ ಸಾಯಿ ಎಂದು ಬೈದಿದ್ದರಿಂದ ಶಿವಮೊಗ್ಗದ ಬೊಮ್ಮನಕಟ್ಟೆಯ ಯುವತಿ ಸುಮಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ಧಾಳೆ ಎಂದು ಆರೋಪಿಸಲಾಗಿದೆ.  ಸುಮಾ ಆತ್ಮಹತ್ಯೆ ಮಾಡಿಕೊಂಡವರು. ಈಕೆ ನಗರದ ಕಾಲೇಜೊಂದರಲ್ಲಿ ಎಂಸಿಎ ಎರಡನೆಯ ವರ್ಷ ಓದುತ್ತಿದ್ದರು. 2019ರಲ್ಲಿ ನ್ಯಾಮತಿ ಮೂಲದ ಯುವಕನೊಂದಿಗೆ ನಿಶ್ಚಿತಾರ್ಥವಾಗಿತ್ತು. ಓದು ಮುಗಿದ ಮೇಲೆ ವಿವಾಹವಾಗುವ…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.