w
Headlines

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ದಾಳಿ – ಓರ್ವನ ಬಂಧನ|arrest

ಶಿವಮೊಗ್ಗ : ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ವಿನೋಬ ನಗರ ಪೊಲೀಸರು ದಾಳಿ ನಡೆಸಿ ಎರಡು ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್, ಎರಡು 3 ಕೆಜಿಯ ಸಿಲಿಂಡರ್, ರೀಫಿಲ್ಲಿಂಗ್ ರಾಡು ಪೈಪ್ ಗಳನ್ನ ವಶಪಡಿಸಿಕೊಳ್ಳಲಾಗಿದೆ ಓರ್ವನನ್ನ‌ ಬಂಧಿಸಲಾಗಿದೆ. ವಿನೋಬ ನಗರದ 5 ನೇ ತಿರುವಿನಲ್ಲಿ ಬಸವೇಶ್ವರ ಎಂಟರ್ ಪ್ರೈಸಸ್ ನಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಜಾಗದ ಮೇಲೆ ಪಿಐ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಸಣ್ಣ ಪೈಪ್ ಮೂಲಕ ದೊಡ್ಡ ಸಿಲಿಂಡರ್ ನಿಂದ…

Read Full News

ಚಿರತೆ ಉಗುರು ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಆರೋಪಿ ಬಂಧನ|leopard

ಅಕ್ರಮವಾಗಿ ಚಿರತೆಯ ಉಗುರು ಮಾರಾಟ ಮಾಡಲು ಯತ್ನಿಸುತಿದ್ದ ವೇಳೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ನಡೆದಿದೆ. ಖಚಿತ ಮಾಹಿತಿಯನ್ನು ಆಧರಿಸಿ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಚಿರತೆ ಉಗುರನ್ನು ಮಾರಾಟ ಮಾಡಲು ಯತ್ನಿಸುತಿದ್ದ ಸಿದ್ದಾಪುರ ನಿವಾಸಿ ಗಣಪತಿ ಬಿನ್ ಲಕ್ಷಣನಾಯ್ಕ್ ಎಂಬಾತನನ್ನು ಬಂಧಿಸಿ ಆರೋಪಿಯಿಂದ…

Read Full News

ರಿಪ್ಪನ್‌ಪೇಟೆ : ನವೀಕರಣಗೊಳ್ಳುತಿದ್ದ ದೇವಸ್ಥಾನದ ಕಟ್ಟಡ ಧ್ವಂಸ – ಪ್ರಕರಣ ದಾಖಲು|Crime

ರಿಪ್ಪನ್‌ಪೇಟೆ : ಇಲ್ಲಿನ ಮೂಗುಡ್ತಿ ಗ್ರಾಮದಲ್ಲಿ ಕುಟುಂಬವೊಂದಕ್ಕೆ ಸಂಬಂದಿಸಿದ ನವೀಕರಣಗೊಳ್ಳುತಿದ್ದ ದೇವಸ್ಥಾನದ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಸಂಬಂದಪಟ್ಟವರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಗುಡ್ತಿ ಗ್ರಾಮದ ಪವನ್ ಕುಮಾರ್ ಎಂಬುವವರು ತಮ್ಮ ಜಾಗದಲ್ಲಿ ಮನೆ ದೇವರಾದ ಪಂಜುರ್ಲಿ ಹಾಯ್ ಗುಳಿ ಮತ್ತು ಮರ್ಲುಚಿಕ್ಕು ದೇವರುಗಳನ್ನು ಹಲವಾರು ವರ್ಷಗಳಿಂದ ಆರಾಧನೆ ಮಾಡಿಕೊಂಡು ಬರುತ್ತಿದ್ದು ಇತ್ತೀಚಿಗೆ ದೇವರ ಅಣತಿಯಂತೆ ನೂತನ ಕಟ್ಟಡವನ್ನು ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಲಾಗುತಿತ್ತು.ಇನ್ನೂ ಹದಿನೈದು…

Read Full News

ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ..!!! ತೀರ್ಥಹಳ್ಳಿಯ ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ,57 ಸಾವಿರ ದಂಡ ವಿಧಿಸಿ ಕೋರ್ಟ್ ಆದೇಶ

2019 ನೇ ಸಾಲಿನಲ್ಲಿ 26 ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಬಗ್ಗೆ ನೊಂದ ಯುವತಿಯ ತಾಯಿ ನೀಡಿದ್ದರು. ಈ ದೂರಿನ ಮೇರೆಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪೊಲೀಸ್​ ಠಾಣೆಯೊಂದರಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಸದ್ಯ ಪ್ರಕರಣದ ತೀರ್ಪು ಹೊರಬಿದ್ದಿದೆ.  11111 ಸಂಬಂಧ  ತನಿಖಾಧಿಕಾರಿಗಳಾದ ಜಿ.ವಿ. ಗಣೇಶಪ್ಪ, ಪೊಲೀಸ್ ವೃತ್ತ ನಿರೀಕ್ಷಕರು, ತೀರ್ಥಹಳ್ಳಿ ವೃತ್ತ (ಹಾಲಿ ನಿವೃತ್ತಿ) ರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತನ ವಿರುದ್ಧ  ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ 3ನೇ ಹೆಚ್ಚುವರಿ ಜಿಲ್ಲಾ…

Read Full News

ಯುವಕನ ಮೇಲೆ ಪೊಲೀಸರಿಂದ ಹಲ್ಲೆ – ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಯುವಕ|assault

ಶಿಕಾರಿಪುರ : ಪೊಲೀಸರು ಯುವಕನ‌ ಮೇಲೆ ಹಲ್ಲೆ ನೆಡೆಸಿದ್ದಾರೆ ಎಂದು ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಅರಶಿಣಗೆರೆಯಲ್ಲಿ ನೆಡೆದಿದೆ.   ಅರಶಿಣಗೆರೆ ಸಚ್ಚಿನ್‌ (24) ವಿಷ ಸೇವಿಸಿದ ಯುವಕ. ಕಳೆದ ಎರಡು ದಿನಗಳ ಹಿಂದೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವಕನ ಮೇಲೆ ಏಕಾಏಕಿ ಪೊಲೀಸರು ಹಲ್ಲೆ ಮಾಡಿದ್ದೂ ಊರಿನ ಜನರ ಮುಂದೆ ಅವಮಾನ ಸಹಿಸದೆ ಯುವಕ ಸಚಿನ್ ವಿಷ ಸೇವನೆ ಮಾಡಿದ್ದಾನೆ. ವಿಷಯ ತಿಳಿದ ತಕ್ಷಣ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ…

Read Full News

ಅಕ್ರಮ ಮರ ಕಡಿತಲೆ – ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ನಾಟ ಹಾಗೂ ವಿದ್ಯುತ್ ಚಾಲಿತ ಮರ ಕೊಯ್ಯುವ ಯಂತ್ರ ವಶಕ್ಕೆ|Teak

ಅಕ್ರಮವಾಗಿ ಸಾಗುವನಿ ಮರ ಕಡಿತಲೆ ಮಾಡುತಿದ್ದ ವೇಳೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಾಟ ಹಾಗೂ ವಿದ್ಯುತ್ ಚಾಲಿತ ಯಂತ್ರವನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಸಾಗರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ನಡೆದಿದೆ. ಖಚಿತ ಮಾಹಿತಿಯನ್ನು ಆಧರಿಸಿ ಕಲ್ಮನೆ  ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಸಾಗುವಾನಿ ಮರವನ್ನು ಕಡಿದು ವಿದ್ಯುತ್ ಚಾಲಿತ ಯಂತ್ರದಿಂದ ಕೊಯ್ಯುತ್ತಿರುವಾಗ ದಾಳಿ ನಡೆಸಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ಲಕ್ಷಾಂತರ…

Read Full News

ಕಾರ್ಯನಿರ್ವಹಿಸುತಿದ್ದ ಕಛೇರಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ|suicide

ಶಿವಮೊಗ್ಗ : ತಾನು ಕೆಲಸ ಮಾಡುತ್ತಿರುವ ಕಚೇರಿಯಲ್ಲೇ ಮಹಿಳೆಯೋರ್ವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆಗೆ ಆಕೆಯ ಕುಟುಂಬ ಮಹಾನಗರ ಪಾಲಿಕೆಯ ವಾಹನ ಚಾಲಕ ಕಾರಣವೆಂದು ಆರೋಪಿಸಿದೆ. ಗಾರ್ಡನ್ ಏರಿಯಾ 3ನೇ ಕ್ರಾಸ್ ನಲ್ಲಿರುವ ಚುಂಚಾದ್ರಿ ಮಹಿಳಾ ವಿವಿದೋದ್ದೇಶ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದ ಅನಿತಾ(32) ಇಂದು ಎಂದಿನಂತೆ ಕೆಲಸಕ್ಕೆ ಹೋಗಿದ್ದು ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಮಧ್ಯಾಹ್ನ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಅನಿತಾಳಿಗೆ ರಾಮಮೂರ್ತಿಯೊಂದಿಗೆ 14 ವರ್ಷದ ಹಿಂದೆ ‌ಮದುವೆಯಾಗಿತ್ತು. ಮದುವೆಯಾಗಿ 13 ವರ್ಷದ ಮಗಳಿದ್ದಾಳೆ. ಎರಡು…

Read Full News

ಮಕ್ಕಳ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತಿದ್ದ ಇಬ್ಬರ ವಿರುದ್ದ ಪ್ರಕರಣ ದಾಖಲು|CEN

ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದ ಶಿವಮೊಗ್ಗ ಜಿಲ್ಲೆಯ ಇಬ್ಬರ ವಿರುದ್ಧ ಸಿಇಎನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಕ್ಕಳ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುವ ಕುರಿತು ಅಮೆರಿಕಾದ ಸೈಬರ್ ಟಿಪ್ ಲೈನ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಶಿವಮೊಗ್ಗದ ಸಿಇಎನ್ ಶಿಕಾರಿಪುರ ಹಾಗೂ ಭದ್ರಾವತಿ ತಾಲೂಕಿನ ತಲಾ ಒಬ್ಬರ ಮೇಲೆ ಕೇಸು ದಾಖಲಿಸಲಾಗಿದೆ. ಮಕ್ಕಳ ಅಶ್ಲೀಲ ಫೋಟೊ ಹಾಗೂ ವಿಡಿಯೋಗಳನ್ನು ನೋಡುವುದು, ಸಾಮಾಜಿಕ ಜಾಲತಾಣಗಳಲ್ಲಿ ನೋಡುವುದು, ವಿಡಿಯೋ ಕಳುಹಿಸುವುದು ಮತ್ತು ಮಾಡುವುದು…

Read Full News

ಸಾಗರ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಯುವಕ ನೀರುಪಾಲು – ತೀವ್ರ ಶೋಧ ಕಾರ್ಯಾಚರಣೆ|sagara

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆ ಕೆರೆಯಲ್ಲಿ ಈಜಲು ಹೋದ ಯುವಕನೋರ್ವ ನೀರುಪಾಲಾದ ಘಟನೆ ನಡೆದಿದೆ. ಸಾಗರ ಪಟ್ಟಣದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯಶ್ವಂತ್ (22) ನೀರುಪಾಲಾದ ಯುವಕ.ಈತ ಸಾಗರ ರಾಮನಗರದ ನಿವಾಸಿ. ಯಶ್ವಂತ್ ಮಂಗವಾರ ಬೆಳಿಗ್ಗೆ ತನ್ನ ಮೂವರು ಸ್ನೇಹಿತರೊಂದಿಗೆ ಬೀಮನಕೋಣೆ ಕೆರೆಗೆ ಈಜು ಕಲಿಯಲು ಹೋಗಿದ್ದರು. ಈ ವೇಳೆ ಯಶ್ವಂತ್ ಸ್ನೇಹಿತರು ಕೆರೆಯಲ್ಲಿ ಈಜಾಡಲು ಇಳಿದಿದ್ದಾರೆ. ಸ್ನೇಹಿತರು ಈಜಾಡುವುದನ್ನು ನೋಡುತ್ತಿದ್ದ ಯಶ್ವಂತ್ ನೀರಿಗೆ ಇಳಿದಿದ್ದಾನೆ ಈ ಸಂದರ್ಭದಲ್ಲಿ ಈಜು ಬಾರದೆ ನೀರುಪಾಲಾಗಿದ್ದಾರೆ. ಅಗ್ನಿಶಾಮಕ…

Read Full News

ಸಾಗರ : ಗ್ರಾಮ ಪಂಚಾಯತ್ ಸದಸ್ಯನ ಮೇಲೆ ಸಿನಿಮೀಯ ರೀತಿಯಲ್ಲಿ ಅಪರಿಚಿತರಿಂದ ಹಲ್ಲೆ…!!! – ಆಸ್ಪತ್ರೆಗೆ ದಾಖಲು|assault

ಗ್ರಾಮ ಪಂಚಾಯಿತಿ ಸದಸ್ಯ ಆನಂದ ಹರಟೆ  ಮೇಲೆ ಹಲ್ಲೆ :  ಆಸ್ಪತ್ರೆಗೆ ದಾಖಲು…!!! ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಚಿಪ್ಪಳ್ಳಿ ಬಳಿಯಲ್ಲಿ ಹೊಸೂರು ಗ್ರಾಮ ಪಂಚಾಯಿತಿ ಸದಸ್ಯ ಆನಂದ ಹರಟೆ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಗ್ರಾಪಂ ಸದಸ್ಯ ಆನಂದ್ ಹರಟೆ ಸಾಗರದಿಂದ ಐಗಿನಬೈಲಿನ ತಮ್ಮ ಮನೆಗೆ ತೆರಳುತ್ತಿದ್ದಾಗ ಖಾಸಗಿ ಬಸ್ ಚಿಪ್ಪಳಿ ಬಳಿ ತಮ್ಮ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.  ಈ ಸಂಧರ್ಭದಲ್ಲಿ ಆನಂದ್ ಹರಟೆ ಕಾರಿನಿಂದ ಇಳಿಯುತ್ತಿದ್ದಂತೆ…

Read Full News

OLX ನಲ್ಲಿ ಕಾರು ಖರೀದಿಸಲು ಹೋಗಿ ವಂಚನೆಗೊಳಗಾದ ಬ್ಯಾಂಕ್ ಉದ್ಯೋಗಿ

ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್​ ನಲ್ಲಿ ಪ್ರಕರಣವೊಂದು ದಾಖಲಾಗಿದ್ದು, ಬ್ಯಾಂಕ್ ಉದ್ಯೋಗಿಯೊಬ್ಬರು OLX  ನಲ್ಲಿ ಕಾರೊಂದನ್ನ ಖರೀದಿಸಲು ಮುಂದಾಗಿ ಲಕ್ಷಾಂತರ ರೂ ಮೋಸವಾಗಿರುವ ಘಟನೆ ನಡೆದಿದೆ.  ಕಾರಿನ ಜಾಹಿರಾತು ನೀಡಿದ್ದ ಮಾಲೀಕ ತನ್ನನ್ನ ಆಯುಶ್ ಎಂದು ಪರಿಚಯಸಿಕೊಂಡು ಅಡ್ವಾನ್ಸ್ ಮಾಡಲು ಹೇಳಿದ್ದ. ಅದರಂತೆ ಉದ್ಯೋಗಿ 6 ಸಾವಿರ ರೂಪಾಯಿ ಅಡ್ವಾನ್ಸ್ ಮಾಡಿದ್ದಾರೆ. ಆ ಬಳಿಕ ಆಯುಶ್ ಕಾರ್​ ಡಿಲೇವರಿ ಇವತ್ತೆ ತೆಗೆದುಕೊಳ್ಳಿ ದೆಹಲಿಯ ಪಟೇಲ್​ ನಗರದ ಮೆಟ್ರೋ ಪಿಲ್ಲರ್​ ಬಳಿರುವ ಗ್ಯಾರೇಜಿನಲ್ಲಿ ಕಾರಿದೆ. ಬಾಕಿ ಹಣ…

Read Full News

ಮಿನಿ ಲಾರಿ ಮತ್ತು ಬೈಕ್ ನಡುವೆ ಅಪಘಾತ – ಬೈಕ್ ಚಾಲಕ ಆಸ್ಪತ್ರೆಗೆ ದಾಖಲು|accident

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ತಾಳಗುಪ್ಪದ ಸಮೀಪದ ಗೌರಿ ಕೆರೆ ಬಳಿ ಇವತ್ತು ಅಪಘಾತ ಸಂಭವಿಸಿದೆ. ಸಾಗರದಿಂದ ಸಿದ್ದಾಪುರದ ಕಡೆಗೆ ತೆರಳುತ್ತಿದ್ದ ಬೈಕ್​ವೊಂದಕ್ಕೆ 407 ಲಾರಿ ಡಿಕ್ಕಿ ಹೊಡೆದಿದೆ.  ಎದುರಿನಿಂದ ಬಂದ ಲಾರಿ ಬೈಕ್​ಗೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿರುವ ಹೊಂಡಕ್ಕೆ ಉರುಳಿದೆ. ಘಟನೆಯಲ್ಲಿ ಬೈಕ್​ ಸವಾರ ಗಾಯಗೊಂಡಿದ್ದು, ಆತನನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹರಿಹರದಲ್ಲಿ  ಔಷಧಿ ಸಾಗಣೆಯ ವಾಹನವೊಂದು ತೆರೆದ ಚರಂಡಿಗೆ ರಸ್ತೆಯಲ್ಲಿ ಉರುಳಿಬಿದ್ದ ಘಟನೆ ನಗರದ ಹಳೆ ಪಿ.ಬಿ.ರಸ್ತೆ ಬಳಿಯಲ್ಲಿ ಸಂಭವಿಸಿದೆ. …

Read Full News

ವಿದ್ಯುತ್ ಹೈ ಟೆನ್ಷನ್ ವೈರ್ ಗೆ ತಗುಲಿದ ಅಕ್ರಮವಾಗಿ ನಾಟಾ ಸಾಗಿಸುತ್ತಿದ್ದ ಲಾರಿ – ಲಾರಿ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು – |illegal wood

ತೀರ್ಥಹಳ್ಳಿ : ತಾಲೂಕಿನ ತುದೂರು ಗ್ರಾಮಪಂಚಾಯಿತಿಯ ಹೊಸಕೊಪ್ಪದಿಂದ ಅಕ್ರಮವಾಗಿ ನಾಟ ತುಂಬಿಸಿ ಶಿವಮೊಗ್ಗಕ್ಕೆ ಹೋಗುತ್ತಿದ್ದ ಲಾರಿಯನ್ನು ಕೆರೆಕೊಪ್ಪ ಬಳಿ ತಡೆಹಿಡಿಯಲಾಗಿದೆ. ಮೂರು ಲಕ್ಷಕ್ಕೂ ಅಧಿಕ ಮೊತ್ತದ ಅಕೇಶಿಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. KA-41-B 6435 ಸಂಖ್ಯೆಯ ಲಾರಿ ಶುಕ್ರವಾರ ಮದ್ಯ ರಾತ್ರಿಯ ವೇಳೆ ಅಕ್ರಮವಾಗಿ ಅಕೇಶಿಯ ನಾಟವನ್ನು ಸಾಗಿಸಲಾಗುತ್ತಿತ್ತು. ಲಾರಿಯಲ್ಲಿದ್ದ ಅಕೇಶಿಯ ಮರದ ತುಂಡು ವಿದ್ಯುತ್ ಹೈ ಟೆನ್ಷನ್ ವೈರ್ ಗೆ ತಗುಲಿದ್ದು ಈ ಸಂದರ್ಭದಲ್ಲಿ ಅಕ್ಕಪಕ್ಕದ ಮನೆಗಳ ಫ್ರಿಡ್ಜ್, ಟಿವಿ, ಯುಪಿಎಸ್ ಸೇರಿ ಹಲವು ಉಪಕರಣ ಹಾಳಾಗಿದೆ….

Read Full News

ಕೌಟುಂಬಿಕ ಕಲಹ : ಪತಿಯಿಂದ ಪತ್ನಿಯ ಮೇಲೆ ಆಸಿಡ್ ದಾಳಿ|acid

ಹೆಂಡತಿಯೊಂದಿಗೆ ಜಗಳ ಮಾಡಿಕೊಂಡು ಸಿಟ್ಟಿನಿಂದ ಹೆಂಡತಿಯ ಮೈಮೇಲೆ ಆಸಿಡ್ ಎರಚಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಭದ್ರಾವತಿಯ ಗ್ರಾಮವೊಂದರ ನಿವಾಸಿಯಾದ ಸಂತ್ರಸ್ತೆಯು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ಧಾರೆ. ಬಿಡುವಾದಾಗ ತನ್ನ ಮಕ್ಕಳನ್ನು ನೋಡಲು ತನ್ನ ತಾಯಿ ಮನೆಗೆ ಬರುತ್ತಿದ್ದರು. ಇನ್ನೂ ಪತ್ನಿಯ ಜೊತೆಗೆ ಜಗಳ ತೆಗೆದು ದೂರವೇ ಇದ್ದ ಪತಿಯು ಆಗಾಗ ಪತ್ನಿಯ ತಾಯಿ ಮನೆಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದನಂತೆ. ಈ ನಡುವೆ ಕಳೆದ ಸಂಕ್ರಾಂತಿಯ ಸಂದರ್ಭದಲ್ಲಿ ಪತ್ನಿಯ ತಾಯಿ ಮನೆಗೆ ಬಂದ ಗಂಡ, ಅದೇ…

Read Full News

ಅಬಕಾರಿ ಇಲಾಖೆಯ ಮಿಂಚಿನ ಕಾರ್ಯಾಚರಣೆ – ಗಾಂಜಾ ಸಮೇತ ಆರೋಪಿಯ ಬಂಧನ|Arrested

ಸಾಗರ : ಇಲ್ಲಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಸೂರಗುಪ್ಪೆ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಾಲುಸಹಿತ ವಶಕ್ಕೆ ಪಡೆದಿದ್ದಾರೆ. ಅಬಕಾರಿ ಇಲಾಖೆಯ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ಬಸ್ ನಿಲ್ದಾಣದ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸೊರಬ ತಾಲೂಕಿನ ಗಣಪತಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸುಮಾರು 500 ಗ್ರಾಂ ಒಣ ಗಾಂಜಾವನ್ನು ಪ್ಲಾಸ್ಟಿಕ್ ಚೀಲದಲ್ಲಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ವಶಕ್ಕೆ ಪಡೆದ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ…

Read Full News

ರಿಪ್ಪನ್‌ಪೇಟೆ : ಸಾಲಬಾಧೆಗೆ ತತ್ತರಿಸಿದ ರೈತ ಆತ್ಮಹತ್ಯೆ|sucide

ರಿಪ್ಪನ್ ಪೇಟೆ : ಚಿಕ್ಕ ಜೇನಿ ಗ್ರಾಮ  ಪಂಚಾಯತ್ ವ್ಯಾಪ್ತಿಯ ಕಾರಕ್ಕಿ ಗ್ರಾಮದ ನಿವಾಸಿ ರಾಜಪ್ಪ (63) ಅವರು ಸಾಲ ಬಾಧೆ ತಾಳಲಾರದೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬುಧವಾರ ರಾತ್ರಿ ಜಮೀನಿಗೆ ತೆರಳಿದ ಅವರು ಗುರುವಾರ ಬೆಳಿಗ್ಗೆ ವರೆಗೆ  ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಲು ಹೊರಟಾಗ  ಶುಂಠಿ ಗದ್ದೆಯಲ್ಲಿ  ಕಳೆ ನಾಶಕ ಸೇವಿಸಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಕೊಡೂರು ಕೆನರಾ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್,ವಿವಿಧ ಸಂಘ  ಸೇರಿದಂತೆ  ವಿವಿದೆಡೆ …

Read Full News

ಶಿವಮೊಗ್ಗದಲ್ಲಿ ರೈಲಿಗೆ ಸಿಲುಕಿ ಖಾಸಗಿ ಕಾಲೇಜು ವಿದ್ಯಾರ್ಥಿ ಸಾವು|train

ಶಿವಮೊಗ್ಗ  : ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಯೊಬ್ಬ ರೈಲಿಗೆ  ಸಿಲುಕಿ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಸೋಮಿನಕೊಪ್ಪದ ಪಶು ವೈದ್ಯಕೀಯ ಮಹಾವಿದ್ಯಾಲಯದ ಬಳಿ ಘಟನೆ ಸಂಭವಿಸಿದೆ. ರೈಲ್ವೆ ಹಳಿ  ಮೇಲೆ ಯುವಕನೊಬ್ಬನ ಮೃತದೇಹ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದರು. ಮೃತನಿಗೆ ಅಂದಾಜು 17 ವರ್ಷ ಎಂದು ತಿಳಿದು ಬಂದಿದೆ. ಈತ ಶಿವಮೊಗ್ಗ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಎಂದು ಗೊತ್ತಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಶಿವಮೊಗ್ಗ ರೈಲ್ವೆ…

Read Full News

ಚಿನ್ನದಂಗಡಿಗೆ ಗ್ರಾಹಕಿಯ ಸೋಗಿನಲ್ಲಿ ಬಂದು ಮಾಂಗಲ್ಯ ಸರ ಕಳ್ಳತನ ಮಾಡಿದ್ದ ಮಹಿಳೆಯ ಬಂಧನ|arrested

ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ ಅಂಗಡಿಗೆ ಗ್ರಾಹಕಿಯಂತೆ ಬಂದು ಮಾಂಗಲ್ಯ ಸರ ಕಳವು ಮಾಡಿದ್ದ ಮಹಿಳೆಯನ್ನ ಬಂದಿಸುವಲ್ಲಿ ದೊಡ್ಡಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳ್ಳತನವನ್ನೆ ತನ್ನ ಕಸುಬನ್ನಾಗಿ ಮಾಡಿಕೊಂಡಿದ್ದ ವಿಜಯಪುರ ಜಿಲ್ಲೆಯ ಚಿರಸ್ತಹಳ್ಳಿ ಗ್ರಾಮದ ಗುಂಡಗತ್ತಿ ರಸ್ತೆಯ ಹರಪ್ಪನಹಳ್ಳಿ ತಾಲೂಕಿನ ಆರೋಪಿ ರತ್ನ ಟಿ ಕೋಮ್ ಗೋಣಿಪ್ಪ @ ಗೋಣಿ ಬಸಪ್ಪ ಎಂಬ ಮಹಿಳೆಯನ್ನು ದೊಡ್ಡಪೇಟೆ ಪೊಲೀಸರು ಬಂಧಿಸಿದ್ದಾರೆ. ಈ ಮಹಿಳೆ ಕಳೆದ 24.11.2022 ಶಿವಮೊಗ್ಗದ ಬಿ.ಹೆಚ್ ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ & ಡೈಮಂಡ್ ಅಂಗಡಿಗೆ ಗ್ರಾಹಕರ ಸೋಗಿನಲ್ಲಿ…

Read Full News

ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹ ಪತ್ತೆ|beach death

ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿ ಸಮುದ್ರಪಾಲಾಗಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಇಬ್ಬರು ಯುವಕರ ಮೃತದೇಹಗಳು ಪತ್ತೆಯಾಗಿವೆ. ಸಾಗರ ತಾಲೂಕಿನ ತುಮರಿ ಗ್ರಾಮದ ಪುನೀತ್ ಚೌಡಪ್ಪ(30) ಹಾಗೂ ರಾಘವೇಂದ್ರ(22) ಮೃತಪಟ್ಟವರು. ಮುರ್ಡೇಶ್ವರ ಬೀಚ್ ನಲ್ಲಿ ಈಜಲು ತೆರಳಿದ್ದ ಪುನೀತ್ ಮತ್ತು ರಾಘವೇಂದ್ರರ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಪುನೀತ, ರಾಘವೇಂದ್ರ ಸೇರಿದಂತೆ ಮೂವರು ಯುವಕರು ಸೋಮವಾರ ಸಂಜೆ ಮುರ್ಡೇಶ್ವರಕ್ಕೆ ಪ್ರವಾಸ ಬಂದಿದ್ದರು. ಈ ವೇಳೆ ಸಮುದ್ರಕ್ಕೆ ಈಜಲು ಇಳಿದ ಇಬ್ಬರು ನಾಪತ್ತೆಯಾಗಿದ್ದರು. ಇಬ್ಬರ ಮೃತದೇಹ…

Read Full News

ಕೆಂಚನಾಲದಲ್ಲಿ ಯುವಕನಿಗೆ PFI ಸಂಘಟನೆ ಹೆಸರಿನಲ್ಲಿ ಜೀವ ಬೆದರಿಕೆ ಪ್ರಕರಣ – ಆರೋಪಿಯ ಬಂಧನ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಯುವಕನೊಬ್ಬ ನಿಗೆ ಪಿಎಫ಼್ ಐ ಸಂಘಟನೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ instragram ನಲ್ಲಿ ಜೀವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ. ಆನಂದಪುರ ಸಮೀಪದ ಮುರುಘಾಮಠ ಗ್ರಾಮದ ಜಾವದ್ ಅಹಮ್ಮದ್ ಬಿನ್ ಇಪ್ತಿಕಾರ್ ಅಹಮದ್ ಬಂಧಿತ ಆರೋಪಿ. ಕೆಂಚನಾಲ ಗ್ರಾಮದ ಸುಮಂತ್ ಎಂಬ ಯುವಕನಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್ ನಲ್ಲಿ only____pfi  ಎಂಬ ಖಾತೆಯಿಂದ ಜೀವ ಬೆದರಿಕೆ ಬಂದಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್…

Read Full News

ಹೋರಿ ಬೆದರಿಸುವ ಸ್ಪರ್ಧೆ : ಇಬ್ಬರು ಸಾವು – 6 ಜನರಿಗೆ ಗಾಯ|bull competition

ಪ್ರತ್ಯೇಕ ಪ್ರಕರಣದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಇಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಶಿವಮೊಗ್ಗ ತಾಲೂಕು ಕೊನಗನವಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ಶಿವಮೊಗ್ಗ ನಗರದ ಆಲ್ಕೊಳ ಬಡಾವಣೆಯ ನಿವಾಸಿ ಲೋಕೇಶ್(32) ಸಾವನ್ನಪ್ಪಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಶಿಕಾರಿಪುರ ತಾಲೂಕಿನ ಮಾಳೂರು ಗ್ರಾಮದಲ್ಲೂ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋದ ರಂಗನಾಥ್ (23) ವರ್ಷದ ಯುವಕ ಸಾವನ್ನಪ್ಪಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿದ್ದ ಲೋಕೇಶ್ ಭಾನುವಾರ ರಜೆ ಇದ್ದ ಕಾರಣ…

Read Full News

ಆನಂದಪುರದಲ್ಲಿ ಶಾಲಾ ವಿದ್ಯಾರ್ಥಿನಿಯರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಓರ್ವ ವಿದ್ಯಾರ್ಥಿನಿ ಸಾವು|crime

ಆನಂದಪುರ : ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿಳು ಗಾಯಗೊಂಡ ಪ್ರಕರಣದಲ್ಲಿ ಓರ್ವ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ಮೊದ್ಲೆಸರ ಗ್ರಾಮದ  ಕೀರ್ತನಾ(15) ಮೃತಪಟ್ಟ ದುರ್ಧೈವಿಯಾದ್ದಾರೆ. ಆನಂದಪುರ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 9 ನೇ ತರಗತಿ ವ್ಯಾಸಾಂಗ ಮಾಡುತಿದ್ದ ಕೀರ್ತನಾ ಶನಿವಾರ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ತೀವ್ರ ಗಾಯಗೊಂದು ಶಿವಮೊಗ್ಗದ ಆಸ್ಪತ್ರೆಗೆ ದಾಖಾಲಾಗಿದ್ದಳು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಶನಿವಾರ ವಿದ್ಯಾರ್ಥಿನಿಯರಿಬ್ಬರು…

Read Full News

ಗರ್ತಿಕೆರೆ ಬೈಕ್ ಹಾಗೂ ಕಾರಿನ ನಡುವೆ ಅಪಘಾತ : ಅಪಘಾತದ ಸಿಸಿಟಿವಿ ದೃಶ್ಯಾವಳಿ ಇಲ್ಲಿ ವೀಕ್ಷಿಸಿ👇|cctv

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ಇಂದು ಬೆಳಿಗ್ಗೆ ನಡೆದ ಕಾರು ಹಾಗು ಬೈಕ್ ನಡುವೆ ಅಪಘಾತದ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಗರ್ತಿಕೆರೆ ಪೆಟ್ರೋಲ್ ಬಂಕ್ ಮುಂಭಾಗ ಬೈಕ್ ಚಾಲಕನ ಅಜಾಗರೂಕತೆಯಿಂದ ಹಿಂಬದಿ ಗಮನಿಸದೆ ಬಲಕ್ಕೆ ತಿರುಗಿಸಿದ್ದಾನೆ ಆ ಸಂಧರ್ಭದಲ್ಲಿ ಅತೀ ವೇಗವಾಗಿ ಬಂದ ಕಾರು ಬೈಕ್ ನ್ನು ತಪ್ಪಿಸಲು ಬಲಕ್ಕೆ ತಿರುಗಿಸಿದ್ದರೂ ಬೈಕ್ ಗೆ ಕಾರು ತಗುಲಿದ ಪರಿಣಾಮ ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ರಿಪ್ಪನ್‌ಪೇಟೆ ಮೂಲದ ಮಾರುತಿ…

Read Full News

ಗರ್ತಿಕೆರೆ ಬಳಿ ಕಾರು ಹಾಗೂ ಬೈಕ್‌ ನಡುವೆ ಅಪಘಾತ – ಬೈಕ್ ಸವಾರನ ಸ್ಥಿತಿ ಗಂಭೀರ,ಮೆಗ್ಗಾನ್ ಗೆ ದಾಖಲು|accident

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ಕಾರು ಹಾಗು ಬೈಕ್ ನಡುವೆ ಅಪಘಾತ ನಡೆದಿದೆ. ಪೆಟ್ರೋಲ್ ಬಂಕ್ ಮುಂಭಾಗ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೆ ಗಂಭೀರ ಸ್ವರೂಪದ ಗಾಯವಾಗಿದೆ. ರಿಪ್ಪನ್‌ಪೇಟೆ ಮೂಲದ ಮಾರುತಿ ಬ್ರೀಜಾ(KA 15 N 8990) ಕಾರು ತೀರ್ಥಹಳ್ಳಿ ಕಡೆಗೆ ಸಂಚರಿಸುತ್ತಿದ್ದು ಈ ವೇಳೆ ರಸ್ತೆಗೆ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಕಾರು ರಸ್ತೆ ಬದಿಯ ಚರಂಡಿಗೆ ಉರುಳಿದ್ದು ಈ ಘಟನೆಯಲ್ಲಿ ಕಾರಿನ ಮುಂಭಾಗ ಸಂಪೂರ್ಣ…

Read Full News

ಆನಂದಪುರದಲ್ಲಿ ನಡೆದುಕೊಂಡು ಹೋಗುತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ಕಾರು ಡಿಕ್ಕಿ – ಮೆಗ್ಗಾನ್ ಗೆ ದಾಖಲು

ಆನಂದಪುರ : ರಸ್ತೆಯಲ್ಲಿ ನಡೆದುಕೊಂಡು ಹೋಗಿತಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಕಾರು ಡಿಕ್ಕಿ ಹೊಡೆದು ವಿದ್ಯಾರ್ಥಿಳು ಗಾಯಗೊಂಡ ಘಟನೆ ನೂತನ ಪೊಲೀಸ್ ಠಾಣೆಯ ಮುಂಭಾಗದ ತಿರುವಿನಲ್ಲಿ ನಡೆದಿದೆ. ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರಿಬ್ಬರು ಶಾಲೆ ಮುಗಿಸಿ ತಮ್ಮ ಊರಾದ ಮೊದ್ಲೇಸರ ಕಡೆಗೆ ನಡೆದುಕೊಂಡು ಹೋಗುತಿದ್ದ ಸಂಧರ್ಭದಲ್ಲಿ ಪೊಲೀಸ್ ಠಾಣೆ ಮುಂಭಾಗದ ತಿರುವಿನಲ್ಲಿ ಸಾಗರ ಕಡೆಯಿಂದ ಆನಂದಪುರ ಕಡೆಗೆ ಬರುತಿದ್ದ ಫೋರ್ಡ್ ಕಾರು(Ka 18 N 5812) ಮುಂಭಾಗದಿಂದ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ವಿದ್ಯಾರ್ಥಿಗಳಿಗೆ ತೀವ್ರ…

Read Full News

ದೇವಸ್ಥಾನಗಳ ಹುಂಡಿ ಕಳ್ಳತನ ಮಾಡುತಿದ್ದ ಕಳ್ಳರ ಬಂಧನ|theft

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕಳೆದ ವರ್ಷ ನಡೆದ ನಾಲ್ಕು ದೇವಸ್ಥಾನಗಳ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಸಾಗರ ಗ್ರಾಮಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ವರ್ಷ ಫೆಬ್ರುವರಿ 17ಕ್ಕೆ ತಾಲೂಕಿನ ಸಿರಿವಂತೆ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ,ಮೇ 5ಕ್ಕೆ ಬಿಳಿಸಿರಿ ಗ್ರಾಮದ ಕೊರಳಿಕೊಪ್ಪದ ಶನೇಶ್ವರ ದೇವಾಸ್ಥಾನ, ಮೇ 27ರಂದು ಕಳೆದಿ ಹೋಬಳಿಯ ತೆರವಿನಕೊಪ್ಪ ಗ್ರಾಮದ ಅಕ್ಕ ನಾಗಮ್ಮ ದೇವಸ್ಥಾನ ಹಾಗೂ ಅಕ್ಟೋಬರ್ 21ರಂದು ಮಲ್ಲ ಗ್ರಾಮದ ಪಂಚಲಿಂಗೇಶ್ವರ ಹಾಗೂ ಸಿದ್ದೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿರುವ ಪ್ರಕರಣ ಸಾಗರ…

Read Full News

ಪ್ರಿಯಕರನನ್ನು ಕತ್ತು ಸೀಳಿ ಹತ್ಯೆಗೈದ ಪ್ರೇಯಸಿ..!!! ಭದ್ರಾವತಿಯ ಖಾಸಗಿ ಲಾಡ್ಜ್ ನಲ್ಲಿ ನಡೆದ ಘಟನೆmurder

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಹೆರಿಟೇಜ್ ಲಾಡ್ಜ್ ನಲ್ಲಿ ಪ್ರೇಯಸಿಯೇ ಪ್ರಿಯಕರನನ್ನು ಹತ್ಯೆಗೈದಿರುವ ಘಟನೆ ನಡೆದಿದೆ. ಹಾಸನ ಮೂಲದ ಪರ್ವೇಜ್ ಖಾನ್​ ಎಂಬ ವ್ಯಕ್ತಿಯ ಕೊಲೆಯಾಗಿದೆ. ಪ್ರೇಯಸಿಯೇ ಈ ಕೊಲೆ ಮಾಡಿದ್ದಾಳೆ ಎಂದು ಆರೋಪಿಸಲಾಗುತಿದ್ದು ಪೊಲೀಸ್ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಾಗಿದೆ. ಹಾಸನದ ಚನ್ನರಾಯಪಟ್ಟಣದ ಮೂಲದ ಆಯಿಷಾ ಮತ್ತು ಜಾವಗಲ್​ ಮೂಲದ ಪರ್ವೇಜ್ ಖಾನ್ ಇಬ್ಬರು ಕಳೆದ ಮೂರು ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಎನ್ನಲಾಗಿದೆ.  ಇವರಿಬ್ಬರ ಸಂಬಂಧದ ವಿಚಾರಕ್ಕೆ ಮನನೊಂದಿದ್ದ ಆಯಿಷಾ ಳ ಪತಿ ಇವಳನ್ನು…

Read Full News

ಅಕ್ರಮ ಕಸಾಯಿಖಾನೆ ಮೇಲೆ ದಾಳಿ : 8 ಗೋವುಗಳ ರಕ್ಷಣೆ – 7 ಗೋವುಗಳ ದಾರುಣ ಹತ್ಯೆ

ಶಿವಮೊಗ್ಗ ನಗರದ ಸೂಳೆಬೈಲ್​ನ ಸಮೀಪ ಇವತ್ತು ತುಂಗಾನಗರ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಕಸಾಯಿಖಾನೆಯ ಮೇಲೆ ದಾಳಿ ನಡೆಸಿದ್ದಾರೆ. ಗೋಹತ್ಯೆ ನಿಷೇಧದ ನಡುವೆಯು, ಗೋವುಗಳನ್ನು ಮಾಂಸಕ್ಕಾಗಿ ಕೊಂದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಬೆನ್ನಲ್ಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.  ಸೂಳೆಬೈಲಿನ ಕಸಾಯಿ ಖಾನೆಯೊಂದ ಮೇಲೆ ತುಂಗನಗರ ಪೊಲೀಸರು ಬೆಳ್ಳಂಬೆಳಿಗ್ಗೆನೇ ದಾಳಿ ನಡೆಸಿ 8 ಗೋವುಗಳನ್ನ ರಕ್ಷಿಸಿದ್ದಾರೆ. ಆದರೆ 7 ಗೋವುಗಳ ಕತ್ತು ಸೀಳಿ ಹತ್ಯೆ ಮಾಡಿರುವ ದೃಶ್ಯಗಳು ಲಭ್ಯವಾಗಿವೆ. ಸೂಳೆಬೈಲಿನ ಅಜೀಜ್ ಮನೆಯ ಹಿಂಭಾಗದ…

Read Full News

ಸಾಲಭಾದೆಗೆ ತತ್ತರಿಸಿ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ|sucide

ಸಾಲಭಾದೆಗೆ ಹೆದರಿ ಶಿವಮೊಗ್ಗ ದ ಮಿಳಘಟ್ಟದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಪರಂದಯ್ಯ(70), ದಾನಮ್ಮ (60)ಮತ್ತು ಮಂಜುನಾಥ್(25) ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗದ ಮಿಳಘಟ್ಟ ಮೊದಲನೇ ತಿರುವಿನಲ್ಲಿ ಪರಂದಯ್ಯ, ದಾನಮ್ಮ, ಮಂಜುನಾಥ್ ನಿನ್ನೆ ಸಾಲಕ್ಕೆ ಬೆದರಿ ವಿಷ ಸೇವಿಸಿದ್ದರು. ವೃದ್ಧರಿಬ್ಬರೂ ನಿನ್ನೆನೇ ಸಾವನ್ನಪ್ಪಿದರು.  ಶಿವಮೊಗ್ಗದ ಆನಂದರಾವ್ ಬಡಾವಣೆ   ಹತ್ತಿರದ ಮಿಳಗಟ್ಟ ಕೆರೆಅಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಪರಂದಯ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ದಾನಮ್ಮ ಕಲ್ಲೂರು ಮಂಡ್ಲಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತಿದ್ದರು. ಅವರಿಗೆ ಮಕ್ಕಳಿರಲಿಲ್ಲ…

Read Full News

ಬರ್ತ್ ಡೇ ಪಾರ್ಟಿಯಲ್ಲಿ ನಾಲ್ವರು ಯುವಕರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ – ಪ್ರಕರಣ ದಾಖಲು|assault

ಭದ್ರಾವತಿಯಲ್ಲಿ  ಹುಟ್ಟುಹಬ್ಬದ ಪಾರ್ಟಿ ವೇಳೆ ಯುವಕರ ಗುಂಪಿನ ಮೇಲೆ ಬಿಯರ್ ಬಾಟಲಿಯಿಂದ ದಾಳಿ ನಡೆಸಲಾಗಿದೆ. ಗಾಯಗೊಂಡಿರುವ ನಾಲ್ವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಭದ್ರಾವತಿಯ ಸಾಗರ, ನಾಗ ಪವನ್, ತೇಜಸ್, ಚೇತನ್ ಕುಮಾರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತೇಜಸ್ ಎಂಬುವವರ ಸ್ನೇಹಿತರೊಬ್ಬರ ಪತ್ನಿಯ ಹುಟ್ಟುಹಬ್ಬದ ಪಾರ್ಟಿಯನ್ನು ಶಿವಮೊಗ್ಗದ ಸೋಷಿಯಲ್ ಹಾರ್ಬರ್ ಕ್ಲಬ್ ನಲ್ಲಿ ಆಯೋಜಿಸಲಾಗಿತ್ತು. ರಾತ್ರಿ 11.30ರ ಹೊತ್ತಿಗೆ ಪಾರ್ಟಿಯಲ್ಲಿ ಮದ್ಯ ಸೇವಿಸಿದ್ದ ಗುಂಪೊಂದು ಏಕಾಏಕಿ ಚೇತನ್ ಎಂಬಾತನ ಮೇಲೆ ಹಲ್ಲೆ ನಡೆಸಲು…

Read Full News
  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.