ದೇವರ ಹರಕೆಗೆ ತಂದಿದ್ದ ಕುರಿ ರಾತ್ರೋರಾತ್ರಿ ಮಾಯ , ಬೆಳಗೆದ್ದು ಅಯ್ಯೋಯ್ಯೋ ಅಂದ್ರು – ನಿಜವಾಗಿಯೂ ನಡೆದಿದ್ದೇನು..?

ತೀರ್ಥಹಳ್ಳಿ : ದೇವರು ಎಂದರೇ ಅದೇನೋ ಭಯ ಭಕ್ತಿ ಅದರ ಜೊತೆಗೆ ಕೆಲವೊಂದು ನಂಬಿಕೆ. ಅದೇ ನಂಬಿಕೆಯಿಂದ ದೇವರಿಗಾಗಿ ಐದು ಕುರಿಯನ್ನು ಹರಕೆಯ ಸಲುವಾಗಿ ರಾತ್ರಿ ತಂದಿದ್ದರು. ಆದರೆ ಮಾರನೇ ದಿನ ಹರಕೆಗೆ ಕುರಿಯನ್ನು ಕಡಿಯಲು ನೋಡುವಾಗ ಕುರಿ ಮಂಗಮಾಯವಾಗಿದ್ದ ಘಟನೆ
ಕುಚ್ಚಲು ಎಂಬ ಗ್ರಾಮದಲ್ಲಿ ನಡೆದಿದೆ.
ತೀರ್ಥಹಳ್ಳಿ ತಾಲೂಕಿನ ಮಾಳೂರು ಸಮೀಪದ ಕುಚ್ಚಲು ಎಂಬ ಗ್ರಾಮದಲ್ಲಿ ಭೂತರಾಯ ಉರಿಚೌಡಿ ಎಂಬ ಗ್ರಾಮ ದೇವತೆಗಳಿಗಾಗಿ ಹರಕೆ ಸಲ್ಲಿಸುವ ಸಲುವಾಗಿ ಭದ್ರಾವತಿ ಕಡೆಯಿಂದ ಐದು ಕುರಿಯನ್ನು ತರಲಾಗಿತ್ತು. ರಾತ್ರಿ ಇದ್ದ ಕುರಿ ಬೆಳಗ್ಗೆ ಮಾಯವಾಗಿತ್ತು. ಕುರಿಯನ್ನು ದೇವರಿಗೆ ಎಂದು ತಂದಿದ್ದು ದೇವರ ಬದಲಾಗಿ ಮತ್ತೊಬ್ಬರ ಪಾಲಾಗಿದೆ.
ದೇವರಿಗೆ ತಂದ ಕುರಿಗಳನ್ನು ಕಳ್ಳತನ ಮಾಡಲಾಗಿದೆ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ನಿಜವಾಗಿಯೂ ಕಳ್ಳತನವೇ ಆಗಿದ್ದಾ? ಅಥವಾ ಬೇರೆ ಏನಾದರು ಪವಾಡ ನಡೆಯಿತಾ? ಎಂಬ ಚರ್ಚೆಗಳು ಶುರುವಾಗಿದೆ. ಒಟ್ಟಿನಲ್ಲಿ ದೇವರಿಗಾಗಿ ತಂದಿದ್ದ ಕುರಿಗಳ ಜೀವ ಸದ್ಯದ ಮಟ್ಟಿಗೆ ಉಳಿದಂತೆ ಕಾಣಿಸುತ್ತಿದೆ ಎಂಬ ಹಾಸ್ಯದ ಮಾತುಗಳು ಕೇಳಿ ಬಂದಿವೆ.


