ಕಾಡು ಹಂದಿ ಭೇಟೆಯಾಡಿದ್ದ ಮೂವರ ವಿರುದ್ಧ ಕೇಸು – ಮಾಂಸ ವಶಕ್ಕೆ..!

ಸಾಗರ : ತಾಲ್ಲೂಕಿನ ಬಾಳೆಗುಂಡಿ ಗ್ರಾಮದಲ್ಲಿ ಅಕ್ರಮ ಕಾಡುಹಂದಿ ಮಾಂಸ ಹಂಚಿಕೆ ಮಾಡಿಕೊಳ್ಳುತ್ತಿದ್ದ ಮೂವರ ವಿರುದ್ದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಬಾಳೆಗುಂಡಿ ಗ್ರಾಮದ ಕೆರೆದಂಡೆಯ ಮೇಲೆ ಮೂವರು ಕಾಡುಹಂದಿ ಮಾಂಸ ಹಂಚಿಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ ಮೂವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ನಾಲ್ಕೂವರೆ ಕೆ.ಜಿ. ಮಾಂಸವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಪ್ರಭಾಕರ್, ಗಣಪತಿ ಮತ್ತು ಅಣ್ಣಪ್ಪ ಎಂಬುವವರ ವಿರುದ್ದ ಅರಣ್ಯ ರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಡಿಎಫ್‍ಓ ಮತ್ತು ಎಸಿಎಫ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಿರಣ್, ವಲಯ ಅರಣ್ಯಾಧಿಕಾರಿ ಅಣ್ಣಪ್ಪ, ಸಿಬ್ಬಂದಿಗಳಾದ ಸುರೇಶ್, ಬಸವರಾಜ್, ಸುನಿತಾ ಇನ್ನಿತರರು ಪಾಲ್ಗೊಂಡಿದ್ದರು.