ಜಾತಿಗಣತಿ ಜಾರಿಗೆ ಹೊಸನಗರ ತಾಲೂಕ್ ವೀರಶೈವ ಲಿಂಗಾಯತ ಮಹಾಸಭಾ ವಿರೋಧ

ರಿಪ್ಪನ್ ಪೇಟೆ : ಕಾಂತರಾಜ್ ಆಯೋಗದ ಅವೈಜ್ಞಾನಿಕ ಜಾತಿಗಣತಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ಅಖಿಲಾ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ್ ಅಧ್ಯಕ್ಷ ಅಧ್ಯಕ್ಷ ಉಮೇಶ್ ಮಸರೂರು ಹೇಳಿದರು.
ಪಟ್ಟಣದ ಶಿವಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮಾಧ್ಯಮಗಳಲ್ಲಿ ಬರುತ್ತಿರುವ ಜಾತಿಗಣತಿ ಸುದ್ದಿಯಂತೆ ನಮ್ಮ ಸಮುದಾಯದ ಸಂಖ್ಯೆಯನ್ನು ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಎಂದು ತೋರಿಸಲಾಗುತ್ತಿದೆ. ಆದರೆ ಇವೆರೆಡು ಒಂದೇಯಾಗಿವೆ. ಮಾಧ್ಯಮಗಳಲ್ಲಿ ಬಂದಿರುವ ವರದಿಯಂತೆ ನಮ್ಮ ಜನಸಂಖ್ಯೆ ತುಂಬ ಕಡಿಮೆಯನ್ನು ತೋರಿಸಲಾಗಿದೆ. ನಾವು ರಾಜ್ಯದಲ್ಲಿ ಸುಮಾರು ೨ ಕೋಟಿ ಜನರಿದ್ದೇವೆ. ಆದರೆ ಈ ಸಂಖ್ಯೆ ತಪ್ಪಾಗಿದ್ದು, ಕೇವಲ ೭೫ ಲಕ್ಷ ಎಂದು ಹೇಳಲಾಗುತ್ತಿದೆ. ಇದು ಸರಿಯಲ್ಲ ಆದ್ದರಿಂದ ಯಾವುದೇ ಕಾರಣಕ್ಕೂ ಸರ್ಕಾರ ಈ ವರದಿಯನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿದರು.ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚೆ ಕೂಡ ಮಾಡಬಾರದು. ವರದಿಯೇ ಅಪೂರ್ಣವಾಗಿ ರುವಾಗ ಅವೈಜ್ಞಾನಿಕವಾಗಿರುವವಾಗ ಹೇಗೆ ಇದನ್ನು ಜಾರಿ ಮಾಡಲು ಸಾಧ್ಯ. ಒಂದು ಪಕ್ಷ ಜಾರಿ ಮಾಡಲು ಹೊರಟಿದ್ದೇ ಆದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಪಕ್ಷಾತೀತವಾಗಿ ಮಾಡುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ದುಂಡುರಾಜಪ್ಪ ಗೌಡ , ವೇದಾಂತಪ್ಪಗೌಡ , ಕರುಣೇಶ್ವರ ಡಿ ಎಸ್ , ಲೀಲಾ ಆರ್ ಶಂಕರ್ , ಈಶ್ವರಪ್ಪಗೌಡ ನೆವಟೂರು , ಮಲ್ಲಿಕಾರ್ಜುನ್ , ಕುಮಾರಸ್ವಾಮಿ , ತೀರ್ಥೇಶ್ ಬಟ್ಟೆಮಲ್ಲಪ್ಪ , ಹಾಗೂ ಕಗ್ಗಲಿ ಲಿಂಗಪ್ಪ ಇದ್ದರು.