ಅಂತರ್ ಜಿಲ್ಲಾ ಕುಖ್ಯಾತ ಕಳ್ಳನ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು

ಅಂತರ್ ಜಿಲ್ಲಾ ಕುಖ್ಯಾತ ಕಳ್ಳನ ಹೆಡೆಮುರಿ ಕಟ್ಟಿದ ಬಂಕಾಪುರ ಪೊಲೀಸರು

ಬಂಕಾಪುರ : ವಿವಿಧ ಜಿಲ್ಲೆಗಳಲ್ಲಿ ಮನೆಗಳಿಗೆ ಕನ್ನ ಹಾಕಿ ನಗ, ನಗದು ಕಳವು ಮಾಡಿದ್ದ ಅಂತರ ಜಿಲ್ಲಾ ಕಳ್ಳ ಜಗದೀಶ್ ಅಲಿಯಾಸ್‌ ಕಣ್ಣನಹಳ್ಳಿ ಜಗ್ಗ ಎಂಬಾತನನ್ನು ಬಂಕಾಪುರ ಠಾಣೆ ಪಿಎಸ್ ಐ ನಿಂಗರಾಜ್ ಕೆ ನೇತ್ರತ್ವದ ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಗದೀಶ್ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲ್ಲೂಕಿನ ಕಣ್ನನಹಳ್ಳಿ ಗ್ರಾಮದವನು. ಆರೋಪಿಯಿಂದ ಒಟ್ಟು 100600/- ಹಣ ಮತ್ತು ಕಳ್ಳತನ ಮಾಡಲು ಉಪಯೋಗಿಸಿದ ಸ್ವತ್ತುಗಳು 696,400/- ಹೀಗೆ ಎಲ್ಲಾ ಒಟ್ಟು 797,000/ರೂಗಳ ವಸ್ತುಗಳನ್ನು ಜಪ್ತ ಮಾಡಿ ವಶಕ್ಕೆ ಪಡೆಯಲಾಗಿದೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳ ಪಡಿಸಿದಾಗ ಆರೋಪಿತನು ಅಂತರ ಜಿಲ್ಲಾ ವೃತ್ತಿಪರ ಕುಖ್ಯಾತ ಕಳ್ಳತನಾಗಿದ್ದು ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟಗಳ ಬಾಗಿಲನ್ನು ಹಾರಿಯಿಂದ ಮುರಿದು ಕಳ್ಳತನ ಮಾಡುತ್ತಾ ಬಂದಿದ್ದು ಈಗಾಗಲೆ ಈತನ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 54 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಹಾವೇರಿ ಜಿಲ್ಲೆಯ ಕಾಕೋಳ, ಕಜ್ಜರಿ ಬಾರ್ ಗಳಲ್ಲಿ ಕಳ್ಳತನ ಮಾಡಿಕೊಂಡ ಬಗ್ಗೆ ಒಪ್ಪಿಕೊಂಡಿದ್ದು ಆರೋಪಿತನು ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡು ಹೀಗೆ ಕಳ್ಳತನ ಮಾಡುತ್ತಾ ಬಂದಿದ್ದಾನೆ.

ಘಟನೆಯ ಹಿನ್ನಲೆ:

ಬಂಕಾಪೂರ ಪಟ್ಟಣದ ಸುರೇಶ್ ಎಂಬುವವರ ಮಾಲೀಕತ್ವದ ಮಾಲತೇಶ ಬಾರ್ ಆಂಡ ರೆಸ್ಟೋರೆಂಟ್‌ದಲ್ಲಿ ಯಾರೋ ಕಳ್ಳರು ದಿನಾಂಕ:18-03-2025 ರಂದು ಸೆಟ್ರಸ್‌ನ್ನು ಹಾರಿಯಿಂದ ಮುರಿದು ಡ್ರಾದಲ್ಲಿದ್ದ ಒಟ್ಟು 1600/- ರೂಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ಬಂಕಾಪೂರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಹಾವೇರಿ ಜಿಲ್ಲೆ ಎಸ್ಪಿ ಅಂಶುಕುಮಾರ್, ಅಡಿಷನಲ್ ಎಸ್ ಪಿ ಎಲ್ ವೈ ಶಿರವಾಳ ಮತ್ತು ಶಿಗ್ಗಾಂವ್ ಪ್ರಭಾರ ಡಿಎಸ್ಪಿ ಎಮ್ ಎಸ್ ಪಾಟೀಲ್ ಮಾರ್ಗದರ್ಶನ  ಶಿಗ್ಗಾವಿ ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಅನಿಲ್ ರಾಥೋಡ್ ಸಾರಥ್ಯದಲ್ಲಿ ಪಿಎಸ್ ಐ ನಿಂಗರಾಜ ಕರಕಣ್ಣನವರ, ಎಸ್.ಎಮ್ ವನಹಳ್ಳಿ ನೇತೃತ್ವದಲ್ಲಿ ತಂಡವು ಬಾರ ಸೆಟ್ರಸ್ ಮುರಿದು ಕಳ್ಳತನ ಮಾಡಿದ ಆರೋಪಿತರ ಪತ್ತೆಗಾಗಿ ತನಿಖೆ ನಡೆಸಿ ದಿನಾಂಕ:15-04-2025 ರಂದು ಸದರ ಪ್ರಕರಣದ ತನಿಖೆ ಕೈಕೊಂಡು ಬಂಕಾಪೂರ-ಹಾವೇರಿ ರಸ್ತೆಯ ಪೊಲೀಸ್ ಠಾಣೆಯ ಮುಂದೆ ವಾಹನಗಳನ್ನು ಪರಿಶೀಲಿಸುತ್ತಿದ್ದಾಗ ಹಾವೇರಿ ಕಡೆಯಿಂದ ಒಬ್ಬ ಒಂದು ಕಾರನ್ನು ಚಲಾಯಿಸಿಕೊಂಡು ಬಂದಿದ್ದು ತನ್ನ ಬಗ್ಗೆ ಅನುಮಾನ ಬರುವಹಾಗೆ ಮಾತನಾಡಿದ್ದು ನಂತರ ವಿಚಾರಿಸಿದಾಗ ನಾನು ಈ ವಾಹನವನ್ನು ಕಳ್ಳತನ ಮಾಡಲು ಬಾಡಿಗೆ ತೆಗೆದುಕೊಂಡು ಉಪಯೋಗಿಸುತ್ತಾ ಬಂದಿದ್ದು ಅದೆ ಅದರಂತೆ ದಿನಾಂಕ:18-032025 ರಂದು ಮುಂಜಾನೆ 03-00 ಗಂಟೆಗೆ ಬಂಕಾಪೂರದ ಮಾಲತೇಶ್ ಬಾರ್ ಸೆಟ್ರಸನ್ನು ಹಾರಿಯಿಂದ ಮುರಿದು ಒಳಗೆ ಹೋಗಿ ಡ್ರಾದಲ್ಲಿದ್ದ ಒಟ್ಟು 1600/- ರೂಗಳ ನಾಣ್ಯಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಅದೆ ಅಂತಾ ಹೇಳಿ ತನ್ನ ಬಳಿ ಇದ್ದ ವಸ್ತುಗಳನ್ನು ಹಾಜರುಪಡಿಸಿದ್ದಾನೆ.

1] ಒಂದು ಇಥೋಸ್ ಬಿ ಬಣ್ಣದ ಕಾರ ನಂ: ಕೆಎಂ3 ಎಎಮ್ 3560 ನೇದ್ದು ಅಕಿ:600,000/- ರೂಗಳು.

2] 02 ಕಬ್ಬಿಣದ ಹಾರಿಗಳು ಅಕಿ 1000/- ರೂಗಳು,( ಒಂದು ಬದಿ ಮೂನೆ ಚೂಪಾಗಿರುತ್ತದೆ)

3] ಒಂದು ಕಬ್ಬಿಣದ ಕೋಯಿತಾ 20 ಇಂಚು ಉದ್ದ ಇದ್ದಿದ್ದು. ಅಕಿ:50/- ರೂಗಳು ( ಒಂದು ಬದಿ ಹರಿತವಾಗಿರುತ್ತದೆ)

4] 01 ಎಸ್ ಎಸ್ ಮೆಟಲ್ ಇಂಚು ಪಟ್ಟ 24 ಇಂಚು ಉದ್ದ ಇದ್ದಿದ್ದು ಅಕಿ 200/- ರೂಗಳು

5] ಒಂದು ಟಿಸಿಎಚ್ ಕಂಪನಿಯ ಬ್ಯಾಟರಿ ಚಾಲಿತ ಕಟ್ಟ‌ ಮಷೀನ್‌ ಬ್ಯಾಟರಿ ಸಮೇತ ಅಕಿ:5000/-ರೂಗಳು. 6] ಒಂದು ಸೇಲ್ ಬ್ಯಾಟರಿ ಅಕಿ:100/- ರೂಗಳು.

7] ರೂಖ ಹಣ 100600/- ರೂಗಳು. (ಇದರಲ್ಲಿ 1600/- ನಾಣ್ಯಗಳು ಇವೆ).

8] 06 ಬೇರೆ ಬೇರೆ ಕಂಪನಿಯ ಮೊಬೈಲ್ ಪೋನಗಳು 90000/- ರೂಗಳು ನ, ಹೀಗೆ ಆರೋಪಿತನಿಂದ ಒಟ್ಟು 100600/- ರೂ ಹಣ ಮತ್ತು ಕಳ್ಳತನ ಮಾಡಲು ಉಪಯೋಗಿಸಿದ ಸ್ವತ್ತುಗಳು 696,400/- ಹೀಗೆ ಎಲ್ಲಾ ಒಟ್ಟು 797,000/ರೂಗಳ ವಸ್ತುಗಳನ್ನು ಜಪ್ತ ಮಾಡಿ ವಶಕ್ಕೆ ಪಡೆಯಲಾಗಿದೆ.

ಪಿಎಸ್ ಐ ನಿಂಗರಾಜ್ ಕೆ ಹಾಗೂ ಎಮ್ ಎಸ್ ವನಹಳ್ಳಿ ಪಿಎಸೈ 2 ಹಾಗೂ ಸಿಬ್ಬಂದಿಯವರಾದ ವೆಂಕಟೇಶ್ ಲಮಾಣಿ,ಗೋವಿಂದ ಲಮಾಣಿ,ಬೀರಪ್ಪ ಕಳಮನಿ ,ಏ ಕೆ ನದಾಫ್, ಕರಬಸಪ್ಪ ಹಾವಣಗಿ , ತಾಂತ್ರಿಕ ವಿಭಾಗದ ಮಾರುತಿ ಹಾಲಬಾವಿ , ಸತೀಶ್ ಮಾರಕಟ್ಟೆ , ಶಶಿಧರ ನೇದವರಿಗೆ ಮಾನ್ಯ ಪೊಲೀಸ ಅಧೀಕ್ಷಕರು ಹಾವೇರಿ ಜಿಲ್ಲೆ, ಹಾವೇರಿ ರವರು ಪ್ರಕರಣದಲ್ಲಿ ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Leave a Reply

Your email address will not be published. Required fields are marked *