Headlines

11 ಕೆ ವಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ – ತಪ್ಪಿದ ಭಾರಿ ಅನಾಹುತ

ಆನಂದಪುರ : ಭಾರಿ ಪ್ರಮಾಣದ ಇಬ್ಬನಿ ಸುರಿಯುತಿದ್ದ ಕಾರಣ ಕಾರು ಚಾಲಕನ ನಿಯಂತ್ರಣ ತಪ್ಪಿ 11 ಕೆ ವಿ ಲೈಟ್ ಕಂಬಕ್ಕೆ ಡಿಕ್ಕಿಯಾಗಿರುವ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ನಡೆದಿದೆ. ಆಚಾಪುರದ ರಾಷ್ಟ್ರೀಯ ಹೆದ್ದಾರಿ 206ರ ಶಿವಮೊಗ್ಗದಿಂದ ಸಾಗರ ಕಡೆಗೆ ಬರುತ್ತಿದ್ದ ಕಾರು 11 ಕೆವಿ ವಿದ್ಯುತ್ ಸಾಮರ್ಥ್ಯವಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್ ಕಂಬ ಸಂಪೂರ್ಣ ಜಖಂಗೊಂಡಿದ್ದು, ಕಾರಿನ ಮುಂಭಾಗ ಕೂಡ ಜಖಂಗೊಂಡಿದೆ. ಮಂಗಳವಾರ ಮುಂಜಾನೆ ಭಾರಿ ಪ್ರಮಾಣದ ಇಬ್ಬನಿ ಬೀಳುತ್ತಿದ್ದ…

Read More

ವಿದ್ಯುತ್ ಶಾಕ್ ನಿಂದ ಬಿಕಾಂ ವಿದ್ಯಾರ್ಥಿ ಸಾವು ಶಂಕೆ – ಕೇಸ್ ದಾಖಲು

ವಿದ್ಯುತ್ ಶಾಕ್ ನಿಂದ ಬಿಕಾಂ ವಿದ್ಯಾರ್ಥಿ ಸಾವು ಶಂಕೆ – ಕೇಸ್ ದಾಖಲು ಹೊಳೆಹೊನ್ನೂರು , ಜ. 6: ಅಡಕೆ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗಮಧ್ಯೆ ಅಸುನೀಗಿದ ಘಟನೆ, ಭದ್ರಾವತಿ ತಾಲೂಕು ಹೊಳೆಹೊನ್ನೂರು ಸಮೀಪದ ಕನಸಿನಕಟ್ಟೆ ಗ್ರಾಮದಲ್ಲಿ ಜ. 5 ರ ಸಂಜೆ ನಡೆದಿದೆ. ದರ್ಶನ್ (20) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಹೊಳೆಹೊನ್ನೂರು ಸರ್ಕಾರಿ ಕಾಲೇಜ್ ನಲ್ಲಿ, ಅಂತಿಮ ವರ್ಷದ ಬಿಕಾಂ ಅಭ್ಯಾಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ. ಭಾನುವಾರ…

Read More

ಬ್ರೋಕರ್ ಮೂಲಕ ಮದುವೆಯಾದ ಯುವಕ | ಒಂದೇ ತಿಂಗಳಿಗೆ ಹೆಂಡತಿ , ಬ್ರೋಕರ್ ಇಬ್ಬರು ಎಸ್ಕೇಪ್ – ಸಿಂಗಲ್ಸ್ ನೋಡಲೇಬೇಕಾದ ಸುದ್ದಿ.!!

ಬ್ರೋಕರ್ ಮೂಲಕ ಮದುವೆಯಾದ ಯುವಕ | ಒಂದೇ ತಿಂಗಳಿಗೆ ಹೆಂಡತಿ , ಬ್ರೋಕರ್ ಇಬ್ಬರು ಎಸ್ಕೇಪ್ – ಸಿಂಗಲ್ಸ್ ನೋಡಲೇಬೇಕಾದ ಸುದ್ದಿ.!! ಶಿವಮೊಗ್ಗ: 30 ದಾಟಿದ ಯುವಕರಿಗೆ ಈಗ ಹುಡುಗಿಯರು ಸಿಗೋದೇ ಕಠಿಣವಾಗಿದೆ. ಹೀಗಾಗಿ ಜನರು ಮ್ಯಾರೆಜ್ ಬ್ರೋಕರ್ ಮೊರೆ ಹೋಗುತ್ತಿದ್ದಾರೆ. ಹೀಗೆ ಮ್ಯಾರೆಜ್ ಬ್ರೋಕರ್ ಬಳಿ ಹೋಗಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಯಾಮಾರಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ್ನಲ್ಲಿ ನಡೆದಿದೆ.ಶಿವಮೊಗ್ಗದ ಮಂಜುಳಾ ಸೇರಿ 7 ಜನರ ಮೇಲೆ ಪ್ರಕರಣ ದಾಖಲು. ಮುಧೋಳ್ ತಾಲೂಕಿನ…

Read More

SORABA | ನರ್ಸ್ ಮಾಂಗಲ್ಯ ಸರ ಕಿತ್ತು ಪರಾರಿಯಾದ ಕಳ್ಳರು

SORABA | ನರ್ಸ್ ಮಾಂಗಲ್ಯ ಸರ ಕಿತ್ತು ಪರಾರಿಯಾದ ಕಳ್ಳರು ಸೊರಬ: ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು ಮಾಂಗಲ್ಯ ಸರವನ್ನು ಕಳ್ಳರು ಕಿತ್ತು ಪರಾರಿಯಾದ ಘಟನೆ ಶನಿವಾರ ರಾತ್ರಿ 10.30ರ ಸುಮಾರಿಗೆ ಪಟ್ಟಣದ ಚಾಮರಾಜ ಪೇಟೆಯಲ್ಲಿ ನಡೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀ ಬಾಯಿ  ಮಾಂಗಲ್ಯ ಸರ ಕಳೆದುಕೊಂಡವರು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ಮರಳುವಾಗ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಮಹಿಳೆಯ ಗಮನವನ್ನು ಬೇರೆಡೆ…

Read More

ಮನೆ ಕಳವು ಮಾಡಿದ್ದ ಮೂವರ ಬಂಧನ – 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮನೆ ಕಳವು ಮಾಡಿದ್ದ ಮೂವರ ಬಂಧನ – 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ಭದ್ರಾವತಿ , ಜ. 4: ಮನೆಗಳ್ಳನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಳೆಹೊನ್ನೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಘಟನೆ ನಡೆದಿದೆ. ಭದ್ರಾವತಿ ತಾಲೂಕು ತಿಮ್ಲಾಪುರದ ಕೊರಚರಹಟ್ಟಿ ಗ್ರಾಮದ ನಿವಾಸಿಗಳಾದ ದರ್ಶನ್ (21), ಧನಂಜಯ (24) ಹಾಗೂ ರವಿ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. 28-12-2024 ರಂದು ಸದರಿ ಆರೋಪಿಗಳನ್ನು…

Read More

ಕಾಡುಹಂದಿ ಬೇಟೆಯಾಡಿದ ಇಬ್ಬರ ಬಂಧನ

ಕಾಡುಹಂದಿ ಬೇಟೆಯಾಡಿದ ಇಬ್ಬರ ಬಂಧನ ಶಿಕಾರಿಪುರ: ಕಾಡು ಹಂದಿಯನ್ನು ಬೇಟೆಯಾಡಿದ ಅಪರಾಧ ಸಂಬಂಧ ಇಬ್ಬರನ್ನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಬಂಧಿಸಲಾಗಿದೆ.  ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಬಳಿಯ ಗಂಗಹೊನಸರ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಹಳೇಜೋಗದ ಲೋಕೇಶ್ ಹಾಗೂ ಮೈಲಾರಿ ಎನ್ನುವವರನ್ನು  ಬಂಧಿಸಿದ್ದಾರೆ. ಬೇಟೆಯಾಡಿದ ಕಾಡು ಹಂದಿಯ ಮಾಂಸವನ್ನು ಪಾಲು ಮಾಡಿಕೊಳ್ಳುವಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೂ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವರು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಗರ ವಿಭಾಗದ…

Read More

ಬಿರಿಯಾನಿ ತಿನ್ನಲು ಹೋಗಿದ್ದ ವ್ಯಕ್ತಿ ಮೇಲೆ ಬಿಯರ್ ಬಾಟಲ್ , ಮಚ್ಚಿನಿಂದ ಹಲ್ಲೆ – ದೂರು ದಾಖಲು

ಬಿರಿಯಾನಿ ತಿನ್ನಲು ಹೋಗಿದ್ದ ವ್ಯಕ್ತಿ ಮೇಲೆ ಬಿಯರ್ ಬಾಟಲ್ , ಮಚ್ಚಿನಿಂದ ಹಲ್ಲೆ – ದೂರು ದಾಖಲು ಬಿರಿಯಾನಿ ತಿನ್ನಲು ಹೊಟೇಲ್ ಗೆ ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಮಚ್ಚು ಮತ್ತು ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರಿನ ಕನಸಿನಕಟ್ಟೆ ರಸ್ತೆಯ ಬಾರ್ ನಲ್ಲಿ ನಡೆದಿದೆ. ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ, ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಳೆಹೊನ್ನೂರಿನ ಉಪ್ಪಾರರ ಬೀದಿಯ ರವಿ ಹಲ್ಲೆಗೊಳಗಾದವರು. ಕನಸಿನಕಟ್ಟೆ ರಸ್ತೆಯಲ್ಲಿರುವ ಬಾರ್‌ನಲ್ಲಿ ಘಟನೆ ಸಂಭವಿಸಿದೆ. ರವಿ…

Read More

ಗಾಂಧಿ ಬಜಾರ್ ನಲ್ಲಿ ಎರಡು ಚೀಲ ಗೋಮಾಂಸ ಪತ್ತೆ

ಗಾಂಧಿ ಬಜಾರ್ ನಲ್ಲಿ ಎರಡು ಚೀಲ ಗೋಮಾಂಸ ಪತ್ತೆ SHIVAMOGGA | ಗಾಂಧಿ ಬಜಾರ್ ನ ಮಸೀದಿಯ ರಸ್ತೆಯಲ್ಲಿ ಮಾಂಸ ಸಾಗಾಣಿಕೆ ವೇಳೆ ಮೂವರ ನಡುವೆ ಗಲಾಟೆಯಾಗಿದ್ದು ಎರಡು ಮೂಟೆ ಮಾಂಸ ಮತ್ತು ಚರ್ಮ, ಗೋಮೂಳೆಗಳು ಪತ್ತೆಯಾಗಿದೆ.  ಗಾಂಧಿ ಬಜಾರ್ ನ ಮಸೀದಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಗೋಮಾಂಸ ಇದೆ ಎನ್ನಲಾದ ಎರಡು ಮೂಟೆಗಳನ್ನ ಹೊತ್ತು ಬರುವಾಗ ಈರ್ವರು ತಡೆದಿದ್ದಾರೆ. ಚೀಲವನ್ನ ಬಿಸಾಕಿ ತಡೆದ ವ್ಯಕ್ತಿಗೆ ಹೊಡೆದು ದ್ವಿಚಕ್ರ ವಾಹನ ಸವಾರಿಬ್ವರು ಪರಾರಿಯಾಗಿದ್ದಾರೆ.  ಈ ವೇಳೆ…

Read More

ಡಾ. ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ

ಡಾ. ಧನಂಜಯ ಸರ್ಜಿ ಹೆಸರಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ ಶಿವಮೊಗ್ಗ : ಜ. 3: ಹೊಸ ವರ್ಷದ ದಿನದಂದು  ವಿಧಾನ ಪರಿಷತ್ ಸದಸ್ಯ ಡಾ!! ಧನಂಜಯ ಸರ್ಜಿ  ಹೆಸರಿನಲ್ಲಿ, ದುಷ್ಕರ್ಮಿಗಳು ಶಿವಮೊಗ್ಗದ ಮೂವರು ಪ್ರಮುಖರಿಗೆ ಕೋರಿಯರ್ ಮೂಲಕ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನಿಸಿದ್ದ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಎನ್ಇಎಸ್ ಸಂಸ್ಥೆಯ ಕಾರ್ಯದರ್ಶಿ ನಾಗರಾಜ್, ವೈದ್ಯರಾದ ಡಾ!!  ಅರವಿಂದ್ ಹಾಗೂ ಡಾ!! ಕೆ ಎಸ್ . ಪವಿತ್ರ ಅವರಿಗೆ ತಮ್ಮ ಹೆಸರಿನಲ್ಲಿ ಸ್ವೀಟ್ ಬಾಕ್ಸ್…

Read More

ಲೋಕಾಯುಕ್ತ ದಾಳಿ – ಲಕ್ಷಾಂತರ ರೂ ಲಂಚ ಪಡೆಯುತಿದ್ದ ಇಬ್ಬರು ಅಧಿಕಾರಿಗಳ ಬಂಧನ

ಲೋಕಾಯುಕ್ತ ದಾಳಿ – ಲಕ್ಷಾಂತರ ರೂ ಲಂಚ ಪಡೆಯುತಿದ್ದ ಇಬ್ಬರು ಅಧಿಕಾರಿಗಳ ಬಂಧನ ಗುತ್ತಿಗೆದಾರರೊಬ್ಬರಿಗೆ ಹಣ ಮಂಜೂರು ಮಾಡಲು 1.20 ಲಕ್ಷ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕು ಗೋಂದಿಯ ಭದ್ರಾ ಬಲದಂಡೆ ನಾಲೆಯ ಸಿಲ್ಟ್‌ ತೆಗೆಯುವ ಕಾಮಗಾರಿಯು 2024ರ ಜನವರಿಯಲ್ಲಿ ಪೂರ್ಣಗೊಂಡಿತ್ತು. ಆದರೆ ಟೆಂಡರ್‌ ಹಣ 9.16 ಲಕ್ಷ ರೂ. ಗುತ್ತಿಗೆದಾರರಿಗೆ ಮಂಜೂರಾಗಿರಲಿಲ್ಲ. ಹಾಗಾಗಿ ಗುತ್ತಿಗೆದಾರ ವಿ.ರವಿ ಹಲವು ಬಾರಿ ಹಣ…

Read More