ಶಿಕಾರಿಪುರ : ಪೊಲೀಸರು ಯುವಕನ ಮೇಲೆ ಹಲ್ಲೆ ನೆಡೆಸಿದ್ದಾರೆ ಎಂದು ಮನನೊಂದು ಯುವಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾಲೂಕಿನ ಅರಶಿಣಗೆರೆಯಲ್ಲಿ ನೆಡೆದಿದೆ.
ಅರಶಿಣಗೆರೆ ಸಚ್ಚಿನ್ (24) ವಿಷ ಸೇವಿಸಿದ ಯುವಕ.
ಕಳೆದ ಎರಡು ದಿನಗಳ ಹಿಂದೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಯುವಕನ ಮೇಲೆ ಏಕಾಏಕಿ ಪೊಲೀಸರು ಹಲ್ಲೆ ಮಾಡಿದ್ದೂ ಊರಿನ ಜನರ ಮುಂದೆ ಅವಮಾನ ಸಹಿಸದೆ ಯುವಕ ಸಚಿನ್ ವಿಷ ಸೇವನೆ ಮಾಡಿದ್ದಾನೆ.
ವಿಷಯ ತಿಳಿದ ತಕ್ಷಣ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸದ್ಯಕ್ಕೆ ಪ್ರಾಣಾಪಾಯದಿಂದ ಸಚಿನ್ ಪಾರಾಗಿದ್ದು ಹಲ್ಲೆಗೆ ಕಾರಣ ತಿಳಿಸುವಂತೆ ಗ್ರಾಮದ ಯುವಕರು ಪಟ್ಟು ಹಿಡಿದಿದ್ದಾರೆ.
ಅಷ್ಟೇ ಅಲ್ಲದೆ ಬಿಜೆಪಿ ಸ್ಥಳೀಯ ನಾಯಕನ ಕುಮ್ಮಕ್ಕಿನಿಂದ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬಸ್ಥರು ದೂರು ನೀಡಿದರೆ ಪೊಲೀಸರಿಂದ ದೂರು ದಾಖಲು ಮಾಡಲು ನಿರಾಕರಣೆ ಮಾಡಲಾಗಿದ್ದು ಪೊಲೀಸರ ನಡೆಗೆ ಕುಟುಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.