ರಿಪ್ಪನ್ ಪೇಟೆ : ಚಿಕ್ಕ ಜೇನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರಕ್ಕಿ ಗ್ರಾಮದ ನಿವಾಸಿ ರಾಜಪ್ಪ (63) ಅವರು ಸಾಲ ಬಾಧೆ ತಾಳಲಾರದೆ ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ರಾತ್ರಿ ಜಮೀನಿಗೆ ತೆರಳಿದ ಅವರು ಗುರುವಾರ ಬೆಳಿಗ್ಗೆ ವರೆಗೆ ಮನೆಗೆ ಬಾರದ ಕಾರಣ ಕುಟುಂಬಸ್ಥರು ಹುಡುಕಲು ಹೊರಟಾಗ ಶುಂಠಿ ಗದ್ದೆಯಲ್ಲಿ ಕಳೆ ನಾಶಕ ಸೇವಿಸಿ ಸಾವನ್ನಪ್ಪಿರುವುದು ಕಂಡು ಬಂದಿದೆ.
ಕೊಡೂರು ಕೆನರಾ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್,ವಿವಿಧ ಸಂಘ ಸೇರಿದಂತೆ ವಿವಿದೆಡೆ ಖಾಸಗಿಯಾಗಿ ಕೈ ಸಾಲ ಪಡೆದುಕೊಂಡಿದ್ದರು ಎನ್ನಲಾಗಿದೆ.
ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಕಂದಾಯ ಇಲಾಖೆಯ ಉಪ ತಹಸಿಲ್ದಾರ್ ಹಾಗೂ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಸ್ಥಳಪರಿಶೀಲನೆ ನಡೆಸಿದರು.
ಈ ಕುರಿತು ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.