ಶಿವಮೊಗ್ಗ : ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ವಿನೋಬ ನಗರ ಪೊಲೀಸರು ದಾಳಿ ನಡೆಸಿ ಎರಡು ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್, ಎರಡು 3 ಕೆಜಿಯ ಸಿಲಿಂಡರ್, ರೀಫಿಲ್ಲಿಂಗ್ ರಾಡು ಪೈಪ್ ಗಳನ್ನ ವಶಪಡಿಸಿಕೊಳ್ಳಲಾಗಿದೆ ಓರ್ವನನ್ನ ಬಂಧಿಸಲಾಗಿದೆ.
ವಿನೋಬ ನಗರದ 5 ನೇ ತಿರುವಿನಲ್ಲಿ ಬಸವೇಶ್ವರ ಎಂಟರ್ ಪ್ರೈಸಸ್ ನಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಜಾಗದ ಮೇಲೆ ಪಿಐ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಸಣ್ಣ ಪೈಪ್ ಮೂಲಕ ದೊಡ್ಡ ಸಿಲಿಂಡರ್ ನಿಂದ ಚಿಕ್ಕ ಸಿಲಿಂಡರ್ ಗೆ ಗ್ಯಾಸ್ ತುಂಬಿಸಲಾಗುತ್ತಿತ್ತು.
ದಾಳಿ ನಡೆದ ವೇಳೆ ಸಾರ್ವಜನಿಕರು ಪರಾರಿಯಾಗಿದ್ದಾರೆ. ಕಾಶಿಪುರದ ಲಕ್ಕಪ್ಪ ಬಡಾವಣೆಯ ನಿವಾಸಿ ಹಾಗೂಎಂಟರ್ ಪ್ರೈಸಸ್ ನ ಮಾಲೀಕ ಶಶಿಕುಮಾರ್ ಎಂಬುವರನ್ನ ಬಂಧಿಸಲಾಗಿದೆ. ಎಂಟರ್ ಪ್ರೈಸಸ್ ಹಳೆಯ ಗ್ಯಾಸ್ ಸ್ಟೋವ್ ಗಳನ್ನು ರಿಪೇರಿ ಮಾಡುವ ಮತ್ತು ಬಿಡಿ ಭಾಗಗಳನ್ನು ಮಾರಾಟ ಮಾಡುವ ಅಂಗಡಿಯಾಗಿದೆ.
ಅಂಗಡಿಯಲ್ಲಿ, ಗ್ಯಾಸ್ ರೀ ಫಿಲಿಂಗ್ ಗೆ ಬಳಸಿದ 02 ದೊಡ್ಡ ಸಿಲಿಂಡರ್ ಗಳಿದ್ದು ಅದರಲ್ಲಿ ಹೆಚ್ ಪಿ ಕಂಪನಿಯ 16.1 ಕೆ ಜಿ ಸಾಮರ್ಥ್ಯದ ತುಂಬಿದ ಸಿಲಿಂಡರ್, ಇನ್ನೊಂದು ಬಾರತ್ ಗ್ಯಾಸ್ ಕಂಪನಿಯ 15.7 ಕೆ ಜಿ ಸಾಮರ್ಥ್ಯದ ಅರ್ಧ ತುಂಬಿದ ಸಿಲಿಂಡರ್, 03 ಕೆ ಜಿ ಸಾಮರ್ಥ್ಯದ 02 ಖಾಲಿ ಸಿಲಿಂಡರ್, ಒಂದು ಎಲೆಕ್ಟ್ರಾನಿಕ್ ತಕ್ಕಡಿ, ಒಂದು ರೀ ಫಿಲಿಂಗ್ ರಾಡ್ ಹಾಗೂ ರೆಗ್ಯುಲೇಟರ್ ಇರುವ ರೀ ಫಿಲಿಂಗ್ ಪೈಪ್ ದೊರೆತಿರುತ್ತದೆ.