POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಚಿರತೆ ಉಗುರು ಅಕ್ರಮ ಮಾರಾಟಕ್ಕೆ ಯತ್ನ – ಮಾಲು ಸಮೇತ ಆರೋಪಿ ಬಂಧನ|leopard

ಅಕ್ರಮವಾಗಿ ಚಿರತೆಯ ಉಗುರು ಮಾರಾಟ ಮಾಡಲು ಯತ್ನಿಸುತಿದ್ದ ವೇಳೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಪೊಲೀಸ್ ಅರಣ್ಯ ಸಂಚಾರಿ ದಳ ವಶಪಡಿಸಿಕೊಂಡ ಘಟನೆ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ನಡೆದಿದೆ.




ಖಚಿತ ಮಾಹಿತಿಯನ್ನು ಆಧರಿಸಿ ಶಿವಮೊಗ್ಗದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಬಳಿ ದಾಳಿ ನಡೆಸಿದ ಪೊಲೀಸ್ ಅರಣ್ಯ ಸಂಚಾರಿ ದಳ ಅಕ್ರಮವಾಗಿ ಚಿರತೆ ಉಗುರನ್ನು ಮಾರಾಟ ಮಾಡಲು ಯತ್ನಿಸುತಿದ್ದ ಸಿದ್ದಾಪುರ ನಿವಾಸಿ ಗಣಪತಿ ಬಿನ್ ಲಕ್ಷಣನಾಯ್ಕ್ ಎಂಬಾತನನ್ನು ಬಂಧಿಸಿ ಆರೋಪಿಯಿಂದ ಚಿರತೆ ಉಗುರುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗಿದೆ.




ದಾಳಿಯಲ್ಲಿ ಪಿಎಸ್ಐ ವಿನಾಯಕ. ಸಿಬ್ಬಂದಿಯವರಾದ  ಗಿರೀಶ, ಕೃಷ್ಣ ವಿಶ್ವನಾಥ್, ಗಣೇಶ್,ಮಹೇಶ್ ,ಚೈತ್ರಾ ಮತ್ತು ದಿನೇಶ ಇದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.