ಕೆಂಚನಾಲದಲ್ಲಿ ಯುವಕನಿಗೆ PFI ಸಂಘಟನೆ ಹೆಸರಿನಲ್ಲಿ ಜೀವ ಬೆದರಿಕೆ ಪ್ರಕರಣ – ಆರೋಪಿಯ ಬಂಧನ

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಕೆಂಚನಾಲ ಗ್ರಾಮದಲ್ಲಿ ಯುವಕನೊಬ್ಬ ನಿಗೆ ಪಿಎಫ಼್ ಐ ಸಂಘಟನೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣವಾದ instragram ನಲ್ಲಿ ಜೀವ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ.

ಆನಂದಪುರ ಸಮೀಪದ ಮುರುಘಾಮಠ ಗ್ರಾಮದ ಜಾವದ್ ಅಹಮ್ಮದ್ ಬಿನ್ ಇಪ್ತಿಕಾರ್ ಅಹಮದ್ ಬಂಧಿತ ಆರೋಪಿ.

ಕೆಂಚನಾಲ ಗ್ರಾಮದ ಸುಮಂತ್ ಎಂಬ ಯುವಕನಿಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಇನ್ಸ್ಟ್ರಾಗ್ರಾಮ್ ನಲ್ಲಿ only____pfi  ಎಂಬ ಖಾತೆಯಿಂದ ಜೀವ ಬೆದರಿಕೆ ಬಂದಿದೆ ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತುಂಬಾ ಕ್ಲಿಷ್ಟಕರವಾದ ಪ್ರಕರಣವನ್ನು ಬೇಧಿಸುವಲ್ಲಿ ರಿಪ್ಪನ್‌ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.ಆರೋಪಿಯನ್ನು ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗಿದೆ.

ಈ ಪ್ರಕರಣವನ್ನು ಹೊಸನಗರ ಸಿಪಿಐ ಗಿರೀಶ್ ಮಾರ್ಗದರ್ಶನದಲ್ಲಿ ಪಿಎಸ್ ಐ ಶಿವಾನಂದ್ ಕೆ ನೇತ್ರತ್ವದ ತಂಡದಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ , ರಾಮಚಂದ್ರ ,ಗುರು ,ವಿಜಯ್ ,ಇಂದ್ರೇಶ್ ಮತ್ತು ಉಮೇಶ್ ಪಾಲ್ಗೊಂಡಿದ್ದರು.


ಘಟನೆಯ ಹಿನ್ನಲೆ :

ಸಾಮಾಜಿಕ ಜಾಲತಾಣವಾದ Instagram ನ ಸಕ್ರೀಯ ಸದಸ್ಯನಾಗಿದ್ದ ಸುಮಂತ್ ಗೆ only___pfi  ಎಂಬ ಖಾತೆಯಿಂದ ಒಂದು ಪೋಸ್ಟ್ ಟ್ಯಾಗ್ ಮಾಡಲಾಗಿತ್ತು.ಆ ಪೋಸ್ಟ್ ನಲ್ಲಿ ಸುಮಂತ್ ಭಾವಚಿತ್ರದ ಮೇಲೆ ವಾರ್ನಿಂಗ್ ಎಂಬ ಪದ ಹಾಗೂ ಅಸಭ್ಯವಾದ ಬರಹಗಳನ್ನು ಬರೆಯಲಾಗಿತ್ತು. ಆದ್ದರಿಂದ ಕೂಡಲೇ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಸುಮಂತ್ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

Leave a Reply

Your email address will not be published. Required fields are marked *