ಸಾಲಭಾದೆಗೆ ಹೆದರಿ ಶಿವಮೊಗ್ಗ ದ ಮಿಳಘಟ್ಟದಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪರಂದಯ್ಯ(70), ದಾನಮ್ಮ (60)ಮತ್ತು ಮಂಜುನಾಥ್(25) ಮನೆಯಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.
ಶಿವಮೊಗ್ಗದ ಮಿಳಘಟ್ಟ ಮೊದಲನೇ ತಿರುವಿನಲ್ಲಿ ಪರಂದಯ್ಯ, ದಾನಮ್ಮ, ಮಂಜುನಾಥ್ ನಿನ್ನೆ ಸಾಲಕ್ಕೆ ಬೆದರಿ ವಿಷ ಸೇವಿಸಿದ್ದರು. ವೃದ್ಧರಿಬ್ಬರೂ ನಿನ್ನೆನೇ ಸಾವನ್ನಪ್ಪಿದರು.
ಶಿವಮೊಗ್ಗದ ಆನಂದರಾವ್ ಬಡಾವಣೆ ಹತ್ತಿರದ ಮಿಳಗಟ್ಟ ಕೆರೆಅಂಗಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪರಂದಯ್ಯ ಕೂಲಿ ಕೆಲಸ ಮಾಡಿಕೊಂಡಿದ್ದು, ದಾನಮ್ಮ ಕಲ್ಲೂರು ಮಂಡ್ಲಿ ಪೇಪರ್ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಹೋಗುತಿದ್ದರು. ಅವರಿಗೆ ಮಕ್ಕಳಿರಲಿಲ್ಲ ಅವರು ಕಳೆದ 20 ವರ್ಷಗಳ ಹಿಂದೆ ಒಂದು ಗಂಡು ಮಗುವನ್ನು ದತ್ತು ಪಡೆದು ಸಾಕಿಕೊಂಡಿದ್ದರು.26 ವರ್ಷದ ಮಗನಿಗೆ ಪಾರ್ಶ್ವವಾಯು ಹೊಡೆದಿತ್ತು.
ಇತ್ತೀಚೆಗೆ ಪರಂದಯ್ಯರಿಗೆ ಕಣ್ಣು ಕಾಣದೆ ಮನೆಯಲ್ಲಿದ್ದರು. ಅತಿಯಾದ ಸಾಲ ಮಾಡಿಕೊಂಡಿದ್ದರು ಹೀಗಿರುವಾಗ ನಿನ್ನೆ ದಿನ ದಾನಮ್ಮ, ಪರಂದಯ್ಯ ಮತ್ತು ಅವರ ಮಗ ಮಂಜುನಾಥ ವಿಷ ಸೇವನೆ ಮಾಡಿದ್ದು ಬೆಳಗ್ಗೆ ಅಕ್ಕ ಪಕ್ಕದ ಮನೆಯವರು ನೋಡಿದಾಗ ವೃದ್ಧ ದಂಪತಿಗಳಿಬ್ಬರು ಮೃತಪಟ್ಟಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಮಂಜುನಾಥ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ವೃದ್ಧ ಮತ್ತು ಮಗ ಸಾಲ ಮಾಡಿಕೊಂಡು ಸಾಲ ತೀರಿಸಲಾಗದೇ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ವಿನಂ ಬೇರೆ ಯಾವುದೇ ಅನುಮಾನ ವಿರುವುದಿಲ್ಲ ಎಂದು ಮೃತರ ಕುಟುಂಬ ಸ್ಪಷ್ಟಪಡಿಸಿದೆ.