January 11, 2026

ಕುಂದಾದ್ರಿ ಬೆಟ್ಟದ ಮೇಲೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ .!!

ಕುಂದಾದ್ರಿ ಬೆಟ್ಟದ ಮೇಲೆ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ .!!

ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಂದಾದ್ರಿ ಬೆಟ್ಟದ ಮೇಲಿನ‌ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯಲ್ಲಿ ದೇಹವೊಂದು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಸೋಮವಾರ ರಾತ್ರಿ ಟ್ರಕ್ಕಿಂಗ್ ತೆರಳಿದ್ದ ತಂಡವೊಂದು ಸುಟ್ಟ ಸ್ಥಿತಿಯಲ್ಲಿ ಇದ್ದ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗುಂಬೆ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ.

ಕುಂದಾದ್ರಿ ಬೆಟ್ಟದ ಮೇಲೆ ಅನೈತಿಕ ಚಟುವಟಿಕೆ, ಅಕ್ರಮ ವ್ಯವಹಾರ, ಇಸ್ಪೀಟು, ದಂಧೆ ಮುಂತಾದವು ನಡೆಯುತ್ತಿರುತ್ತದೆ ಎಂದು ಹಲವು ಬಾರಿ ಸ್ಥಳೀಯರಿಂದ ಹಾಗೂ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಇದೀಗ ದೇಹವನ್ನು ಸುಟ್ಟು ಹಾಕಲಾಗಿದ್ದು ಈ ಪ್ರಕರಣ ಮೂರರಿಂದ ನಾಲ್ಕು ದಿನಗಳ ಹಿಂದೆ ನಡೆದಿರಬಹುದು ಎಂದು ಅಂದಾಜಿಸಲಾಗುತ್ತಿದೆ.

ಆಗುಂಬೆ ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಇನ್ನಷ್ಟು ಮಾಹಿತಿ ಹೊರಬರಬೇಕಿದೆ.

About The Author

Leave a Reply

Your email address will not be published. Required fields are marked *