ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ – 17 ಗೋವುಗಳ ರಕ್ಷಣೆ

ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ – 17 ಗೋವುಗಳ ರಕ್ಷಣೆ
ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ – 17 ಗೋವುಗಳ ರಕ್ಷಣೆ
ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರ ದಾಳಿ – 17 ಗೋವುಗಳ ರಕ್ಷಣೆ
ಭದ್ರಾವತಿ ತಾಲೂಕು ವೀರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೌಡಳ್ಳಿ ಗ್ರಾಮದಲ್ಲಿ ಅಕ್ರಮ ಕಸಾಯಿ ಖಾನೆಯ ಪಕ್ಕದಲ್ಲಿ ಯಾವುದೇ ಪರವಾಗಿ ಇಲ್ಲದೆ ತಂದಿರಿಸಿದ್ದ 17 ಗೋವುಗಳನ್ನ ಭದ್ರಾವತಿ ಗ್ರಾಮಾಂತರ ಪೊಲೀಸರು ರಕ್ಷಿಸಿದ್ದಾರೆ.
ನಿನ್ನೆ ರಾತ್ರಿ ವೀರಾಪುರ ಗ್ರಾಮದಲ್ಲಿ 12 ಕರುಗಳು ಮತ್ತು 6 ಹೋರಿಗಳನ್ನ ತಂದಿರಿಸಲಾಗಿದೆ. ಮಾಂಸ ಮಾರಾಟ ಮಾಡುವ ಅಕ್ರಮ ಗೋಕಸಾಯಿಖಾನೆಯಾಗಿದೆ ಎಂದು ಹಿಂದೂ ಸಂಘಟನೆಗಳು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ದಾಳಿ ನಡೆಸಿ 17 ಹಸುಗಳನ್ನ ರಕ್ಷಿಸಲಾಗಿದೆ.
ಈಗ ನಡೆದ ಕಸಾಯಿ ಖಾನೆಯ ಮೇಲೆ ಈ ಹಿಂದೆಯೂ ದಾಳಿ ನಡೆದಿತ್ತು. ಗೋಮಾಂಸಗಳು ಪತ್ತೆಯಾಗಿತ್ತು. ಈಗ ಇದು ಎರಡನೇ ಬಾರಿ ದಾಳಿ ನಡೆಸಲಾಗುತ್ತಿದೆ. ಒಮ್ಮೆ ಕಸಾಯಿ ಖಾನೆ ಮೇಲೆ ದಾಳಿ ನಡೆದರೆ ಅದನ್ನ ಸಂಪೂರ್ಣ ಸೀಜ್ ಮಾಡಬೇಕು. ತಹಶೀಲ್ದಾರ್ ಮೂಲಕ ಕ್ರಮ ಜರುಗಿಸಬೇಕು. ಆದರೆ ಎರಡೆರಡು ಬಾರಿ ಗೋವಿನ ವಧೆಯಾಗುತ್ತಿದ್ದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಹಿಂದೂ ಸಂಘಟನೆ ಪೊಲೀಸರ ದಾಳಿಯ ಮೇಲೆ ಸಂಶಯ ವ್ಯಕ್ತಪಡಿಸಿವೆ.
ರಕ್ಷಿಸಿದ ಗೋವುಗಳನ್ನು ಕೂಡ್ಲಿ ಶೃಂಗೇರಿ ಮಠಕ್ಕೆ ಬಿಡಲಾಗಿದೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.