w
Headlines
Home » RIPPONPETE | ಬಸ್ ಮೇಲೆ ಬಿದ್ದ ಬೃಹತ್ ಮರ – ಇಬ್ಬರಿಗೆ ಗಾಯ

RIPPONPETE | ಬಸ್ ಮೇಲೆ ಬಿದ್ದ ಬೃಹತ್ ಮರ – ಇಬ್ಬರಿಗೆ ಗಾಯ

GridArt 20250422 184413709.jpg

RIPPONPETE | ಬಸ್ ಮೇಲೆ ಬಿದ್ದ ಬೃಹತ್ ಮರ – ಇಬ್ಬರಿಗೆ ಗಾಯ

ರಿಪ್ಪನ್ ಪೇಟೆ : ಬಸ್ ಮೇಲೆ ಮರ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಪಟ್ಟಣದ ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ನಡೆದಿದೆ.

ಶಿಕಾರಿಪುರದ ಶ್ರುತಿ (34) ಹಾಗೂ ರಿಪ್ಪನ್ ಪೇಟೆಯ ನಿವಾಸಿ ಸತೀಶ್ ಬಿನ್ ಶಿವಾಜಿರಾವ್ (49) ರವರಿಗೆ ಗಾಯಗಳಾಗಿವೆ.

ಸಾಗರದಿಂದ ತೀರ್ಥಹಳ್ಳಿಗೆ ಪ್ರಯಾಣಿಸುತಿದ್ದ ಭಾಗ್ಯಲಕ್ಷ್ಮಿ ಬಸ್ ನಲ್ಲಿ ಸುಮಾರು 25 ಪ್ರಯಾಣಿಕರಿದ್ದರು. ಸಾಗರ ರಸ್ತೆಯ ಹೈಸ್ಕೂಲ್ ಮುಂಭಾಗದಲ್ಲಿ ಶಿಕಾರಿಪುರದಿಂದ ರಿಪ್ಪನ್ ಪೇಟೆಗೆ ಬಂದಿದ್ದ ಶ್ರುತಿ ಹಾಗೂ ಇಬ್ಬರು ಮಕ್ಕಳನ್ನು ಇಳಿಸಲು ಡ್ರೈವರ್ ಬಸ್ ನಿಲ್ಲಿಸಿದ್ದಾನೆ ಈ ಸಂಧರ್ಭದಲ್ಲಿ ಅವರನ್ನು ಕರೆದುಕೊಂಡು ಹೋಗಲು ಸ್ಕೂಟಿಯಲ್ಲಿ ಬಂದಿದ್ದ ಸತೀಶ್ ಅಲ್ಲಿಯೇ ನಿಂತಿದ್ದಾರೆ ಈ ಸಂಧರ್ಭದಲ್ಲಿ ಏಕಾಏಕಿ ಬೃಹತ್ ಮಾವಿನ ಮರ ಕೆಳಗೆ ಉರುಳಿದೆ.

ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಆದರೆ ನಿಲ್ದಾಣದಲ್ಲಿ ಬಸ್ ನಿಂದ ಕೆಳಗಿ ಇಳಿದಿದ್ದ ಶ್ರುತಿ ಹಾಗೂ ಸ್ಕೂಟಿ ನಿಲ್ಲಿಸಿಕೊಂಡು ಅವರಿಗಾಗಿ ಕಾಯುತಿದ್ದ ಸತೀಶ್ ರವರ‌ ಮೇಲೆ ಮರ ಬಿದ್ದ ಕಾರಣ ಗಾಯಾಗಳಾಗಿವೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.