POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಗರ್ತಿಕೆರೆ ಸತೀಶ್ ಶೆಟ್ಟಿ ಕೊಲೆ ಆರೋಪಿಗಳಾದ ಫಯಾಜ್ ಹಾಗೂ ಕೃಷ್ಣನಿಗೆ ಜೀವಾವಧಿ ಶಿಕ್ಷೆ ಪ್ರಕಟ

Images 1.jpeg

ಗರ್ತಿಕೆರೆ ಸತೀಶ್ ಶೆಟ್ಟಿ ಕೊಲೆ ಆರೋಪಿಗಳಾದ ಫಯಾಜ್ ಹಾಗೂ ಕೃಷ್ಣನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಗರ್ತಿಕೆರೆ ಸತೀಶ್ ಶೆಟ್ಟಿ ಕೊಲೆ ಆರೋಪಿಗಳಾದ ಫಯಾಜ್ ಹಾಗೂ ಕೃಷ್ಣನಿಗೆ ಜೀವಾವಧಿ ಶಿಕ್ಷೆ ಪ್ರಕಟ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಮದಲ್ಲಿ ನಡೆದಿದ್ದ ಸ್ನೇಹಿತರ ನಡುವೆ ಕ್ಷುಲ್ಲಕ ವಿಚಾರಕ್ಕೆ ನಡೆದಿದ್ದ ಗಲಾಟೆ ವಿಕೋಪಕ್ಕೆ ತೆರಳಿ ಸ್ನೇಹಿತನೊಬ್ಬ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸಾಗರ ನ್ಯಾಯಾಲಯ ಆದೇಶಿಸಿದೆ.

ಗರ್ತಿಕೆರೆ ನಿವಾಸಿಗಳಾದ ಫಯಾಜ್ ಹಾಗೂ ಕೃಷ್ಣ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ದಿನಾಂಕ 22/12/2021 ರಂದು ರಾತ್ರಿ 11.30 ಗಂಟೆ ಸಮಯದಲ್ಲಿ ಗರ್ತಿಕೆರೆ ವಾಸಿ ಸತೀಶ ಶೆಟ್ಟಿ, ಎಂಬುವವನು ತನ್ನ ಸ್ನೇಹಿತರಾದ ಫಯಾಜ್ @ ಕೋಳಿ ಫಯಾಜ್ ಮತ್ತು ಕೃಷ್ಣ ರವರೊಂದಿಗೆ ಇದ್ದಾಗ ಸತೀಶ ಶೆಟ್ಟಿಯು ಕೂಲಿ ಕೆಲಸದ ಹಣ ಕೇಳಿದನೆಂಬ ವಿಚಾರದಲ್ಲಿ ಫಯಾಜ್ @ ಕೋಳಿ ಫಯಾಜ್ ಮತ್ತು ಕೃಷ್ಣ ಸೇರಿಕೊಂಡು ಅಮೃತ ಗ್ರಾಮದ ಕೆಳಗಿನ ಕೆರೆ ದಂಡೆಯ ಮೇಲೆ ಕರೆದುಕೊಂಡು ಹೋಗಿ ಕಟ್ಟಿ ಮತ್ತು ಚಾಕುವಿನಿಂದ ಮೃತನ ಕುತ್ತಿಗೆ, ಎಡಕೆನ್ನೆ, ಎಡಕಿವಿಯ ಕೆಳಭಾಗಕ್ಕೆ ಕೊಯ್ದು ಕೊಲೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಶವವನ್ನು ಕೆರೆಯ ನೀರಿನಲ್ಲಿ ಹಾಕಿದ್ದು ಈ ಬಗ್ಗೆ ದಿನಾಂಕ;23/12/2021 ರಂದು ಸತೀಶಶೆಟ್ಟಿರವರ ಭಾವ ರಾಜುಶೆಟ್ಟಿ ರವರು ನೀಡಿದ ದೂರಿನ ಮೇರೆಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 143/2021 ಕಲಂ302 , 34 IPC ಐಪಿಸಿ ಪ್ರಕರಣದಾಖಲಾಗಿರುತ್ತದೆ.

ಸದರಿ ಪ್ರಕರಣದ ತನಿಖೆಯನ್ನು ಶ್ರೀ ಮಧುಸೂಧನ ಸಿಪಿಐ ರವರು ನಡೆಸಿ ಆರೋಪಿತರ ವಿರುದ್ಧ ಕಲಂ 302, 201 ಸಹಿತ 34 ಐಪಿಸಿ ರೀತ್ಯಾ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದು ಮಾನ್ಯ 05 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಸಾಗರ ಪೀಠ ರವರ ಮುಂದೆ ಪ್ರಕಣದ ವಿಚಾರಣೆ ನಡೆದು ಆರೋಪಿತರುಗಳು ಕೃತ್ಯವೆಸಗಿರುವುದು ಸಾಭೀತಾಗಿರುವುದರಿಂದ ಆರೋಪಿತರುಗಳಿಗೆ ಕಲಂ 302, ಕೊಲೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ ದಂಡ ಮತ್ತು ಕಲಂ 201 ಸಾಕ್ಷಿ ನಾಶಕ್ಕೆ 3 ವರ್ಷ ಶಿಕ ಮತ್ತು 3 ಸಾವಿರ ರೂ ದಂಡ ವಿಧಿಸಿರುತ್ತದೆ.

ಪ್ರಸ್ತುತ ಹೊಸನಗರ ಪೊಲೀಸ್‌ ವೃತ್ತ ನಿರೀಕ್ಷಕರಾದ ಗುರಣ್ಣ ಹೆಬ್ಬಾಳ್ ಮತ್ತು ರಿಪ್ಪನ್ ಪೇಟೆ ಪಿಎಸ್‌ಐ ರವರಾದ  ಪ್ರವೀಣ್ ಎಸ್ ಪಿ ರವರು ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವೇಳೆ ಸಾಕ್ಷಿದಾರರನ್ನು ಹಾಜರುಪಡಿಸುವ ಬಗ್ಗೆ ಮಾನಿಟರಿಂಗ್ ಮಾಡಿರುತ್ತಾರೆ.

ಪ್ರಕರಣದಲ್ಲಿ ನಗರ ಪೊಲೀಸ್ ಠಾಣೆಯ ಹೆಚ್.ಸಿ ಗಿರಿಪ್ರಸಾದ್ ರವರು ತನಿಖಾ ಸಹಾಯಕರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.