ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೊನ್ನಾನಿ ಬಳಿಯ ಹಿಂಭಾಗದ ತುಂಗಾ ನದಿಯಲ್ಲಿ ಭಾನುವಾರ ತೆಂಗಿನ ಕೊಪ್ಪದ ಯುವಕನ ಶವ ಪತ್ತೆಯಾಗಿದೆ.
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಪ್ರಜತ್(26) ಮೃತಪಟ್ಟ ಯುವಕ.
ಸಾಲೂರು ಹೊಸಮನೆ ತೆಂಗಿನಕೊಪ್ಪದ ಪ್ರಜತ್ 4 ವರ್ಷದ ಹಿಂದೆ ಹಾವು ಕಚ್ಚಿದ ಕಾರಣ ತಾಯಿಯನ್ನು ಕಳೆದುಕೊಂಡಿದ್ದರು ಹಾಗೂ ತಂದೆ ಕೂಡ ಕ್ಯಾನ್ಸರ್ ರೋಗಕ್ಕೆ ಇತ್ತೀಚಿಗೆ ಬಲಿಯಾಗಿದ್ದರು. ಪ್ರಜತ್ ಸಾಲದ ಕಾರಣ ಹಾಗೂ ಒಳ್ಳೆಯ ಉದ್ಯೋಗ ಇಲ್ಲದ ಕಾರಣ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎನ್ನಲಾಗುತ್ತಿದೆ.
ಮಾವನ ಮನೆಗೆ ಬಂದಿದ್ದ ಪ್ರಜತ್ ಭಾನುವಾರ ಬೆಳಗ್ಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಗಿದ್ದು ವಾಪಾಸ್ ಬಂದಿರಲಿಲ್ಲ. ಎಲ್ಲರೂ ಹುಡುಕಿದಾಗ ತುಂಗಾ ನದಿಯಲ್ಲಿ ಶವ ಪತ್ತೆಯಾಗಿದೆ.
ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.