Headlines

Crime News – ಅಡಿಕೆ ಮಂಡಿ ವರ್ತಕನ ಪತ್ನಿ ನೇಣಿಗೆ ಶರಣು

ಶಿವಮೊಗ್ಗ ನಗರದ ಅಡಿಕೆ ಮಂಡಿ ವರ್ತಕರೊಬ್ಬರ ಪತ್ನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.




ನಗರದ ಅಡಿಕೆ ಮಂಡಿ ವರ್ತಕ ಪ್ರಶಾಂತ್‌ ಎನ್ನುವವರ ಪತ್ನಿ ಶ್ವೇತಾ (40) ನೇಣಿಗೆ ಶರಣಾದ ಮಹಿಳೆಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಡಿಯ ಕೋಣೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಇನ್ನು ಸಾವಿಗೆ ಪತಿಯ ಸಾಲ ಹಾಗೂ ಜಮೀನು ಮಾರಾಟದ ವಿಷಯವೇ ಕಾರಣ ಎಂದು ಹೇಳಲಾಗುತ್ತಿದೆ. 




ಸಂಸಾರದಲ್ಲಿ ಅದೇನು ಕಲಹವಿತ್ತೋ ಗೊತ್ತಿಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೃಹಿಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಘಟನೆ ಕುರಿತು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *