ಶಿವಮೊಗ್ಗ : ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಉಂಟಾಗಿದ್ದು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬೈಕ್ ಸವಾರರನ್ನ ಎಸ್ಕಾರ್ಟ್ ಪೊಲೀಸರಿಬ್ಬರು ಮೆಗ್ಗಾನ್ ಗೆ ತಮ್ಮ ವಾಹನದಲ್ಲಿಯೇ ಕೂರಿಸಿಕೊಂಡು ಬಂದು ದಾಖಲಿಸಿ ಕರ್ತವ್ಯ ಮತ್ತು ಮಾನವೀಯತೆ ಮೆರೆದಿದ್ದಾರೆ.
ಅಬ್ಬಲಗೆರೆಯ ದೇವಸ್ಥಾನದ ಎದುರು ಎರಡು ಬೈಕ್ ನಡುವೆ ಡಿಕ್ಕಿಯಾಗಿದ್ದು ಡಿಕ್ಕಿಯಲ್ಲಿ ಗಾಯಗೊಂಡವರನ್ನ ಜಗದೀಶ್ ನಾಯ್ಕ್ ಮತ್ತು ಮಂಜು ಎಂದು ಗುರುತಿಸಲಾಗಿದೆ. ಜಗದೀಶ್ ನಾಯ್ಕ್ ರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ನಿಂದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಇಬ್ಬರು ಗಾಯಾಳುಗಳನ್ನ ಮುನೇಶ್ವರ ದೇವಸ್ಥಾನದಿಂದ ತಮ್ಮ ಎಸ್ಕಾರ್ಟ್ ಜೀಪ್ ನಲ್ಲಿ ಎತ್ತಿಕೊಂಡು ಬಂದು ಮೆಗ್ಗಾನ್ ಗೆ ದಾಖಲಿಸಿದ್ದಾರೆ. ಜಗದೀಶ್ ನಾಯ್ಕರ ಸ್ಥಿತಿ ಗಂಭೀರವಾಗಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.