ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮದಲ್ಲಿ ನುಗ್ಗೆಕಾಯಿ ವಿಚಾರಕ್ಕೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆಯೊಂದು ನಡೆದಿದೆ.
ಸೋಮವಾರ ಸಂಜೆ ಕೆಂಚನಾಲ ಗ್ರಾಮದ ರಾಮ್ ಕುಮಾರ್ ರಿಪ್ಪನ್ಪೇಟೆಗೆ ಹೋಗಿ ವಾಪಸ್ ಮನೆಗೆ ಬರುವಾಗ, ಅದೇ ಗ್ರಾಮದ ನಿವಾಸಿ ನಾಗೇಶ್ ತನ್ನ ಮನೆ ಹಿತ್ತಲಿನಲ್ಲಿ ಬೆಳೆದಿದ್ದ ನುಗ್ಗೆಕಾಯಿಯನ್ನು ಕೀಳುತ್ತಿರುವುದು ಕಾಣಿಸಿದೆ. ಸಹಜವಾಗಿಯೇ ನಮ್ಮನೆಯ ಹಿತ್ಲಿಂದ ಯಾಕೆ ನುಗ್ಗೆಕಾಯಿ ಕಿತ್ಕೊಂಡು ಹೋಗ್ತಿದ್ದಿಯಾ, ಹೇಳೋದು ಕೇಳೋದು ಏನು ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಇಷ್ಟಕ್ಕೆ ಸಿಟ್ಟಾದ ವ್ಯಕ್ತಿ ಅದು ನಿನ್ನ ಅಪ್ಪಂದಾ ಮರ, ಅಂತಾ ಅವಾಚ್ಯವಾಗಿ ಬೈದು ಉಣುಗೋಲಿನ ಗೂಟ ಕಿತ್ತು ಹಲ್ಲೆ ಮಾಡಿದ್ದಾರೆ. ಇದೇ ವೇಳೆ, ನುಗ್ಗೆಕಾಯಿ ಕಿತ್ತ ವ್ಯಕ್ತಿಯ ತಮ್ಮನಾದ ರವಿ ಮತ್ತು ಮತ್ತು ರಾಜು ಬಂದು ಹಲ್ಲೆ ಮಾಡಿದ್ದಾನೆ. ಬಳಿಕ ಸ್ಥಳೀಯರು ಕೂಗಾಟ ಕೇಳಿ ಬಂದು ಜಗಳ ಬಿಡಿಸಿದ್ದಾರೆ. ಈ ವೇಳೆ ಜೀವ ಬೆದರಿಕೆ ಹಾಕಿ ಅಲ್ಲಿಂದ ಆರೋಪಿಗಳು ತೆರಳಿದ್ದಾರೆ ಎಂದು ದೂರು ದಾಖಲಾಗಿದ್ದು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿದೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.