Headlines

ಕೊರೊನಾ ಪಾಸಿಟಿವ್ ಹಿನ್ನಲೆ ರಜೆ ಮೇಲೆ ಹೋಗಿದ್ದ ಕಾನ್ಸ್ ಟೇಬಲ್ ನಾಪತ್ತೆ – ಅದೇ ಸ್ಟೇಷನ್ ನಲ್ಲಿ ದಾಖಲಾಯ್ತು ಕೇಸ್|missing


ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ಕೆಲಸ ಮಾಡುತ್ತಿದ್ದ ಪೇದೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ದೂರೊಂದು ಅದೇ ಸ್ಟೇಷನ್​ನಲ್ಲಿ ದಾಖಲಾಗಿದ್ದು, ಆ ಸಂಬಂಧ ಎಫ್​ಐಆರ್ ಕೂಡ ದಾಖಲಾಗಿದೆ.

 

ದಿನಾಂಕ: 07-12-2021 ರಿಂದ ಮಾಳೂರು ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದ ಸಂತೋಷ್ ಕುಮಾರ್ ಎಂಬವರು ಕೋವಿಡ್ ಪಾಸೀಟಿವ್ ಬಂದ ಹಿನ್ನೆಲೆಯಲ್ಲಿ  24-01-2022 ರಿಂದ ದಿನಾಂಕ:31-01-2022 ರ ವಿಶೇಷ ರಜೆ ತೆಗೆದುಕೊಂಡಿದ್ದರಂತೆ. 



ಆನಂತರ  ವಾಪಸ್‌ ಕರ್ತವ್ಯಕ್ಕೆ ಹಾಜರಾಗಿಲ್ಲ. ಅಲ್ಲದೆ ಯಾವುದೇ ರೀತಿಯ ರಜೆಯನ್ನು ಸಹ ಪಡೆದುಕೊಳ್ಳದೆ ಗೈರಾಗಿದ್ದಾರೆ. ಈ ಸಂಬಂಧ    ಪೊಲೀಸ್ ಅಧೀಕ್ಷಕರು ಪರಾರಿ ಪತ್ರವನ್ನು ಹೊರಡಿಸಿದ್ದರು. ಆದರೆ ಈ ಪತ್ರವನ್ನು ಜಾರಿಮಾಡಿದ್ದರು, ಪೊಲೀಸ್ ಕಾನ್​ಸ್ಟೇಬಲ್​ ಕೆಲಸಕ್ಕೆ ಹಾಜರಾಗಿಲ್ಲ. ಹೀಗಾಗಿ ಇವರ ವಿರುದ್ಧ  ಮನುಷ್ಯ ಕಾಣೆ ಪ್ರಕರಣ ದಾಖಲಿಸುವಂತೆ ಎಸ್​ಪಿ ಕಚೇರಿಯಿಂದ ಆದೇಶ ಹೊರಬಿದ್ದಿದೆ. ಹೀಗಾಗಿ ಈ ಸಂಬಂಧ ಮಾಳೂರು ಠಾಣೆಯಲ್ಲಿ ಕೇಸ್ ದಾಖಲಾಗಿದೆ.



Leave a Reply

Your email address will not be published. Required fields are marked *