ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಅಪ್ಪಳಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬ್ರಹ್ಮೇಶ್ವರ ಗ್ರಾಮದಲ್ಲಿ ನಡೆದಿದೆ.
ಬಟ್ಟೆಮಲ್ಲಪ್ಪ -ಹೊಸನಗರ ರಸ್ತೆಯ ಬ್ರಹ್ಮೇಶ್ವರ ಬಳಿ ಚಾಲಕನು ಅತಿ ವೇಗ ಹಾಗೂ ಅಜಾಗರುಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಯ ದಿಬ್ಬಕ್ಕೆ ಅಪ್ಪಳಿಸಿದೆ.
ಶಿಕಾರಿಪುರ ಮೂಲದ ಕುಟುಂಬ ಮಾರುತಿ ಸುಜ಼ೂಕಿ ಗ್ರಾಂಡ್ ವಿಟಾರ ಕಾರಿನಲ್ಲಿ ತೆರಳುವಾಗ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ಕಾರಿನ ಏರ್ ಬ್ಯಾಗ್ ತೆರೆದಿದ್ದರಿಂದ ಯಾವುದೇ ಹೆಚ್ಚಿನ ಅನಾಹುತವಾಗಿಲ್ಲ
ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.