Headlines

ಶಿವಮೊಗ್ಗ-ಆಯನೂರು ಹೆದ್ದಾರಿಯಲ್ಲಿ ಹಾಡಹಗಲೇ ಕಾರು ಅಡ್ಡಗಟ್ಟಿ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ದರೋಡೆ|Robbery


ಮಾರಿ ಜಾತ್ರೆಗೆ ಕಾರಿನಲ್ಲಿ ತೆರಳುತ್ತಿದ್ದ ಯುವಕನ ಕುತ್ತಿಗೆಗೆ ಮಚ್ಚು ಇಟ್ಟು ಹಾಡಹಗಲೇ ನಗ – ನಗದು ಅಪಹರಿಸಿರುವ ಆಘಾತಕಾರಿ ಘಟನೆ ಶಿವಮೊಗ್ಗ ಸಮೀಪ ನಡೆದಿದೆ.

ಶಿವವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಬರುವ ಟ್ರೀಪಾರ್ಕ್​ನ ಸಮೀಪ ದರೋಡೆಯೊಂದು (Dacoity) ನಡೆದಿರುವ ಬಗ್ಗೆ ವರದಿಯಾಗಿದೆ. ತರಿಕೆರೆಯ ವಸಂತ್ ಎಂಬವರು ಕಾರಿನಲ್ಲಿ ಮಾರಿಜಾತ್ರೆಗೆ ಹೋಗುತ್ತಿದ್ದ  ವೇಳೆ ಅವರನ್ನು ಟ್ರೀಪಾರ್ಕ್​ ಬಳಿ ಅಡ್ಡಗಟ್ಟಲಾಗಿದೆ. ಕಾರಿನಲ್ಲಿ ಹೋಗುತ್ತಿದ್ದವರನ್ನ ತಡೆದು ಕುತ್ತಿಗೆಗೆ ಮಚ್ಚು ಹಿಡಿದು ಕ್ಯಾಶ್ ಹಾಗೂ ಚಿನ್ನವನ್ನು ದೋಚಿ ಹೋಗಿದ್ದಾರೆ. 



ಮೂತ್ರ ವಿಸರ್ಜನೆಗೆ ಎಂದು ಕಾರು ನಿಲ್ಲಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮೂತ್ರ ವಿಸರ್ಜನೆ ಮುಗಿಸಿ ವಾಪಸ್​ ಕಾರು ಹತ್ತುವಾಗ ಅಲ್ಲಿಗೆ ಡಿಯೋ ಬೈಕ್​ನಲ್ಲಿ ಬಂದ ಇಬ್ಬರು ವಸಂತ್​ರನ್ನ ಮಚ್ಚು ತೋರಿಸಿ ಹೆದರಿಸಿದ್ದಾರೆ. ಬಳಿಕ ಅಲ್ಲಿಂದ ಸಾಗರ ಕಡೆಗೆ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್​ನಲ್ಲಿ ಕೇಸ್ ಆಗಿದೆ. 




ಪ್ರಕರಣ ದಾಖಲಿಸಿಕೊಂಡಿರುವ ಕುಂಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *