ಮುತ್ತೂಟ್ ವ್ಯಾಪಾರ ಸಾಲ ಯೋಜನೆಗೆ ಚಾಲನೆ
ರಿಪ್ಪನ್‌ಪೇಟೆ : ಸಹಕಾರ ಸಂಘಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಮತ್ತು ವ್ಯಾಪಾರಸ್ಥರಿಗೆ ಸಾಲ ಸೌಲಭ್ಯಗಳನ್ನು ಕಲ್ಪಸುವ ವ್ಯವಸ್ಥೆಯಿತ್ತು ತಂತ್ರಜ್ಞಾನ ಬೆಳದಂತೆ ಖಾಸಗಿ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ತುರ್ತು ವ್ಯವಹಾರ ನಡೆಸಲು ಅರ್ಥಿಕ ಸಾಲಸೌಲಭ್ಯ ಯೋಜನೆಯನ್ನು ಅನುಷ್ಠಾನಗೊಳಿಸಿರುತ್ತದೆ ಎಂದು ಮುತ್ತೂಟ್ ಸಂಸ್ಥೆಯ ಸಾಗರ ಶಿವಮೊಗ್ಗ ವಲಯಾಧಿಕಾರಿ ಚಂದ್ರಶೇಖರ್ ಹೇಳಿದರು.
ರಿಪ್ಪನ್‌ಪೇಟೆಯ ಮುತ್ತೂಟ್ ಶಾಖಾ ಕಛೇರಿಯಲ್ಲಿ ಬುಧವಾರ “ವ್ಯಾಪಾರ ಸಾಲ ಯೋಜನೆಗೆ ಚಾಲನೆ ನೀಡಿ ಮಾತನಾಡಿ ಮುತ್ತೂಟ್ ಫಿನ್‌ಕಾರ್ಪ್‌ನ ವ್ಯಾಪಾರ ಸಾಲಗಳೊಂದಿಗೆ ನಿಮ್ಮ ವ್ಯಾಪಾರವನ್ನು ಉತ್ತೇಜಿಸಿ ಮತ್ತು ನಿಮ್ಮ ಎಲ್ಲಾ ಕನಸುಗಳನ್ನು ಸಾಧಿಸಿಕೊಳ್ಳಬಹುದು. ನಮ್ಮ SME ಸಾಲಗಳು ಹೊಂದಿಕೊಳ್ಳುವ ಅವಧಿಗಳು, ಸುಲಭ ಮರುಪಾವತಿ ಆಯ್ಕೆಗಳು ಮತ್ತು RBI ಮಾರ್ಗಸೂಚಿಗಳ ಆಧಾರದ ಮೇಲೆ ಕನಿಷ್ಠ ದಾಖಲೆಗಳೊಂದಿಗೆ ಬರುತ್ತವೆ. ನಮ್ಮ ಸಣ್ಣ ವ್ಯಾಪಾರ ಸಾಲವನ್ನು ಪಡೆಯುವ ಮಾನದಂಡಗಳು ಸರಳ ಮತ್ತು ಹೊಂದಿಕೊಳ್ಳುತ್ತದೆ ಎಂದರು.
ಮುತ್ತೂಟ್ ಫಿನ್‌ಕಾರ್ಪ್ ನಿಂದ ಬಂಗಾರದ ಸಾಲ,ಚಿಟ್ ಫಂಡ್,ದ್ವಿಚಕ್ರ ವಾಹನ ಸಾಲ,ಹಣವರ್ಗಾವಣೆ ಸ್ವರ್ಣವರ್ಪಂ,ಆರೋಗ್ಯ ಕಾರ್ಡ್,ವಾಹನಗಳ ವಿಮಾ ಸೌಲಭ್ಯ,ಜೀವ ವಿಮಾ ಪಾಲಿಸಿ,ಪಾನ್‌ಕಾರ್ಡ್ ಹೀಗೆ ಹಲವು ಗ್ರಾಹಕರಿಗೆ ಅನುಕೂಲವಾಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಮುತ್ತೂಟ್ ವ್ಯಾಪಾರ ಸಾಲ ಯೋಜನೆಗೆ ಹಿರಿಯ ವಾಲಿಬಾಲ್ ಕ್ರೀಡಾಪಟು ಕೇಶವ್ ಉದ್ಘಾಟಿಸಿದರು. ಶಿವರಾಜ್‌ಪಾಟೀಲ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಖಾ ವ್ಯವಸ್ಥಾಪಕಿ ಎಲ್.ಎಸ್.ಮಿಲನ್ ಲಕ್ಕವಳ್ಳಿ,ಸಿಬ್ಬಂದಿಗಳಾದ ಪ್ರವೇಶ,ಕಿರಣ್,ವಸಂತ್ ಮತ್ತು ಗ್ರಾಹಕರಾದ ಮಹೇಂದ್ರಗೌಡ ಕಳಸೆ, ಹರೀಶ್ ಬೆಳಂದೂರು,ಪ್ರತ್ಯಕ್ಷ ಕುಕ್ಕಳಲೆ,ಮಲ್ಲೇಶ್ ಅಲುವಳ್ಳಿ,ದೇವು ಅಚಾರ್,ಸಂತೋಷ,ಇಮ್ರಾನ್ ಹಾಗೂ ಇನ್ನಿತರ ಗ್ರಾಹಕರು ಹಾಜರಿದ್ದರು.