ಶಿವಮೊಗ್ಗ : ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಮೇಲೆ ಹಳೇ ದ್ವೇಷದಿಂದ ಇತರ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ.
ನಾಗರಾಜ್ ಎಂಬ ವಿಚಾರಣಾಧೀನ ಕೈದಿ ಮೇಲೆ ಸಚಿನ್ ಅಲಿಯಾಸ್ ಸ್ಯಾಡೋ, ದರ್ಶನ್, ಪರಶುರಾಮ, ಅನಿಲ್‌ಕುಮಾರ್, ವಿಶ್ವನಾಥ, ವಿಶಾಲ್ ಎಂಬುವರು ಹಲ್ಲೆ ಮಾಡಿದ್ದಾರೆ. ನಾಗರಾಜ್ ಭದ್ರಾವತಿಯ ಎರಡನೇ ಅಪರ ಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರಾಗಲು ಜೈಲಿನಲ್ಲಿರುವ ವಿಡಿಯೋ ಕಾನ್ಫರೆನ್ಸ್ ಕೊಠಡಿಗೆ ತೆರಳುವಾಗ ಆರು ಕೈದಿಗಳು ಹಲ್ಲೆ ನಡೆಸಿದ್ದಾರೆ.
ಸ್ಥಳದಲ್ಲಿದ್ದ ಜೈಲು ನಿರೀಕ್ಷಕ ಆತ್ಮಾನಂದ ಕುದರಿ ಮತ್ತು ಇತರರು ಜಗಳ ಬಿಡಿಸಿ ಗಾಯಾಳು ನಾಗರಾಜ್‌ಗೆ ಚಿಕಿತ್ಸೆ ಕೊಡಿಸಿದ್ದಾರೆ. ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಅನಿತಾ ಅವರು ತುಂಗಾನಗರ ಠಾಣೆಗೆ ದೂರು ನೀಡಿದ್ದಾರೆ.
ಶಿವಮೊಗ್ಗದ ಜೈಲ್ ರಸ್ತೆಯಲ್ಲಿರುವ ಟೀ ಅಂಗಡಿಯ ಮಾಲೀಕರ ಮೇಲೆ ಹಲ್ಲೆ, ಅವರ ವಾಹನವನ್ನ ಸುಟ್ಟ ಪ್ರಕರಣದಲ್ಲಿ ಸಚಿನ್, ದರ್ಶನ್ ಜೈಲು ಸೇರಿದ್ದರು. ಅವರ ವಿಚಾರಣೆ ಹಂತದಲ್ಲಿರುವಾಗಲೇ ಜೈಲಿನ ಸಹ ಖೈದಿಗೆ ಹಲ್ಲೆ ನಡೆಸಿದ್ದಾರೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಹಲ್ಲೆನಡೆದಿದೆ.