Headlines

ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು|robbery

ದರೋಡೆಗೆ ಹೊಂಚು ಹಾಕುತ್ತಿದ್ದ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಶಿವಮೊಗ್ಗ ನಗರದ ವಿನೋಬನಗರ ಪೊಲೀಸರು ಯಶಸ್ವಿಯಾಗಿದ್ದಾರೆ.




ಮಾರಕಾಸ್ತ್ರಗಳೊಂದಿಗೆ ಒಬ್ಬಂಟಿಯಾಗಿ ಬರುವ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಖತರ್ ನಾಕ್ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ಬಸವನ ಗಂಗೂರು ಚಾನೆಲ್ ಮೇಲೆ ಬೊಮ್ಮನ್ ಕಟ್ಟೆಯ ಅನಿಲ್ ಕುಮಾರ್(42), ಕೋಹಳ್ಳಿಯ ಶಿವನಾಯ್ಕ (34), ಆಯನೂರಿನ ಶಿವಕುಮಾರ್ (45) ಮತ್ತು ಸಿರಿಗೆರೆಯ ಖಲೀಂ ಬಂಧಿತ ಆರೋಪಿಗಳು.




ಈ ದರೋಡೆ ಸಂಚಿನ ಬಗ್ಗೆ ಮಾಹಿತಿ ತಿಳಿದ ವಿನೋಬನಗರ ಪಿಎಸ್ಐ ಸಾಗರ್ಕರ್ ನೇತೃತ್ವದಲ್ಲಿ ಪೊಲೀಸರ ತಂಡ ದಾಳಿ ನಡೆಸಿದೆ. 

Leave a Reply

Your email address will not be published. Required fields are marked *