Headlines

ಕೆಂಪು ಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ : ಸಚಿವ ಕೆ ಎಸ್ ಈಶ್ವರಪ್ಪ

ಈಶ್ವರಪ್ಪ  ಮತ್ತೆ ತಮ್ಮ ಹೇಳಿಕೆಯಿಂದ ವಿವಾದವನ್ನು ಸೃಷ್ಟಿಸಿದ್ದಾರೆ. ಈ ಬಾರಿಯ ಹೇಳಿಕೆಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನವನ್ನು ಮಾಡಿದ್ದಾರೆ. ಡಿ.ಕೆ ಶಿವಕುಮಾರ್ ನೀಡಿದ್ದ ಧ್ವಜದ ಹೇಳಿಕೆಗೆ ಸಂಬಂಧಪಟ್ಟಂತೆ ಮಾತನಾಡಿದ ಈಶ್ವರಪ್ಪ, ಕೇಸರಿ ಧ್ವಜ ಕೆಂಪುಕೋಟೆ ಮೇಲೆ ಕೂಡ ಹಾರಿಸುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಮುಂದೆ ನಮ್ಮ ದೇಶದಲ್ಲಿ ಕೇಸರಿ ಧ್ವಜವೇ ರಾಷ್ತ್ರ ಧ್ವಜವಾಗಬಹುದು. ಹಿಂದೆ ರಾಮ ಮಂದಿರ ಕಟ್ಟಲು ಆಗಲ್ಲ ಅಂದಿದ್ದರು ಈಗ ಕಟ್ಟಿಲ್ಲವ, ಹಾಗೇಯೇ ಮುಂದೊಂದು ದಿನ ಕೆಂಪು ಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದರು. ಅಧಿಕಾರದ…

Read More

ಹಿಜಾಬ್ ವಿವಾದ : ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ಅರ್ಜಿ ವರ್ಗಾವಣೆ

ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್​ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ಪ್ರಕರಣದ ಮಹತ್ವ ಹಾಗೂ ಸೂಕ್ಷ್ಮತೆ ಪರಿಗಣಿಸಿ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಹಿಜಾಬ್​ ಧರಿಸಿ ಕಾಲೇಜಿಗೆ ತೆರಳಲು ಅವಕಾಶ ನೀಡಲು ಮಧ್ಯಂತರ ಆದೇಶಕ್ಕೆ ಅರ್ಜಿದಾರರು ಕೋರಿದ್ದರು. ಇದನ್ನು ನಿರಾಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.​ ದೀಕ್ಷಿತ್​ ಅವರಿದ್ದ ಏಕಸದಸ್ಯ ಪೀಠ, ಪ್ರಕರಣ ಸೂಕ್ಷ್ಮವಾದ ಕಾರಣ ವಿಸ್ತೃತ ಪೀಠದಲ್ಲಿಯೇ ವಿಚಾರಣೆ ನಡೆಯಬೇಕು.  ಇದಕ್ಕಾಗಿ ಮುಖ್ಯ…

Read More

ಹಿಜಾಬ್ – ಕೇಸರಿ ಘರ್ಷಣೆ ಹಿನ್ನಲೆ ರಾಜ್ಯಾದ್ಯಂತ ಮೂರು ದಿನ ಶಾಲಾ-ಕಾಲೇಜು ಬಂದ್ !!!! ಹಿಜಾಬ್ ಕೋರ್ಟ್ ತೀರ್ಪು ಮುಂದೂಡಿಕೆ ಹಿನ್ನಲೆ ಸಿಎಂ ಘೋಷಣೆ

ಹಿಜಾಬ್ ಮತ್ತು ಕೇಸರಿ ಶಾಲಿನ ವಿಷಯದಲ್ಲಿ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ರಾಜ್ಯದ ಕಾಲೇಜುಗಳಿಗೆ‌ ಮುಂಜಾಗ್ರತಾ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳವರೆಗೆ ರಜೆ‌ ಘೋಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಿಕ್ಷಣ ಸಚಿವರಿಗೆ ಸೂಚನೆ ನೀಡಿದ್ದಾರೆ. ನವದೆಹಲಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ರಾಜ್ಯದ ಸಮಸ್ತ ಜನತೆಗೆ ಸಿಎಂ ಮನವಿ ಮಾಡಿಕೊಂಡಿದ್ದಾರೆ. ಹಿಜಾಬ್ ವಿವಾದ ಹಲವು ಜಿಲ್ಲೆಗಳಿಗೆ ವ್ಯಾಪಿಸಿದ್ದು ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು…

Read More

ದಿಗ್ವಿಜಯ ನ್ಯೂಸ್​ ನ ಸುದ್ದಿ ಸಂಪಾದಕ ಪ್ರಶಾಂತ್​ ರಿಪ್ಪನ್ ಪೇಟೆ ರವರಿಗೆ “ಆರೂಢ ಶ್ರೀ” ಪ್ರಶಸ್ತಿ ಪ್ರದಾನ :

  ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಶ್ರೀ ಆರೂಢ ಮಠದ ಶ್ರೋ ಬ್ರ ಬೃಹ್ಮಲೀನ ಸದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ 42ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್ ಸಮಾರಂಭದಲ್ಲಿ ದಿಗ್ವಿಜಯ ವಾಹಿನಿಯ ನಿರೂಪಕ , ನಿರ್ಮಾಪಕರಾದ ಪ್ರಶಾಂತ್ ರಿಪ್ಪನ್ ಪೇಟೆ ಅವರಿಗೆ ‘ ಆರೂಢ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಪ್ರಶಾಂತ ರಿಪ್ಪನ್ ಪೇಟೆ ಅವರಿಗೆ…

Read More

ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಹೃದಯಾಘಾತದಿಂದ ನಿಧನ :

‘ಕನ್ನಡದ ಕಬೀರ’ ಎಂದೇ ಹೆಸರಾಗಿದ್ದ ಪದ್ಮಶ್ರೀ ಪುರಸ್ಕೃತ ಇಬ್ರಾಹೀಂ ಎನ್‌. ಸುತಾರ(76) ಹೃದಯಾಘಾತದಿಂದ ಶನಿವಾರ ಬೆಳಗ್ಗೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರ ಪಟ್ಟಣದಲ್ಲಿ ನಿಧನರಾಗಿದ್ದಾರೆ. ಇಬ್ರಾಹಿಂ ಸುತಾರ ಅವರು ಕಳೆದ ಕೆಲವು ದಿನಗಳಿಂದ ಹೃದಯದ ನೋವಿನಿಂದ ಬಳಲುತ್ತಿದ್ದರು. ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಬೆಳಗ್ಗೆ ಅವರಿಗೆ ಮತ್ತೆ ಲಘು ಹೃದಯಾಘಾತವಾಗಿದೆ. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಇಬ್ರಾಹಿಂ ಸುತಾರ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಬಾಗಲಕೋಟ ಜಿಲ್ಲೆಯ, ಮುಧೋಳ ತಾಲ್ಲೂಕಿನ ಮಹಾಲಿಂಗಪುರದ ಶ್ರೀ ಇಬ್ರಾಹೀಮ ಎನ್. ಸುತಾರ ಅವರು ದಿನಾಂಕ…

Read More

ಸಿಗರೇಟ್ ಬೆಲೆ ಏರುವ ತಿರುಕನ ಕನಸು ಕಾಣುತ್ತಿದ್ದ ಕಾಳಸಂತೆಯ ವರ್ತಕರಿಗೆ ಕೇಂದ್ರ ಸರ್ಕಾರದ ಬಿಗ್ ಶಾಕ್!!!!!!??? ತಂಬಾಕು, ಸಿಗರೇಟ್ ಮೇಲಿನ ತೆರಿಗೆಯಲ್ಲಿ ಬದಲಾವಣೆ ಇಲ್ಲ !!!

ಕರೋನಾ ಸಂದರ್ಭದಲ್ಲಿ ನಷ್ಟಕ್ಕೊಳಗಾದ ಸಿಗರೇಟ್ ಹಾಗೂ ಗುಟ್ಕಾ ಕಂಪನಿಗಳಿಗೆ ಸರ್ಕಾರ ರಿಯಾಯಿತಿ ನೀಡಿತ್ತು ಪ್ರಸ್ತುತ ಮೂರನೇ ಅಲೆಯಲ್ಲಿ ವ್ಯಾಪಾರಸ್ಥ ಕಾಳಸಂತೆಯ ವರ್ತಕರು ಕೋಟಿಗಟ್ಟಲೆ ಮೌಲ್ಯದ ಸಿಗರೇಟ್ ಹಾಗೂ ಗುಟ್ಕಾ ಉತ್ಪನ್ನವನ್ನು ದಾಸ್ತಾನು ಮಾಡಿ ದುಪ್ಪಟ್ಟು ಲಾಭ ಮಾಡುವ ಕನಸಿನೊಂದಿಗೆ ತಮ್ಮ ಗೋಡನ್ ಗಳಲ್ಲಿ ದಾಸ್ತಾನು ಮಾಡಿ ಕೋಟಿಗಟ್ಟಲೆ ಲಾಭ ಮಾಡುವ ಕನಸು ಕಾಣುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಈ ಭ್ರಷ್ಟ ದಾಸ್ತಾನು ಗಾರರಿಗೆ ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ ನೀಡಿದ ಬಿಗ್ ಶಾಕ್ ಕಾಳಸಂತೆಯ ವರ್ತಕರಿಗೆ…

Read More

ಏಪ್ರಿಲ್ 24 ಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ !!!! : ಯಾಕೆ ಗೊತ್ತಾ ????

ಈ ವರ್ಷದ ಪಂಚಾಯತ್​ರಾಜ್ ದಿವಸ್ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಆಚರಣೆ ಮಾಡಲಿದ್ದು, ಏಪ್ರಿಲ್ 24ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ. ಪ್ರಧಾನ ಮಂತ್ರಿ ಕಾರ್ಯಾಲಯ ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಿದ್ದಾರೆ. ಈಗಾಗಲೆ ಶಿವಮೊಗ್ಗ ತಾಲೂಕಿನ ಎರಡು ಗ್ರಾಪಂಗಳನ್ನು ಕೇಂದ್ರೀಕರಿಸಿ ಹಲವು ಸುತ್ತಿನ ಸಭೆ ನಡೆಸಿದ್ದು, ಪ್ರಧಾನಿ ಭದ್ರತೆ, ಸಮಯದ ಹೊಂದಾಣಿಕೆ, ರಸ್ತೆ ಮಾರ್ಗದ ವಾಹನ ದಟ್ಟಣೆ ಎಲ್ಲವನ್ನೂ ಗಮನಿಸಿ ಯಾವುದಾದರೂ ಒಂದು ಗ್ರಾಪಂಗೆ…

Read More

ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ಅಧಿಕಾರ ಸ್ವೀಕಾರ :

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್‌ ನಲಪಾಡ್‌ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಆಯ್ಕೆಯಲ್ಲಿ ಈ ಹಿಂದೆ ಗೊಂದಲ ಉಂಟಾಗಿದ್ದು, ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಹೆಚ್ಚು ಮತಗಳಿಸಿದ್ದ ಮೊಹಮ್ಮದ್‌ ನಲಪಾಡ್‌ ಅವರನ್ನು ಅನರ್ಹಗೊಳಿಸಿ, ನಂತರದ ಸ್ಥಾನಗಳಿಸಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಇನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಸಂಧಾನ ನಡೆಸಿ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಿ ಅವರ ಅಧಿಕಾರದ ಅವಧಿ ಮುಗಿದ ಬಳಿಕ ಮೊಹಮ್ಮದ್‌…

Read More

ಜ 31 ರಿಂದ ರಾಜ್ಯಾದ್ಯಂತ ನೈಟ್ ಕರ್ಫ಼್ಯೂ ರದ್ದು : ಶಾಲೆಗಳು ಪುನರಾರಂಭ !!!!

  ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಜಾರಿಗೊಳಿಸಲಾಗಿದ್ದಂತ ನೈಟ್ ಕರ್ಪ್ಯೂವನ್ನು ( Night Curfew ) ರದ್ದುಪಡಿಸಲಾಗಿದೆ. ಇದಲ್ಲದೇ ಹೋಟೆಲ್, ರೆಸ್ಟೋರೆಂಟ್, ಪಬ್ ಗಳಲ್ಲಿನ ಶೇ.50ರ ಮಿತಿಯನ್ನು ವಾಪಾಸ್ ಪಡೆಯಲಾಗಿದೆ.ಆದರೆ ಸಿನಿಮಾ ಮಂದಿರಗಳಲ್ಲಿ ಶೇ.50ರ ಮಿತಿಯನ್ನು ಮುಂದುವರೆಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಈ ಕುರಿತಂತೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಕೋವಿಡ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ತಜ್ಞರು ನೀಡಿದಂತ ವರದಿಯ ಆಧಾರದ ಮೇಲೆ ಹಲವು ವಿಚಾರಗಳನ್ನು ಚರ್ಚಿಸಲಾಗಿದೆ. ರಾಜ್ಯದಲ್ಲಿ…

Read More

ಮಾಜಿ ಸಿಎಂ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ : ಯಡಿಯೂರಪ್ಪ ನಿವಾಸದಲ್ಲಿ ನೀರವ ಮೌನ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ವಸಂತನಗರದ ನಿವಾಸದಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಮೃತಪಟ್ಟಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಪತಿ ನೀರಜ್ ಕೆಲಸಕ್ಕೆ ತೆರಳಿದ ನಂತರ ಸುಮಾರು 10 ಗಂಟೆ ವೇಳೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಗಳು ಪದ್ಮಾವತಿಯವರ ಪುತ್ರಿ ಆಗಿರುವ ಸೌಂದರ್ಯ ಬೆಂಗಳೂರು ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿ…

Read More