ಅಂತರ್ಜಾಲ ಮಕ್ಕಳ ಕವಿಗೋಷ್ಟಿಯಿಂದ 75ನೇ ಸ್ವಾತಂತ್ರ್ಯ ಸಂಭ್ರಮ:
ಶಿವಮೊಗ್ಗ : ೭೫ ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಜಿಲ್ಲಾ ಘಟಕ ಶಿವಮೊಗ್ಗದ ಸಹಯೋಗದೊಂದಿಗೆ ಅಂತರ್ಜಾಲದ ಮೂಲಕ ದಿನಾಂಕ:15-08-2021 ನೇ ಭಾನುವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ೩೫ ಮಕ್ಕಳು ಭಾಗವಹಿಸಿ ಸ್ವಾತಂತ್ರ್ಯದ ಹಣತೆ ಎಂಬ ವಿಷಯದ ಮೇಲೆ ಕವಿತೆ ಬರೆದು ವಾಚಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕ.ರಾ.ಬ.ಸಂ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಹೆಚ್ ಮಹೇಶ್ ರವರು ಸಂಘದ ಸಾಧನೆಗಳನ್ನು ಸವಿವರವಾಗಿ ವಿವರಿಸಿದರು. ಶಿವಮೊಗ್ಗ ಜಿಲ್ಲಾ…