ಶಿವಮೊಗ್ಗ : ೭೫ ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಜಿಲ್ಲಾ ಘಟಕ ಶಿವಮೊಗ್ಗದ ಸಹಯೋಗದೊಂದಿಗೆ ಅಂತರ್ಜಾಲದ ಮೂಲಕ ದಿನಾಂಕ:15-08-2021 ನೇ ಭಾನುವಾರ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿಯ ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರದ ೩೫ ಮಕ್ಕಳು ಭಾಗವಹಿಸಿ ಸ್ವಾತಂತ್ರ್ಯದ ಹಣತೆ ಎಂಬ ವಿಷಯದ ಮೇಲೆ ಕವಿತೆ ಬರೆದು ವಾಚಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ.ರಾ.ಬ.ಸಂ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಹೆಚ್ ಮಹೇಶ್ ರವರು ಸಂಘದ ಸಾಧನೆಗಳನ್ನು ಸವಿವರವಾಗಿ ವಿವರಿಸಿದರು.
ಶಿವಮೊಗ್ಗ ಜಿಲ್ಲಾ ಬರಹಗಾರ ಬಳಗ ಘಟಕದ ಅಧ್ಯಕ್ಷರಾದ ರಫಿ ರಿಪ್ಪನಪೇಟೆ ಆಶಯ ಮಾತುಗಳನ್ನು ನುಡಿದರು.
ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದ ಕ.ರಾ.ಬ.ಸಂಘದ ರಾಜ್ಯಾಧ್ಯಕ್ಷರಾದ ಮಧುನಾಯ್ಕ.ಲಂಬಾಣಿ ರವರು ನಮಗೆ ಸ್ವಾತಂತ್ರ್ಯತಂದು ಕೊಟ್ಟವರನ್ನು ನಾವೆಲ್ಲರೂ ಸ್ಮರಿಸಬೇಕು ಎಂದು ಹೇಳಿದರು.
ಕೆ.ಬಾರವಳಿ ಬಾವಿಹಳ್ಳಿ ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ,ಕವನ ವಾಚನ ಮಾಡಿದ ಪ್ರತಿಯೊಬ್ಬ ಮಕ್ಕಳ ಕವನಗಳನ್ನು ವಿಮರ್ಶೆ ಮಾಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಗಿರೀಶ್ ಕಾಡ್ಲವಾಡ, ಕೆ.ಎನ್ ಶ್ರೀಹರ್ಷ,ಜೀವಿ ಗಂಗೆನೀರು,ಶ್ರೀ ಖಂಜೂ ಬಂಜಾರ, ವಿರೂಪಾಕ್ಷಪ್ಪ, ಸಿ.ಹೆಚ್.ನಾಗೇಂದ್ರಪ್ಪ. ಮಾರ್ಗದರ್ಶಕರಾಗಿ ಅಳೂರು ಚಂದ್ರಪ್ಪ, ಚಂದ್ರಶೇಖರಪ್ಪ ಚಕ್ರಸಾಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರ್ವಹಣೆ,ನಿರೂಪಣೆಯನ್ನು ಕುಮಾರಿ ಅರ್ಪಿತ ಹೆಚ್.ಜಿ. ಮತ್ತು ಶ್ರೀಮತಿ ಹೆಚ್.ಡಿ. ಸುವರ್ಣ,
ಸ್ವಾಗತವನ್ನು ಶ್ರೀಮತಿ ವೈಶಾಲಿ ಎಂ. ಪ್ರಾರ್ಥನೆ ಗೀತೆಯನ್ನು ಶ್ರೀಮತಿ ಮಹಾದೇವಿ ಪಾಟೀಲ್,ದೇಶ ಭಕ್ತಿ ಗೀತೆಯನ್ನು ಕು.ಸೃಷ್ಟಿ.ಪಿ ಮತ್ತು ಕು.ನಿಸರ್ಗ.ಪಿ ವಾಚಿಸಿದರು.
ವಂದನಾರ್ಪಣೆಯನ್ನು ಜಿ.ಬಿ. ಮಾಲತೇಶ, ತಾಂತ್ರಿಕ ನಿರ್ವಹಣೆಯನ್ನು ಕಾರ್ತಿಕ್ ಆಚಾರ್ ನಡೆಸಿಕೊಟ್ಟರು.