Headlines

RIPPONPETE | ಚಾಣಾಕ್ಯ ಬಾರ್‌ನಲ್ಲಿ ಮದ್ಯಪಾನ ವೇಳೆ ವಾಗ್ವಾದ – ಬಿಯರ್ ಬಾಟಲಿಯಿಂದ ಯುವಕನ‌ ಮೇಲೆ ಹಲ್ಲೆ

RIPPONPETE | ಚಾಣಾಕ್ಯ ಬಾರ್‌ನಲ್ಲಿ ಮದ್ಯಪಾನ ವೇಳೆ ವಾಗ್ವಾದ – ಬಿಯರ್ ಬಾಟಲಿಯಿಂದ ಯುವಕನ‌ ಮೇಲೆ ಹಲ್ಲೆ

ರಿಪ್ಪನ್‌ಪೇಟೆ : ಪಟ್ಟಣದ ತೀರ್ಥಹಳ್ಳಿ ರಸ್ತೆಯಲ್ಲಿರುವ ಚಾಣುಕ್ಯ ಬಾರ್ ನಲ್ಲಿ ಮದ್ಯಪಾನದ ವೇಳೆ ಇಬ್ಬರ ನಡುವೆ ಉಂಟಾದ ವಾಗ್ವಾದ ಹಲ್ಲೆಗೆ ತಿರುಗಿದ್ದು ಗಲಾಟೆಯಲ್ಲಿ ಯುವಕನೊಬ್ಬನ ಎಡಭಾಗದ ಹಣೆಗೆ ಗಂಭೀರ ಗಾಯಗೊಂಡಿರುವ ಘಟನೆ ಅಕ್ಟೋಬರ್ 26ರ ರಾತ್ರಿ ಸುಮಾರು 9.30ರ ಸುಮಾರಿಗೆ ನಡೆದಿದೆ.

ಪಟ್ಟಣದ ಗಾಂಧಿನಗರ ನಿವಾಸಿ ರವಿಕುಮಾರ್ ಎಂಬಾತನಿಗೆ ಗಂಭೀರ ಗಾಯಗೊಂಡಿದ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಟ್ಟಣದ ಬನ್ನಿ ನಗರ ನಿವಾಸಿ ಸುಧಾಕರ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು..!!??

ಪಟ್ಟಣದ ತೀರ್ಥಹಳ್ಳಿ ರಸ್ತೆಯ ಚಾಣಕ್ಯ ಬಾರ್‌ನಲ್ಲಿ ರವಿಕುಮಾರ್ ಎಂಬುವವನು ಬ್ರಾಂಡಿ ಸೇವಿಸುತ್ತಿದ್ದಾಗ, ಅವರ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿ ಸುಧಾಕರ್ ಕೆಟ್ಟದಾಗಿ ಮಾತನಾಡಿದ್ದರಿಂದ ರವಿಕುಮಾರ್ ಅವನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಕೋಪಗೊಂಡ ಸುಧಾಕರ್  ಕ್ಯಾಶ್‌ ಕೌಂಟರ್‌ನಲ್ಲಿ ರವಿಕುಮಾರ್ ಹಣ ಪಾವತಿ ಮಾಡುತ್ತಿದ್ದ ವೇಳೆ, ಹಿಂದಿನಿಂದ ಬಂದು ಬೀಯರ್ ಗಾಜಿನ ಬಾಟಲಿಯಿಂದ ಹಣೆಯ ಮೇಲೆ ಹೊಡೆದು ಗಾಯಗೊಳಿಸಿದ್ದಾನೆ.

ಘಟನೆಯಾಗುತ್ತಿದ್ದಂತೇ ಬಾರ್‌ನ ಕ್ಯಾಶಿಯರ್ ಹಾಗೂ ಇತರರು ಮಧ್ಯಪ್ರವೇಶಿಸಿ ಜಗಳ ತಡೆದು, ಆರೋಪಿಯನ್ನು ಹೊರಗಡೆ ಕಳುಹಿಸಿದ್ದಾರೆ. ಹೊರಟಾಗ ಆತ “ನಿನ್ನನ್ನು ನೋಡಿಕೊಳ್ಳುತ್ತೇನೆ” ಎಂದು ಧಮ್ಕಿ ನೀಡಿರುವುದಾಗಿ ರವಿಕುಮಾರ್ ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಗಾಯಾಳುವನ್ನು ಸ್ಥಳೀಯರು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಪ್ರಥಮ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಸಲಹೆಯ ಮೇರೆಗೆ 108 ಆಂಬ್ಯುಲೆನ್ಸ್‌ನಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದಿದ್ದಾರೆ.

ಘಟನೆ ಸಂಬಂಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.