Headlines

ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಗುರುವಾರ ಆದೇಶಿಸಿದೆ.  ರವಿ ಡಿ. ಚನ್ನಣ್ಣನವರ್- ರಾಜ್ಯ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ,  ಡಾ. ಭೀಮಾಶಂಕರ್ ಎಸ್.ಗುಳೇದ್- ಬೆಂಗಳೂರು ನಗರ ಪೂರ್ವ ವಲಯ ಡಿಸಿಪಿ,  ಅಬ್ದುಲ್ ಅಹದ್- ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗ್ರತ ದಳದ ನಿರ್ದೇಶಕ,  ಟಿ. ಶ್ರೀಧರ- ಡಿಸಿಆರ್‌ಇ ಎಸ್‌ಪಿ,  ಟಿ. ಪಿ. ಶಿವಕುಮಾರ್- ಚಾಮರಾಜನಗರ ಎಸ್‌ಪಿ  ದಿವ್ಯಾ ಸಾರಾ ಥಾಮಸ್ – ಮೈಸೂರು ಕೆಪಿಎ…

Read More

ಗಣ ರಾಜ್ಯೋತ್ಸವ ದಿನದಂದೇ ರಾಷ್ಟ್ರಧ್ವಜಕ್ಕೆ ಅವಮಾನ : ಶೂ ಧರಿಸಿ ರಾಷ್ಟ್ರ ಧ್ವಜಕ್ಕೆ ಅವಮಾನಿಸಿದ ದೈಹಿಕ ಶಿಕ್ಷಕ

ರಿಪ್ಪನ್ ಪೇಟೆ : ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ನೊಬ್ಬನು ಧ್ವಜಾರೋಹಣ ದಿನದಂದೇ ರಾಷ್ಟ್ರಧ್ವಜಕ್ಕೆ ಶೂ ಧರಿಸಿ ಅವಮಾನ ಮಾಡಿದ್ದಾರೆ. ಬೆಳ್ಳೂರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ರಾದ ಅಪ್ಪಾ ಸಾಹೇಬ್ ದರಿ ಗೌಡಾ ಎಂಬುವವರು ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಸಮಾರಂಭದಲ್ಲಿ ಶೂ ಧರಿಸಿ ಧ್ವಜಾರೋಹಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ಗೆ ಮಾಹಿತಿ ನೀಡಿದ ಗ್ರಾಮಸ್ಥರೊಬ್ಬರು ಇಂದು ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ  ಧ್ವಜಾರೋಹಣ…

Read More

ಸಚಿವ ಕೆ ಎಸ್ ಈಶ್ವರಪ್ಪ ಕೈ ತಪ್ಪಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ : ನೂತನ ಉಸ್ತುವಾರಿಯನ್ನಾಗಿ ಗೌಡರನ್ನು ನೇಮಿಸಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರ ಕೋವಿಡ್ ಉಸ್ತುವಾರಿ ಹಾಗೂ ಜಿಲ್ಲಾ ಉಸ್ತುವಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದ್ದು ಶಿವಮೊಗ್ಗ ಜಿಲ್ಲೆ ಸಚಿವ ಕೆ ಎಸ್ ಈಶ್ವರಪ್ಪರವರ ಕೈ ತಪ್ಪಿದೆ. ಈಶ್ವರಪ್ಪನವರಿಗೆ ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿ ಹೊಣೆ ಹೊರಿಸಲಾಗಿದೆ.ಹಾಗೇಯೆ ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ‌.ಸಿ ನಾರಾಯಣ್ ಗೌಡರಿಗೆ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿಯನ್ನು ನೀಡಲಾಗಿದೆ. ಇಲ್ಲಿಯವರೆಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಚಿಕ್ಕಮಗಳೂರು ಉಸ್ತುವಾರಿ ಸಚಿವರಾಗಿದ್ದರು. ಇನ್ಮುಂದೆ ಅವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ…

Read More

ಪ್ರಕಾಶ್ ಬಸ್ ಮಾಲೀಕರ ಶೋಧ ಕಾರ್ಯಾಚರಣೆ : ಕಾಫ಼ಿ ಡೇ ಸಿದ್ದಾರ್ಥ ಪ್ರಕರಣ ಮರುಕಳಿಸುವ ಆತಂಕದಲ್ಲಿ ಮಲೆನಾಡಿಗರು..!!!!!

ಶುಕ್ರವಾರ ಸಂಜೆ ಸಾಗರದಿಂದನಾಪತ್ತೆಯಾಗಿದ್ದ ಸಾಗರದ ಪ್ರಖ್ಯಾತ ಟ್ರಾವೆಲ್ಸ್ ಕಂಪನಿ ಮಾಲೀಕರಾದ ಪ್ರಕಾಶ್ ರವರ ಕಾರು, ಮೊಬೈಲ್ ಮತ್ತು ಕನ್ನಡಕ ಹೊಸನಗರ ಸಮೀಪದ ಪಟಗುಪ್ಪೆ ಸೇತುವೆ ಮೇಲೆ ಪತ್ತೆಯಾಗಿರುವ  ಹಿನ್ನಲೆಯಲ್ಲಿ ಪ್ರಕಾಶ್ ರವರ ಪತ್ತೆಗಾಗಿ ಅಗ್ನಿಶಾಮಕ ದಳ ತನ್ನ ಶೋಧಕಾರ್ಯವನ್ನು ಎರಡನೇ ದಿನಕ್ಕೆ ಮುಂದುವರೆಸಿದೆ. ಸೊರಬದಿಂದ ಒಬಿಎಂ ಬೋಟ್ ನ್ನು ತರಿಸಲಾಗಿದ್ದು ನಾಲ್ವರು ಬೋಟ್ ನಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳೀಯ ಮೀನುಗಾರರು ತೆಪ್ಪ ತಂದು ಅದರಲ್ಲಿ ಶೋಧಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿಯೇ ಅತೀ ಉದ್ದದ ಸೇತುವೆಯಾದ ಪಟಗುಪ್ಪ ಸೇತುವೆ ಇತ್ತೀಚೆಗಷ್ಟೇ…

Read More

ರಾಜ್ಯ ಗೃಹಮಂತ್ರಿಗಳ ಸಾಮ್ರಾಜ್ಯದಲ್ಲಿ ಇದೆಂತಹ ಪರಿಸ್ಥಿತಿ…!!

ರಿಪ್ಪನ್‌ಪೇಟೆ: ಕೋಡೂರು ಮತ್ತು ಅಮೃತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಂತಪುರ – ಗರ್ತಿಕರೆ ಸಂಪರ್ಕಿಸುವ ಸುಮಾರು 10 ಕಿ.ಮೀ.ಉದ್ದದ ಜಿಲ್ಲಾ ಮುಖ್ಯರಸ್ತೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ರೈತನಾಗರೀಕರು ಓಡಾಡದಂತಾಗಿದ್ದರೂ ಕೂಡಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯ ಗೃಹ ಸಚಿವರ ಕಣ್ಣಿಗೆ ಇನ್ನೂ ಬಿದ್ದಿಲ್ಲವೊ..! ಎಂಬ ಅನುಮಾನ ಇಲ್ಲಿನ ಜನರನ್ನು ಕಾಡುವಂತಾಗಿದೆ. 1995 ರಲ್ಲಿ ನಬಾರ್ಡ್ ಯೋಜನೆಯಡಿ ಡಾಂಬರೀಕರಣಗೊಂಡ ಶಾಂತಪುರ-ಗರ್ತಿಕೆರೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ಹೊಂಡಗಳಿದೆಯೋ ಅಥವಾ ಹೊಂಡಗಳಲ್ಲಿ ರಸ್ತೆ…

Read More

ವೀಕೆಂಡ್ ಕರ್ಫ್ಯೂ ರದ್ದು ಮಾಡಿದ ರಾಜ್ಯ ಸರ್ಕಾರ : ನೈಟ್ ಕರ್ಫ಼್ಯೂ ಮುಂದುವರಿಕೆ

ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು(Weekend Curfew)  ರದ್ದು ಮಾಡುವಂತೆ ಹೋಟೆಲ್, ಬಾರ್ ಮಾಲೀಕರು, ಉದ್ಯಮಿಗಳ ಸಂಘ ಮಾಡಿದ ಮನವಿಗೆ ಕರ್ನಾಟಕ ಸರ್ಕಾರ ಸ್ಪಂದಿಸಿದ್ದು ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂವನ್ನು ರದ್ದು ಮಾಡುವ ಅಧಿಕೃತ ಘೋಷಣೆ ಮಾಡಿದೆ. ಅದರೊಂದಿಗೆ ಈ ವಾರದಿಂದ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಇರುವುದಿಲ್ಲ, ನೈಟ್ ಕರ್ಫ್ಯೂಅಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ನೈಟ್ ಕರ್ಫ್ಯೂಅನ್ನು(Night Curfew) ಮುಂದುವರಿಸುವಂತೆ ತಜ್ಞರು ಸಲಹೆ ನೀಡಿದ್ದರೂ, ರಾಜ್ಯ ಸರ್ಕಾರ (Karnataka government) ಇದರಲ್ಲಿ ಕೊಂಚ ಬದಲಾವಣೆ ಮಾಡಿದೆ. ಇದರ ಪ್ರಕಾರ ರಾತ್ರಿ 10…

Read More

ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆಗೆ ತಾತ್ಕಾಲಿಕ ಬ್ರೇಕ್ : ಕಾಂಗ್ರೆಸ್ ಹೈಕಮಾಂಡ್ ಸೂಚನೆ ಪಾಲಿಸಿದ ಕಾಂಗ್ರೆಸ್ ನಾಯಕರು

 ಮೇಕೆದಾಟು ಯೋಜನೆಯ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಯನ್ನು ತಾತ್ಕಾಲಿಕ  ರದ್ದುಗೊಳಿಸಿಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ.  ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿದ ಕಾಂಗ್ರೆಸ್ ನಾಯಕರು ಹೈಕಮಾಂಡ್ ಸೂಚನೆಯಂತೆ ಪಾದಯಾತ್ರೆಯನ್ನು ನಿಲ್ಲಿಸಿದ ನಾಯಕರು  ಕೋವಿಡ್ ಕಡಿಮೆಯಾದ ಬಳಿಕ ಮತ್ತೆ ಮುಂದುವರಿಸುವಂತೆ ತೀರ್ಮಾನಿಸಿದ್ದಾರೆ.  ಸಭೆ ಬಳಿಕ ಸುದ್ದಿಗೋಷ್ಠಿಯ್ಕಲ್ಲಿ ಮಾತನಾತಾಡಿದ ಸಿದ್ದರಾಮಯ್ಯ, ಇವತ್ತಿನಿಂದ ರಾಮನಗರದಿಂದ ಪಾದಯಾತ್ರೆ ಆರಂಭ ಆಗಬೇಕಾಗಿತ್ತು, ಇಷ್ಟು ದಿನ ಪಾದಯಾತ್ರೆಗೆ ಅಭೂತ ಪೂರ್ವ ಯಶಸ್ಸನ್ನು ತಂದಿದ್ದೀರಿ….

Read More

ರಾಜ್ಯಾದ್ಯಂತ ವೀಕೆಂಡ್ ಕರ್ಫ಼್ಯೂ ಜಾರಿ : ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನ

ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದೆ.ಇದೇ ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕಫ್ಯೂ೯ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ರಾಜ್ಯದಲ್ಲಿ ಕಫ್ಯೂ೯ ಜಾರಿ ಇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಂಜೆ ನಡೆದ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಬಗ್ಗೆ ವಿಸ್ತೃತವಾಗಿ…

Read More

ರಾಜ್ಯದಲ್ಲಿ ಡಿ.28 ರಿಂದ ನೈಟ್ ಕರ್ಫ಼್ಯೂ ಜಾರಿ : ಸಚಿವ ಡಾ.ಸುಧಾಕರ್

  ಓಮೈಕ್ರಾನ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಡಿಸೆಂಬರ್ 20 ರಿಂದ 10 ದಿನಗಳ ವರೆಗೆ ನೈಟ್ ಕರ್ಫ್ಯೂ ಹೇರಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ತಜ್ಞರ ಜೊತೆ ಸಮಾಲೋಚನೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಸುಧಾಕರ್, ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಇನ್ನೂ ಹೋಟೆಲ್ ಗಳಲ್ಲಿ ಇರುವ ಆಸನಗಳಲ್ಲಿ ಶೇ. 50 ರಷ್ಟು ಜನರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ…

Read More

ತೀರ್ಥಹಳ್ಳಿಯ ಯುವ ಸಾಹಿತಿ ಅರುಣ್ ಮಂಜುನಾಥ್ ಹಾಗೂ ಮಂಗಳೂರಿನ ರಶ್ಮಿ ಸನಿಲ್ ರವರಿಗೆ ರಾಜ್ಯೋತ್ಸವ ಪ್ರಶಸ್ತಿ :

ಮಂಡ್ಯ ಜಿಲ್ಲೆಯ ಗಾಂಧೀ ಭವನದಲ್ಲಿ ಡಿ 18 ರಂದು ನಡೆದ ಕಸ್ತೂರಿ ಸಿರಿಗನ್ನಡ ವೇದಿಕೆಯ ಕವಿಗೋಷ್ಠಿ ಹಾಗೂ ಕಡಲು ಪುಸ್ತಕ ಬಿಡುಗಡೆ, ರಾಜ್ಯೋತ್ಸವ ಪುರಸ್ಕಾರ ಸಮಾರಂಭದಲ್ಲಿ ತೀರ್ಥಹಳ್ಳಿಯ ಯುವ ಸಾಹಿತಿ ಹಾಗೂ ಪತ್ರಕರ್ತ ಅರುಣ್ ಮಂಜುನಾಥ್ ಹಾಗೂ ಮಂಗಳೂರಿನ ಯುವ ಕವಯಿತ್ರಿ ರಶ್ಮಿ ಸನಿಲ್ ರವರಿಗೆ  ರಾಜ್ಯೋತ್ಸವ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷರಾದ ಪೋತೆರ ಮಹದೇವು ಹಾಗೂ ಮುಖ್ಯ ಅತಿಥಿಗಳಾದ ನಾಗರತ್ನಮ್ಮ,ಹುಲಿಯೂರುದುರ್ಗ ಲಕ್ಷೀ ನಾರಾಯಣ್,ಡಾ ಶಿವರಾಜ್ ಗೌಡ, ಹೆಚ್…

Read More