ಕರೋನಾ ಸಂದರ್ಭದಲ್ಲಿ ನಷ್ಟಕ್ಕೊಳಗಾದ ಸಿಗರೇಟ್ ಹಾಗೂ ಗುಟ್ಕಾ ಕಂಪನಿಗಳಿಗೆ ಸರ್ಕಾರ ರಿಯಾಯಿತಿ ನೀಡಿತ್ತು ಪ್ರಸ್ತುತ ಮೂರನೇ ಅಲೆಯಲ್ಲಿ ವ್ಯಾಪಾರಸ್ಥ ಕಾಳಸಂತೆಯ ವರ್ತಕರು ಕೋಟಿಗಟ್ಟಲೆ ಮೌಲ್ಯದ ಸಿಗರೇಟ್ ಹಾಗೂ ಗುಟ್ಕಾ ಉತ್ಪನ್ನವನ್ನು ದಾಸ್ತಾನು ಮಾಡಿ ದುಪ್ಪಟ್ಟು ಲಾಭ ಮಾಡುವ ಕನಸಿನೊಂದಿಗೆ ತಮ್ಮ ಗೋಡನ್ ಗಳಲ್ಲಿ ದಾಸ್ತಾನು ಮಾಡಿ ಕೋಟಿಗಟ್ಟಲೆ ಲಾಭ ಮಾಡುವ ಕನಸು ಕಾಣುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಈ ಭ್ರಷ್ಟ ದಾಸ್ತಾನು ಗಾರರಿಗೆ ಬಿಗ್ ಶಾಕ್ ನೀಡಿದೆ. ಕೇಂದ್ರ ಸರ್ಕಾರ ನೀಡಿದ ಬಿಗ್ ಶಾಕ್ ಕಾಳಸಂತೆಯ ವರ್ತಕರಿಗೆ ನುಂಗಲಾರದ ತುತ್ತಾಗಿದೆ.
ಸಿಗರೇಟ್ ಹಾಗೂ ತಂಬಾಕು ಬೆಲೆ ಹೆಚ್ಚಾಗುವುದು ಎಂದು ಮಾರುಕಟ್ಟೆಯಲ್ಲಿ ಕಾಲ್ಪನಿಕ ಕೊರತೆ ಸೃಷ್ಟಿಸಿದ್ದ ಸಣ್ಣ ಅಂಗಡಿಗಳಿಂದ ಹಿಡಿದು ದೊಡ್ಡ ದಾಸ್ತಾನುಕಾರರು ಈಗ ಅ…ಡು ಸುಟ್ಟ ಬೆಕ್ಕಿನಂತಾಗಿದ್ದಾರೆ.
ಕೇಂದ್ರ ಸರ್ಕಾರ ಸತತ 2ನೇ ವರ್ಷ ತಂಬಾಕು ಉತ್ಪನ್ನಗಳು ಹಾಗೂ ಸಿಗರೇಟ್ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಮುಂದಿನ ಆರ್ಥಿಕ ವರ್ಷದಲ್ಲಿ ಸಿಗರೇಟ್ ಮಾರಾಟದ ಪ್ರಮಾಣದಲ್ಲಿ ಸಾಧಾರಣ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕೋವಿಡ್ ಸಮಯದಲ್ಲಿ ಉಂಟಾದ ಅಡ್ಡಿಯಿಂದ ತಂಬಾಕು ಹಾಗೂ ಸಿಗರೇಟ್ ಉದ್ಯಮ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ. ಇದರ ನಡುವೆ ಈ ಎರಡೂ ಉತ್ಪನ್ನಗಳ ಮೇಲೆ ಸರ್ಕಾರವು ತೆರಿಗೆ ವಿಚಾರದಲ್ಲಿ ಸ್ಥಿರವಾಗಿರುವುದು ಇನ್ನಷ್ಟು ಸಹಾಯ ಮಾಡಲಿದೆ ಎಂದು ಐಸಿಐಸಿಐ ಡೈರೆಕ್ಟ್ ನ ವಿಶ್ಲೇಷಕ ಸಂಜಯ್ ಮನ್ಯಾಲ್ ತಿಳಿಸಿದ್ದಾರೆ.
2022-23ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಗಳನ್ನು ಮುಟ್ಟದೆ ಬಿಟ್ಟಿದ್ದರಿಂದ ಮಂಗಳವಾರ ಐಟಿಸಿ (ITC) ಷೇರುಗಳಲ್ಲಿ ಏರಿಕೆ ಕಂಡಿದೆ. ಐಟಿಸಿ ಕಂಪನಿಯ ಆದಾಯದಲ್ಲಿ ಶೇ. 40ರಷ್ಟು ಪಾಲು ಸಿಗರೇಟ್ ಆದಾಯದಿಂದಲೇ ಬರುತ್ತದೆ. ಪ್ರತಿ ಬಾರಿಯೂ ಬಜೆಟ್ ಸಂದರ್ಭದಲ್ಲಿ ತೆರಿಗೆಗಳು ಏರಿಕೆಯಾಗುವ ಭಯದಲ್ಲಿ ಐಟಿಸಿ ಷೇರು ಎಚ್ಚರಿಕೆಯಲ್ಲಿಯೇ ಇರುತ್ತದೆ. ಆದರೆ, ನಿರ್ಮಲಾ ಸೀತಾರಾಮನ್ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದ ಕಾರಣ, ಐಟಿಸಿ ಪಾಲಿಗೆ ಇದು ಧನಾತ್ಮಕ ವಿಚಾರ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಐಟಿಸಿ ಕಂಪನಿಯು ಫೆಬ್ರವರಿ 3 ರಂದು ಡಿಸೆಂಬರ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕಕ್ಕೆ ತನ್ನ ಹಣಕಾಸಿನ ಫಲಿತಾಂಶಗಳನ್ನು ಬಿಡುಗಡೆ ಮಾಡುತ್ತದೆ. ಮಾರ್ಚ್ 2022 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶದ ಘೋಷಣೆಯನ್ನು ಸಹ ಪರಿಗಣಿಸಲಿದೆ.