w
Headlines
Home » ದಿಗ್ವಿಜಯ ನ್ಯೂಸ್​ ನ ಸುದ್ದಿ ಸಂಪಾದಕ ಪ್ರಶಾಂತ್​ ರಿಪ್ಪನ್ ಪೇಟೆ ರವರಿಗೆ “ಆರೂಢ ಶ್ರೀ” ಪ್ರಶಸ್ತಿ ಪ್ರದಾನ :

ದಿಗ್ವಿಜಯ ನ್ಯೂಸ್​ ನ ಸುದ್ದಿ ಸಂಪಾದಕ ಪ್ರಶಾಂತ್​ ರಿಪ್ಪನ್ ಪೇಟೆ ರವರಿಗೆ “ಆರೂಢ ಶ್ರೀ” ಪ್ರಶಸ್ತಿ ಪ್ರದಾನ :

 

ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಶ್ರೀ ಆರೂಢ ಮಠದ ಶ್ರೋ ಬ್ರ ಬೃಹ್ಮಲೀನ ಸದ್ಗುರು ಶ್ರೀ ಸದಾಶಿವಾನಂದ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯಸ್ಮರಣೆ ಹಾಗೂ 42ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್ ಸಮಾರಂಭದಲ್ಲಿ ದಿಗ್ವಿಜಯ ವಾಹಿನಿಯ ನಿರೂಪಕ , ನಿರ್ಮಾಪಕರಾದ ಪ್ರಶಾಂತ್ ರಿಪ್ಪನ್ ಪೇಟೆ ಅವರಿಗೆ ‘ ಆರೂಢ ಶ್ರೀ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಪ್ರಶಾಂತ ರಿಪ್ಪನ್ ಪೇಟೆ ಅವರಿಗೆ ಆರೂಢ ಶ್ರೀ ಪ್ರಶಸ್ತಿ ಲಭಿಸಿರುವುದು ನಮಗೆ ಅತೀವ ಸಂತಸ ತಂದಿದೆ. ಅವರಿಂದ ಇನ್ನಷ್ಟು ಕಾರ್ಯವಾಗಲಿ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಶಾಂತ ರಿಪ್ಪನ್ ಪೇಟೆ ಅವರು ಚಿಕ್ಕಮುನವಳ್ಳಿ ಆರೂಢ ಮಠದಿಂದ ಆರೂಢ ಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವುದು ತುಂಬಾ ಸಂತೋಷ ಸಂಗತಿ. ನಾವು ಮಾಡುವ ಕಾರ್ಯಗಳಿಗೆ ಮತ್ತಷ್ಟು ಶಕ್ತಿ ತುಂಬಿದೆ ಎಂದರು.

ಈ ಸಂದರ್ಭದಲ್ಲಿ ಧಾರವಾಡದ ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಪೂಜ್ಯ ಶ್ರೀ ಶ್ರೀ ಶಶಿಕಾಂತ ಫಡಸಲಗಿ ಗುರುಗಳು, ಪೂಜ್ಯ ಶ್ರೀ ರಮೇಶ ಗುರುಗಳು ಧಾರವಾಡ, ಬೆಳಗಾವಿ ಆರ್​ಟಿಒ ಅಧಿಕಾರಿ ಶ್ರೀ ಶಿವಾನಂದ ಮಗದುಮ್ ಹಾಗೂ ಅನೇಕ ಭಕ್ತರು ಉಪಸ್ಥಿತರಿದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.