M B Manjunath has been elected president and M Ramachandra as general secretary of Kala Kaustubha Kannada Sangha. Read the latest local news on Postman News Kannada.
ರಿಪ್ಪನ್ಪೇಟೆ : 33ನೇ ವರ್ಷದ ಕಲಾ ಕೌಸ್ತುಭ ಕನ್ನಡ ಸಂಘಕ್ಕೆ ಹಾಗೂ 71ನೇ ವರ್ಷದ ಕನ್ನಡ ರಾಜ್ಯೋತ್ಸವ ಸಮಿತಿಗೆ ಆಧ್ಯಕ್ಷರಾಗಿ ಎಂ ಬಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿಯಾಗಿ ರಾಮಚಂದ್ರ ಎಂ ಆಯ್ಕೆಯಾಗಿದ್ದಾರೆ.
ಕಳೆದ ಸಾಲಿನ ಅಧ್ಯಕ್ಷರಾದ ಮುರುಳಿ ಕೆರೆಹಳ್ಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಯನ್ನು ಆಯ್ಕೆ ಮಾಡಲಾಯಿತು ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಕಲಾ ಕೌಸ್ತುಭ ಕನ್ನಡ ಸಂಘ 32ನೇ ವರ್ಷದ ವಾರ್ಷಿಕೋತ್ಸವ ಮತ್ತು 71ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಬರುವ ನವೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಅದ್ದೂರಿಯಾಗಿ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.
