w
Headlines
Home » ಉಂಡೂ ಹೋದ, ಮೊಬೈಲ್ ಕೊಂಡೂ ಹೋದ! ತೀರ್ಥಹಳ್ಳಿಯಲ್ಲಿ ವಿಚಿತ್ರ ಕಳ್ಳತನ

ಉಂಡೂ ಹೋದ, ಮೊಬೈಲ್ ಕೊಂಡೂ ಹೋದ! ತೀರ್ಥಹಳ್ಳಿಯಲ್ಲಿ ವಿಚಿತ್ರ ಕಳ್ಳತನ

Screenshot 2026 10 28 18 37 15 707 com.openai.chatgpt edit

ಉಂಡೂ ಹೋದ, ಮೊಬೈಲ್ ಕೊಂಡೂ ಹೋದ! ತೀರ್ಥಹಳ್ಳಿಯಲ್ಲಿ ವಿಚಿತ್ರ ಕಳ್ಳತನ | An unidentified man allegedly stole a mobile phone after receiving food at a house on Rath Beedi in Thirthahalli, Shivamogga district. Police acted promptly and apprehended the suspect.

ತೀರ್ಥಹಳ್ಳಿ | ಹಸಿವಾಗಿದೆ, ತುಂಬಾ ಸುಸ್ತಾಗಿದೆ, ಊಟ ಹಾಕಿ ಎಂದು ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬನಿಗೆ ಮನೆಯವರು ಮಾನವೀಯತೆಯಿಂದ ಊಟ ನೀಡಿದ ಘಟನೆ ನಡೆದಿದೆ. ಆದರೆ, ಊಟ ಮಾಡಿದ ಬಳಿಕ ಆತ ಮನೆಯಲ್ಲಿದ್ದ ಮೊಬೈಲ್ ಕದ್ದು ಪರಾರಿಯಾಗಿದ್ದಾನೆ. ಈ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ರಥಬೀದಿಯಲ್ಲಿ ನಡೆದಿದೆ.

ತೀರ್ಥಹಳ್ಳಿಯ ರಥಬೀದಿಯಲ್ಲಿರುವ ಮನೆಗೆ ಊಟದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದಾನೆ. ತನಗೆ ತುಂಬಾ ಹಸಿವಾಗಿದ್ದು, ಸುಸ್ತಾಗಿದೆ. ಊಟ ನೀಡುವಂತೆ ಮನೆಯವರ ಬಳಿ ಮನವಿ ಮಾಡಿಕೊಂಡಿದ್ದಾನೆ. ಆತನ ಮಾತಿಗೆ ಸ್ಪಂದಿಸಿದ ಮನೆಯವರು ಮಾನವೀಯತೆಯಿಂದ ಆತನನ್ನು ಒಳಗೆ ಕರೆದು ಊಟ ನೀಡಿದ್ದಾರೆ.

ಆದರೆ, ಊಟ ಮುಗಿಸಿ ಮನೆಯಿಂದ ಹೊರಡುವ ಸಂದರ್ಭದಲ್ಲಿ ಮನೆಯಲ್ಲಿದ್ದ ಮೊಬೈಲ್‌ ಅನ್ನು ಕದ್ದು ಆತ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಸ್ವಲ್ಪ ಸಮಯದ ಬಳಿಕ ಮೊಬೈಲ್‌ಗಾಗಿ ಮನೆಯವರೆಲ್ಲ ಹುಡುಕಾಡಿದರೂ ಅದು ಪತ್ತೆಯಾಗಿಲ್ಲ. ಬಳಿಕ ಮನೆಗೆ ಊಟ ಕೇಳಿಕೊಂಡು ಬಂದಿದ್ದ ವ್ಯಕ್ತಿಯೇ ಮೊಬೈಲ್ ಕದ್ದುಕೊಂಡು ಹೋಗಿರಬಹುದು ಎಂಬ ಅನುಮಾನ ಮನೆಯವರಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮೊಬೈಲ್ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.