ಜಿಲ್ಲಾ ಸುದ್ದಿ:
RIPPONPETE | ಸಿಕ್ಕ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ
RIPPONPETE | ಸಿಕ್ಕ ಚಿನ್ನದ ಸರವನ್ನು ವಾರಸುದಾರರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಶಿಕ್ಷಕಿ ರಿಪ್ಪನ್ ಪೇಟೆ: ಕೋಡೂರು ಬಳಿಯ ಅಮ್ಮನಘಟ್ಟ ಬಸ್ ನಿಲ್ದಾಣದಲ್ಲಿ ಚಿನ್ನದ ಚೈನ್ ಸರವೊಂದು ಶಿಕ್ಷಕಿ ಪಾರ್ವತಿಬಾಯಿ ಅವರಿಗೆ ಸಿಕ್ಕಿದ್ದು, ಅವರು ಅದನ್ನು ತಕ್ಷಣವೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ಪಿಎಸ್‌ಐ ರಾಜುರೆಡ್ಡಿ ಅವರ ಮೂಲಕ ಹಸ್ತಾಂತರಿಸುವ ಮೂಲಕ ತಮ್ಮ ಪ್ರಾಮಾಣಿಕತೆಯನ್ನು ಮೆರೆದಿದ್ದಾರೆ. ಈ ಚಿನ್ನದ ಸರ ಮಲ್ಲಾಪುರದ ಶಿವಕುಮಾರ್ ಅವರಿಗೆ ಸೇರಿದೆ ಎಂದು ತಿಳಿದುಬಂದಿದ್ದು, ಇಂದು ಠಾಣೆಯಲ್ಲಿ ಸಂಬಂಧಿತ ವಾರಸುದಾರರಿಗೆ ಸರವನ್ನು ಹಿಂತಿರುಗಿಸಲಾಯಿತು. ಈ…
HUMCHA | ನವೋದಯ ಶಾಲೆ ಉಚಿತ ತರಬೇತಿ ಶಿಬಿರ ಉದ್ಘಾಟನೆ | ವಿದ್ಯಾರ್ಥಿಗಳ ಕಲಿಕೆಯಲ್ಲಿ ಏಕಾಗ್ರತೆ ಅಗತ್ಯ ; ಮಂಜಪ್ಪ ಗುಳುಕೊಪ್ಪ
HUMCHA | ನವೋದಯ ಶಾಲೆ ಉಚಿತ ತರಬೇತಿ ಶಿಬಿರ ಉದ್ಘಾಟನೆ | ವಿದ್ಯಾರ್ಥಿಗಳ ಕಲಿಕೆಯಲ್ಲಿ ಏಕಾಗ್ರತೆ ಅಗತ್ಯ ; ಮಂಜಪ್ಪ ಗುಳುಕೊಪ್ಪ ರಿಪ್ಪನ್‌ಪೇಟೆ ; ವಿದ್ಯಾರ್ಥಿಗಳ ಕಲಿಕೆಯಲ್ಲಿ ಏಕಾಗ್ರತೆ ಅಗತ್ಯವಾಗಿದೆ.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಆಭ್ಯಾಸ ಮಾಡಿದಲ್ಲಿ ಮಾತ್ರ ಗುರಿ ತಲುಪಲು ಸಾದ್ಯ ಶಿಕ್ಷಣ ಶ್ರೇಷ್ಟ ನಾಗರೀಕರನ್ನಾಗಿ ಮಾಡುತ್ತದೆಂದು ನಿವೃತ್ತ ಶಿಕ್ಷಕ ಮಂಜಪ್ಪ ಗುಳುಕೊಪ್ಪ ಹೇಳಿದರು. ಹುಂಚ ಶ್ರೀಪದ್ಮಾಂಬ ಪ್ರೌಢಶಾಲೆಯ ಶ್ರೀರಂಗರಾವ್ ಸಭಾಭವನದಲ್ಲಿ ಭಾನುವಾರ ಮಿಲನ ಆಲೂಮ್ನಿ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾದ 5ನೇ ವರ್ಷದ…
ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕಿದೆ; ಪಿಎಸ್‌ಐ ರಾಜುರೆಡ್ಡಿ
ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕಿದೆ; ಪಿಎಸ್‌ಐ ರಾಜುರೆಡ್ಡಿ ರಿಪ್ಪನ್‌ಪೇಟೆ : ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕು,ರಕ್ತದ ಅಗತ್ಯತೆ ಮನಗಾಣುವ ಮೂಲಕ ಯುವ ಜನತೆ ರಕ್ತದಾನದಂತಹ ಮಹತ್ಕಾರ್ಯಕ್ಕೆ ಹೆಚ್ಚು ಹೆಚ್ಚು ಕೈ ಜೋಡಿಸಬೇಕು ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣಾಧಿಕಾರಿ ರಾಜುರೆಡ್ಡಿ ಹೇಳಿದರು. ಜಿಲ್ಲಾ ಮೆಗ್ಗಾನ್ ಸರಕಾರಿ ಆಸ್ಪತ್ರೆ, ಪೊಲೀಸ್ ಇಲಾಖೆ , ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಿಪ್ಪನ್‌ಪೇಟೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ರಕ್ತದಾನ ಮಾಡುವ ಮೂಲಕ ವ್ಯಕ್ತಿ ಸಂಭವನೀಯ ಹೃದಯಾಘಾತ, ರಕ್ತದೊತ್ತಡ,…
RIPPONPETE | ವಿರಾಟ್ ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಜನಿವಾರ ಧಾರಣೆ ಹಾಗೂ ಯಜ್ಞ ಸಮಾರಂಭ
ರಿಪ್ಪನ್ ಪೇಟೆಯಲ್ಲಿ ಋಗ್ ಉಪಾಕರ್ಮ – ವಿರಾಟ್ ವಿಶ್ವಕರ್ಮ ಸಂಘದ ನೇತೃತ್ವದಲ್ಲಿ ಜನಿವಾರ ಧಾರಣೆ ಹಾಗೂ ಯಜ್ಞ ಸಮಾರಂಭ ರಿಪ್ಪನ್ ಪೇಟೆ : ಪಟ್ಟಣದ ವಿಶ್ವಕರ್ಮ ಸಮಾಜದವರಿಂದ, ವಿರಾಟ್ ವಿಶ್ವಕರ್ಮ ಸಂಘದ ಸಹಭಾಗಿತ್ವದಲ್ಲಿ ಋಗ್ ಉಪಾಕರ್ಮದ ಪ್ರಯುಕ್ತ ಭವ್ಯವಾದ ಜನಿವಾರ ಧಾರಣೆ ಹಾಗೂ ವಿಶ್ವಕರ್ಮ ದೇವರ ಯಜ್ಞ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮವು ಸಮಾಜ ಬಾಂಧವರ ಸಕ್ರಿಯ ಸಹಭಾಗಿತ್ವದಲ್ಲಿ, ಕುಲಾಪುರೋಹಿತರಾದ ಚೇತನ್ ಪುರೋಹಿತರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಮಂಜುನಾಥ್ ಆಚಾರ್ಯ (ಗ್ಯಾರೇಜ್),…
ಕೊಡಚಾದ್ರಿ ಬೆಟ್ಟಕ್ಕೆ ತೆರಳುತಿದ್ದ ಪ್ರವಾಸಿಗರಿದ್ದ ಜೀಪ್ ಪಲ್ಟಿ
ಕೊಡಚಾದ್ರಿ ಬೆಟ್ಟಕ್ಕೆ ತೆರಳುತಿದ್ದ ಪ್ರವಾಸಿಗರಿದ್ದ ಜೀಪ್ ಪಲ್ಟಿ ಕೊಲ್ಲೂರಿನಿಂದ ಕೊಡಚಾದ್ರಿಗೆ ಬೆಟ್ಟಕ್ಕೆ ತೆರಳುತಿದ್ದ ಪ್ರವಾಸಿಗರಿದ್ದ ಜೀಪ್ ಪಲ್ಟಿಯಾಗಿರುವ ಘಟನೆ ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಬಳಿ ನಡೆದಿದೆ. ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಕೇರಳ ಮೂಲದ ಎಂಟು ಜನ ಪ್ರವಾಸಿಗರಿದ್ದ ಜೀಪ್ ಕುಂಬಳೆ ಬಳಿ ಪಲ್ಟಿಯಾಗಿದೆ.ಘಟನೆಯಲ್ಲಿ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೊಲ್ಲೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.. ಕೊಡಚಾದ್ರಿ ಜೀಪ್ ಚಾಲಕರ ಉದ್ದಟತನಕ್ಕೆ ಬೀಳಬೇಕಿದೆ ಪೊಲೀಸರ…
RIPPONPETE | ಪೊಲೀಸರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು
RIPPONPETE | ಪೊಲೀಸರಿಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ರಿಪ್ಪನ್ ಪೇಟೆ : ರಕ್ಷಾ ಬಂಧನ ಹಬ್ಬದ ಅಂಗವಾಗಿ, ಬಿಜೆಪಿ ಹೊಸನಗರ ತಾಲ್ಲೂಕು ಮಹಿಳಾ ಮೋರ್ಚಾ ವತಿಯಿಂದ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಸೋಮವಾರ ವಿಶೇಷ ಕಾರ್ಯಕ್ರಮದ ಮೂಲಕ ರಾಖಿ ಕಟ್ಟುವ ಕಾರ್ಯಕ್ರಮ ನಡೆಯಿತು. ಸಂಪ್ರದಾಯಬದ್ಧ ರೀತಿಯಲ್ಲಿ ಹಬ್ಬವನ್ನು ಆಚರಿಸಿದ ಮಹಿಳಾ ಮೋರ್ಚಾ ಕಾರ್ಯಕರ್ತೆಯರು, ಮೊದಲಿಗೆ ಪೊಲೀಸರ ಕೈಗೆ ರಾಖಿ ಕಟ್ಟಿದರು. ನಂತರ ಅವರಿಗೆ ತಿಲಕ…
ಸರ್ಕಾರಿ ಗೌರವದೊಂದಿಗೆ ಯೋಧ ಪ್ರಜ್ವಲ್ ಅಂತ್ಯಕ್ರಿಯೆ – ಶಾಸಕ ಬೇಳೂರು ಅಂತಿಮ ನಮನ
ರಸ್ತೆ ಅಪಘಾತದಲ್ಲಿ ಮೃತಪಟ್ಟ ಯೋಧ ಪ್ರಜ್ವಲ್ ಅಂತ್ಯಕ್ರಿಯೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜಿಗಳೆಮನೆ ಗ್ರಾಮದಲ್ಲಿ ನೆರವೇರಿತು. ಗುರುವಾರ ಚಾಮರಾಜನಗರದಲ್ಲಿ ಸಂಭವಿಸಿದ ಅಪಘಾತದಲ್ಲಿ ಅಗ್ನಿವೀರ್ ಯೋಧ ಪ್ರಜ್ವಲ್ ಮೃತಪಟ್ಟಿದ್ದರು. ಇಂದು ಅವರ ಹುಟ್ಟೂರು ಜಿಗಳೆಮನೆ ಗ್ರಾಮದಲ್ಲಿ ಸರ್ಕಾರಿ ಗೌರವದೊಂದಿಗೆ ಪ್ರಜ್ವಲ್‌ಗೆ ಅಂತಿಮ ನಮನ ಸಲ್ಲಿಸಲಾಯಿತು ಅಗಲಿದ ಯೋಧನಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಸಾಗರ ತಾಲೂಕು ಅಡಳಿತದ ವತಿಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು. ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ…
ಗ್ರಾಮೀಣ ಸಮಸ್ಯೆಗಳನ್ನು ಎತ್ತಿಹಿಡಿಯುವಲ್ಲಿ ಪತ್ರಕರ್ತರ ಪಾತ್ರ ಅಪಾರ – ಶಾಸಕ ಗೋಪಾಲಕೃಷ್ಣ ಬೇಳೂರು
ಗ್ರಾಮೀಣ ಸಮಸ್ಯೆಗಳನ್ನು ಎತ್ತಿಹಿಡಿಯುವಲ್ಲಿ ಪತ್ರಕರ್ತರ ಪಾತ್ರ ಅಪಾರ – ಶಾಸಕ ಗೋಪಾಲಕೃಷ್ಣ ಬೇಳೂರು ಹೊಸನಗರ: “ಮಾಧ್ಯಮವು ಕೇವಲ ಸುದ್ದಿಯನ್ನು ಹಂಚುವ ಸಾಧನವಲ್ಲ, ಅದು ಸಮಾಜದ ದಿಕ್ಕು ತೋರಿಸುವ ಕನ್ನಡಿಯಾಗಿದೆ, “ಗ್ರಾಮೀಣ ಪ್ರದೇಶದ ಹತ್ತು ಹಲವು ಸಮಸ್ಯೆಗಳನ್ನು ಎತ್ತಿ ಹಿಡಿದು, ಅವುಗಳಿಗೆ ಪರಿಹಾರ ಕಲ್ಪಿಸಲು ರಾಜಕಾರಣಿಗಳ ಗಮನ ಸೆಳೆಯುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಅಪಾರ,” ಎಂದು ಅವರು ಹೇಳಿದರು. ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು. ಹೊಸನಗರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿಟ್ಟೂರು ಸರ್ಕಾರಿ ಪದವಿ ಪೂರ್ವ…
ಶ್ರೀಗಂಧದ ತುಂಡು ಮಾರುತ್ತಿದ್ದ ಇಬ್ಬರ ಬಂಧನ
ಶ್ರೀಗಂಧದ ತುಂಡು ಮಾರುತ್ತಿದ್ದ ಇಬ್ಬರ ಬಂಧನ Two arrested for selling sandalwood ಶಿವಮೊಗ್ಗ: ಶ್ರೀಗಂಧದ ಮರ ಕಡಿದು ಸಣ್ಣ ತುಂಡುಗಳನ್ನಾಗಿ ಮಾಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದೊಡ್ಡಪೇಟೆ ಪೊಲೀಸರು ಅಶೋಕನಗರ ಚಾನಲ್ ಬಳಿ ಬಂಧಿಸಿದ್ದಾರೆ. ಆರೋಪಿಗಳಿಂದ ಸುಮಾರು ೧೫ ಸಾವಿರ ರೂ.ಮೌಲ್ಯದ ೩ ಕೆ.ಜಿ ೫೨೦ ಗ್ರಾಂ ತೂಕದ ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಸಾದಿಕ್ ಬೇಗ್ (೪೬) ಮತ್ತು ನಿಜಾಮುದ್ದಿನ್ (೫೨) ಬಂಧಿತರು. ಅಶೋಕ ನಗರ ಚಾನಲ್ ಬಳಿ ಆರೋಪಿಗಳು ಮರದ ತುಂಡುಗಳನ್ನು…
ಕಾರು ಮತ್ತು ಲೇಲ್ಯಾಂಡ್ ವಾಹನದ ನಡುವೆ ಅಪಘಾತ – ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು
ಕಾರು ಮತ್ತು ಲೇಲ್ಯಾಂಡ್ ವಾಹನದ ನಡುವೆ ಅಪಘಾತ – ಲೈಟ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು ಸಾಗರ ತಾಲೂಕಿನ ಆನಂದಪುರದ ಸಮೀಪದ ಹೊಸೂರು ಸೇತುವೆ ಬಳಿ ನೆಕ್ಸನ್ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ವಾಹನ ಪರಸ್ಪರ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಸಾಗರದಿಂದ ಹೊಸೂರಿನತ್ತ ತೆರಳುತ್ತಿದ್ದ ನೆಕ್ಸನ್ ಕಾರಿಗೆ, ಆನಂದಪುರದಿಂದ ಸಾಗರದತ್ತ ಬರುತ್ತಿದ್ದ ಅಶೋಕ್ ಲೇಲ್ಯಾಂಡ್ ವಾಹನ ಡಿಕ್ಕಿಯಾದ ಪರಿಣಾಮ, ಕಾರು ರಸ್ತೆ ಬದಿಯ ಲೈಟ್ ಕಂಬಕ್ಕೂ ಢಿಕ್ಕಿ ಹೊಡೆದು ಹಾನಿಗೊಳಗಾಗಿದೆ. ಘಟನೆಯಲ್ಲಿ ಕಾರು ಚಾಲಕ ಹಾಗೂ…