ಕೆಂಚನಾಲದಲ್ಲಿ ಶಾಲೆ ಮೇಲೆ ಬಿದ್ದ ಮರ , ಆಲುವಳ್ಳಿ – ಮಾದಾಪುರದಲ್ಲಿ ಭಾರಿ ಮಳೆಗೆ ಮನೆ ಹಾನಿ – ಸ್ಥಳಕ್ಕೆ ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ , ಆರ್ಥಿಕ ನೆರವು
ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಪಂ ವ್ಯಾಪ್ತಿಯ ಉರ್ದು ಶಾಲೆ ಮೇಲೆ ಭಾರಿ ಗಾಳಿ ಮಳೆಗೆ ಮರ ಬಿದ್ದು ಹಾನಿಯಾಗಿತ್ತು ಮತ್ತು ಆಲುವಳ್ಳಿ , ಮಾದಾಪುರ ಗ್ರಾಮದಲ್ಲಿ ಮನೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯಂತೆ ಅವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆರ್ಥಿಕ ನೆರವು ನೀಡಿದರು.
ಶಾಲೆ ಮೇಲೆ ಉರುಳಿದ ಮರ :
ಭಾರಿ ಗಾಳಿ ಮಳೆಗೆ ಕೆಂಚನಾಲದ ಉರ್ದು ಶಾಲೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಹಾನಿಯಾಗಿ ಕೊಠಡಿಯೊಳಗಿದ್ದ ಪೀಠೋಪಕರಣಗಳು ಜಖಂಗೊಂಡಿತ್ತು.ಕಟ್ಟಡದ ಮಧ್ಯಭಾಗದ ಮೇಲೆ ಬಿದ್ದಿರುವುದರಿಂದ ಆಚೆ ಈಚೆ ಹೊಂದಿಕೊಂಡಿರುವ ಕೊಠಡಿಗಳಿಗೂ ಹಾನಿಯಾಗಿತ್ತು ಸ್ಥಳಕ್ಕೆ ಭೇಟಿ ನೀಡಿದ ಸಣ್ಣಕ್ಕಿ ಮಂಜು ಶಾಸಕ ಬೇಳೂರು ಗೋಪಾಲಕೃಷ್ಣ ರವರ ಸೂಚನೆಯಂತೆ ಕೂಡಲೇ ಮರ ತೆರವುಗೊಳಿಸಿ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಭಾರಿ ಮಳೆಗೆ ಮನೆ ಹಾನಿ :
ಮಸರೂರು ಗ್ರಾಮದ ಎಸ್ ಸಿ ಕಾಲೋನಿಯಲ್ಲಿ ಬಸವರಾಜ್ ಬಿನ್ ಷಣ್ಮುಖ ಎಂಬುವವರ ಮನೆ ಬಾರಿ ಮಳೆಗೆ ಸಂಪೂರ್ಣ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇದೇ ಕಾಲೋನಿಯ ನಿಂಗಪ್ಪ ಎಂಬುವವರ ಮನೆಯ ಮೇಲ್ಚಾವಣಿ ಹಾನಿಯಾಗಿತ್ತು ಕೂಡಲೇ ಗ್ರಾಮ ಪಂಚಾಯತ್ ವತಿಯಿಂದ ಟಾರ್ಪಲ್ ವ್ಯವಸ್ಥೆ ಕಲ್ಪಿಸಿಕೊಡಲಾಯಿತು.
ಮಾದಾಪುರದಲ್ಲಿ ಮನೆ ಹಾನಿ :
ಮಾದಾಪುರ ಎಸ್ ಸಿ ಕಾಲೋನಿಯ ರಂಗನಾಥ್ ಎಂಬುವವರ ಮನೆ ಭಾರಿ ಗಾಳಿ ಮಳೆಗೆ ಮನೆಯ ಹಿಂಭಾಗ ಸಂಪೂರ್ಣ ಕುಸಿತವಾಗಿತ್ತು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇತಿ ನೀಡಿದ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಶಾಸಕರ ಸೂಚನೆಯ ಮೇರೆಗೆ ಆರ್ಥಿಕ ನೆರವು ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ , ಸದಸ್ಯರಾದ ಕೃಷ್ಣೋಜಿರಾವ್ , ಪರಮೇಶ್ ,ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ್ , ಮುಖಂಡರಾದ ಮಂಜುನಾಥ್ ಕೆಂಚನಾಲ,ವಿಜಿಯಣ್ಣ , ಸರಸ್ವತಿ , ಸುದೀಪ್ ,ಖಲೀಲ್ ಷರೀಫ್ ಗಾಳಿಬೈಲು ಹಾಗೂ ಇನ್ನಿತರರಿದ್ದರು.