Kenchanala | ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು : ಕರಿಬಸಮ್ಮ
ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು : ಕರಿಬಸಮ್ಮ ರಿಪ್ಪನ್ ಪೇಟೆ : ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕುಟುಂಬದ ಹಿರಿಯರು ಮೊದಲ ಆದ್ಯತೆ ನೀಡಬೇಕು. ಪೌಷ್ಟಿಕ ಆಹಾರ ಸೇವಿಸುವುದರಿಂದ ಗರ್ಭಿಣಿಯರು ಮತ್ತು ಹುಟ್ಟುವಂತಹ ಮಗುವಿಗೆ ಪೌಷ್ಟಿಕಾಂಶತೆ ಸಿಗುತ್ತದೆ ಹಾಗೂ ಮಗುವಿನ ಬೆಳವಣಿಗೆಯಲ್ಲಿ ಪೌಷ್ಟಿಕಾಂಶತೆ ಬಹಳ ಮುಖ್ಯ ಎಂದು ಹೊಸನಗರ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕರಿ ಬಸಮ್ಮ ಹೇಳಿದರು. ರಿಪ್ಪನ್ ಪೇಟೆ ರೋಟರಿ ಕ್ಲಬ್ ಹಾಗೂ ಕೆಂಚನಾಲ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ…