Humcha | ಭಾರಿ ಮಳೆಗೆ ಮನೆ ,ಕೊಟ್ಟಿಗೆ ಹಾನಿ – ಸ್ಥಳಕ್ಕೆ ಗ್ರಾಪಂ ಅಧ್ಯಕ್ಷೆ , ಅಧಿಕಾರಿಗಳ ಭೇಟಿ
ಹುಂಚ : ಭಾರಿ ಗಾಳಿ ಮಳೆಗೆ ಕಡಸೂರು ಗ್ರಾಮದಲ್ಲಿ ಮನೆ ಹಾಗೂ ಕೊಟ್ಟಿಗೆಗಳು ಹಾನಿಯಾಗಿದ್ದು ಸ್ಥಳಕ್ಕೆ ಗ್ರಾಪಂ ಅಧ್ಯಕ್ಷರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೀಟಿ ನೀಡಿ ಪರಿಶೀಲಿಸಿದರು.
ಕಡಸೂರು ಗ್ರಾಮದ ಶಶಿಕಲಾ ಕೋಂ ಮಂಜುನಾಥ್ ರವರ ಮನೆ ಭಾರಿ ಗಾಳಿ ಮಳೆಗೆ ಹಾನಿಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಗ್ರಾಪಂ ಅಧ್ಯಕ್ಷೆ ಸುಮಂಗಲ ದೇವರಾಜ್ , ಕಂದಾಯ ಇಲಾಖೆಯ ಅಧಿಕಾರಿಗಳು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಕಡಸೂರು ಗ್ರಾಮದ ಶ್ರೀಕರ ಎಂಬುವವರ ಕೊಟ್ಟಿಗೆ ಭಾರಿ ಮಳೆಗೆ ಕುಸಿದು ಬಿದ್ದು ಭಾರಿ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಗ್ರಾಪಂ ಅಧ್ಯಕ್ಷರು ,ಸದಸ್ಯರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೇ ಸಂಧರ್ಭದಲ್ಲಿ ಹುಂಚ ಗ್ರಾಪಂ ವ್ಯಾಪ್ತಿಯಲ್ಲಿ ಮಹಾಮಾರಿ ಡೆಂಗ್ಯೂ ಖಾಯಿಲೆ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆ ನಡೆಸಿ ಚರ್ಚೆ ನಡೆಸಲಾಯಿತು
ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ವೆಂಕಟೇಶ್ , ಸದಸ್ಯರಾದ ರಾಘವೇಂದ್ರ ತೋಟದ ಕಟ್ಟು, ಶ್ರೀಧರ ಸುಣಕಲ್, ಆಶಾ ಯದುಕುಮಾರ್ ಮತ್ತು ಪಿಡಿಒ ರಮೇಶ್ ಇದ್ದರು.