Ripponpete | ಭಾರಿ ಗಾಳಿ ಮಳೆಗೆ ಕೊಟ್ಟಿಗೆ ಕುಸಿದು ಎಮ್ಮೆ ಸಾವು
ಭಾರಿ ಮಳೆ ಮತ್ತು ಗಾಳಿಗೆ ಜಾನುವಾರು ಕೊಟ್ಟಿಗೆ ಕುಸಿದು ಬಿದ್ದು ಒಂದು ಎಮ್ಮೆ ಸಾವನ್ನಪ್ಪಿ ಇನ್ನೆರಡು ಎಮ್ಮೆಗಳಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಕೆರೆಹಳ್ಳಿಯಲ್ಲಿ ನಡೆದಿದೆ.
ಕೆರೆಹಳ್ಳಿ ಗ್ರಾಮದ ಶಿವಾಜಿರಾವ್ ಎಂಬುವವರ ಮನೆಯ ಹಿಂಭಾಗದ ಕೊಟ್ಟಿಗೆ ಭಾರಿ ಮಳೆ ಗಾಳಿಗೆ ಕುಸಿದು ಬಿದ್ದು ಎಮ್ಮೆಯೊಂದು ಸಾವನ್ನಪೊಇರುವ ಘಟನೆ ನಡೆದಿದೆ.
ಶನಿವಾರ ಬೆಳಗಿನಜಾವ ನಾಲ್ಕು ಗಂಟೆಗೆ ಈ ಘಟನೆ ಸಂಭವಿಸಿದ್ದು ಮೂಕ ಪ್ರಾಣಿಗಳ ಆಕ್ರಂದನ ಕೇಳಿ ಮನೆಯಿಂದ ಹೊರಬಂದು ನೋಡಿದಾಗ ಅವಶೇಶಗಳ ಎಂಟು ಎಮ್ಮೆಗಳು ಸಿಕ್ಕಿಹಾಕಿಕೊಂಡಿದ್ದು ಅಕ್ಕ ಪಕ್ಕದವರ ಸಹಾಯದಿಂದ ಏಳು ಎಮ್ಮೆಗಳನ್ನು ರಕ್ಷಿಸಿದರು ಒಂದು ಎಮ್ಮೆ ಸ್ಥಳದಲ್ಲೇ ಸಾವನಪ್ಪಿತ್ತು.
ಉಳಿದ ಎಮ್ಮೆಗಳಲ್ಲಿ ಎರಡು ಎಮ್ಮೆಗಳಿಗೆ ಗಂಭೀರ ಪ್ರಮಾಣದ ಹೊಡೆತ ಬಿದ್ದಿದ್ದು ಉಳಿದ ಜಾನುವಾರುಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದೆ.