ಹೊಸನಗರ ತಾಲೂಕಿನ ಬಿದನೂರು ನಗರದಲ್ಲಿ ರಣಭೀಕರ ಮಳೆ – 24 ಗಂಟೆ ಅವಧಿಯಲ್ಲಿ 316 MM ದಾಖಲೆ ಮಳೆ

ಹೊಸನಗರ ತಾಲೂಕಿನ ಬಿದನೂರು ನಗರದಲ್ಲಿ ರಣಭೀಕರ ಮಳೆ – 24 ಗಂಟೆ ಅವಧಿಯಲ್ಲಿ 316 MM ದಾಖಲೆ ಮಳೆ(Rain)

ಹೊಸನಗರ(Hosanagara) ತಾಲೂಕಿನ ಬಿದನೂರು ನಗರ(Nagara) ಹೋಬಳಿಯಲ್ಲಿ ಮಂಗಳವಾರ ಬೆಳಿಗ್ಗೆ 8:00 ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದಾಖಲೆಯ 316 ಎಂಎಂ ಮಳೆ(rain) ಸುರಿದು ಜನಜೀವನ ಅಸ್ತವ್ಯಸ್ತವಾಗಿದೆ.


ತಾಲೂಕಿನ ಮಾಸ್ತಿಕಟ್ಟೆಯಲ್ಲಿ(Masthikatte) 240 ಎಂಎಂ ಚಕ್ರ ನಗರದಲ್ಲಿ(chakranagara) 220ಎಂಎಂ ಯಡೂರಿನಲ್ಲಿ(Yaduru) 217ಎಂಎಂ ಹುಲಿಕಲ್ಲಿನಲ್ಲಿ 210ಎಂಎಂ ಮಾನಿಯಲ್ಲಿ 185ಎಂಎಂ ಸಾವೇಹಕಲ್ಲಿನಲ್ಲಿ 167ಎಂಎಂ ಕಾರ್ಗಲ್ನಲ್ಲಿ 67.4 ಎಂಎಂ ಹೊಸನಗರದಲ್ಲಿ 39 ಎಂಎಂ ಇಂದು ಬೆಳಿಗ್ಗೆ 8:00 ಗಂಟೆಗೆ ಅಂತ್ಯಗೊಂಡ 24 ಗಂಟೆ ಅವಧಿಯಲ್ಲಿ ದಾಖಲಾಗಿರುತ್ತದೆ.

1819 ಅಡಿ ಗರಿಷ್ಠ ಮಟ್ಟದ ಲಿಂಗನಮಕ್ಕಿ(lingnamakki) ಜಲಾಶಯದ ನೀರಿನ ಮಟ್ಟ 1810.50 ಅಡಿ ತಲುಪಿದ್ದು ಜಲಾಶಯಕ್ಕೆ 50710 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ ಕಳೆದ ವರ್ಷ ಇದೇ ಅವಧಿಗೆ ಜಲಾಶಯದ ನೀರಿನ ಮಟ್ಟ 1786.30 ಅಡಿ ದಾಖಲಾಗಿತ್ತು

Leave a Reply

Your email address will not be published. Required fields are marked *