ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್ ಮರ -ವಾಹನ ಸಂಚಾರ ವ್ಯತ್ಯಯ | balaraj – road
ಶಿವಮೊಗ್ಗದ ಗಾಂಧಿ ಪಾರ್ಕ್ ನಲ್ಲಿದ್ದ ಬೃಹತ್ ಮರವೊಂದು ಧರೆಗುರುಳಿ ರಸ್ತೆ ಸಂಚಾರ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ಗಾಂಧಿ ಪಾರ್ಕ್ ಗೆ ಹೊಂದಿಕೊಂಡಿದ್ದ ಶೌಚಾಲಯದ ಹಿಂಭಾಗದಲ್ಲಿರುವ ಹಳೆಯ ಮರವೊಂದು ಬಾಲರಾಜ್ ಅರಸ್ ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬದ ತಂತಿಗಳು ತುಂಡಾಗಿವೆ, ವಾಹನಗಳಿಗೂ ಹಾನಿಯಾಗಿರುವ ಮಾಹಿತಿ ತಿಳಿದುಬಂದಿದೆ.
ಘಟನೆಯಲ್ಲಿ ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಾಗಿದೆ ಎನ್ನಲಾಗುತ್ತಿದೆ.
ಹಳೆ ಮರ ಈ ಬಾರಿಯ ಮಳೆಗೆ ಶಿಥಿಲಗೊಂಡು ಬಿದ್ದಿರುವ ಶಂಕೆ ಇದೆ. ಮರ ಬಿದ್ದ ಕಾರಣ ಮೂರು ಬೈಕ್ ಸವಾರರು ಸಿಲುಕಿಕೊಂಡಿರುವುದಾಗಿ ತಿಳಿದು ಬಂದಿದೆ.
ಅರಣ್ಯ ಇಲಾಖೆ, ಮಹಾನಗರ ಪಾಲಿಕೆ ಮತ್ತು ಮೆಸ್ಕಾಂ ಸಿಬ್ಬಂದಿ ಕೂಡಲೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ
ಸದ್ಯ ಬಾಲರಾಜ್ ರಸ್ತೆಯಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ.