HOSANAGARA | ಚಲಿಸುತಿದ್ದ KSRTC ಬಸ್ ಮೇಲೆ ಉರುಳಿಬಿದ್ದ ವಿದ್ಯುತ್ ಕಂಬ – ತಪ್ಪಿದ ಭಾರಿ ಅನಾಹುತ

HOSANAGARA | ಚಲಿಸುತಿದ್ದ KSRTC ಬಸ್ ಮೇಲೆ ಉರುಳಿಬಿದ್ದ ವಿದ್ಯುತ್ ಕಂಬ – ತಪ್ಪಿದ ಭಾರಿ ಅನಾಹುತ

ಚಲಿಸುತ್ತಿದ್ದ KSRTC ಬಸ್ ಮೇಲೆ ವಿದ್ಯುತ್ ಕಂಬವೊಂದು ಉರುಳಿಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಟ್ಟೂರು ಸಮೀಪದಲ್ಲಿ ನಡೆದಿದೆ.


ಸಂಪೆಕಟ್ಟೆ – ನಿಟ್ಟೂರು ಮಾರ್ಗದಲ್ಲಿ ಚಲಿಸುತಿದ್ದ KSRTC ಬಸ್‌ನ ಹಿಂಬದಿಗೆ ತಂತಿ ಸಮೇತ ವಿದ್ಯುತ್ ಕಂಬ ಬಿದ್ದಿದೆ.ಅದೃಷ್ಟವಶಾತ್ ಈ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಬೆಂಗಳೂರಿನಿಂದ ಹೊಸನಗರ – ನಗರ ಮಾರ್ಗವಾಗಿ ಕೊಲ್ಲೂರು ಕಡೆ ಬಸ್ ಚಲಿಸುತ್ತಿದ್ದ ಬಸ್ ನಿಟ್ಟೂರು-ಸಂಪೆಕಟ್ಟೆ ಮಾರ್ಗದಲ್ಲಿ ಚಲಿಸುತ್ತಿರುವಾಗ ಭಾರಿ ಗಾಳಿ ಮಳೆ ಬಂದು ವಿದ್ಯುತ್ ರಸ್ತೆಯತ್ತ ಉರುಳಿ ಬಸ್ ನ ಮೇಲೆ ಉರುಳಿಬಿದ್ದಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕಾಗಮಸಿ ವಿದ್ಯುತ್ ಕಂಬ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

ತಾಲೂಕಿನಾದ್ಯಂತ ಕಳೆದೆರಡು ದಿನಗಳಿಂದ ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನಾದ್ಯಂತ ಅನೇಕ ಅವಘಡಗಳು ಸಂಭವಿಸಿದೆ.

Leave a Reply

Your email address will not be published. Required fields are marked *