ಭಾರಿ ಗಾಳಿ ಮಳೆಗೆ ರಸ್ತೆ ಉರುಳಿ ಬಿದ್ದ ಮರ | ಹೊಸನಗರ- ಕುಂದಾಪುರ ಮಾರ್ಗದಲ್ಲಿ ಸಂಚಾರ ವ್ಯತ್ಯಯ | Rain update
ಹೊಸನಗರ : ಭಾರಿ ಮಳೆ ಗಾಳಿಗೆ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದು ಕುಂದಾಪುರ – ಹೊಸನಗರ ಸಂಚಾರ ವ್ಯತ್ಯವಾಗಿರುವ ಘಟನೆ ನಡೆದಿದೆ.
ಪಟ್ಟಣದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಲಘು ವಾಹನಗಳಿಗೆ ಹೊರತು ಪಡಿಸಿ ದೊಡ್ಡ ವಾಹನಗಳ ಸಂಚಾರಕ್ಕೆ ವ್ಯತ್ಯವಾಗಿದ್ದು, ಮರದಲ್ಲಿ ಜೇನು ಇರುವ ಕಾರಣ ಮರ ತೆರವು ಕಾರ್ಯಾಚರಣೆಗೆ ತೊಂದರೆಯಾಗಿದೆ ಎನ್ನಲಾಗುತ್ತಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ತೆರಳಿದ್ದು ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.