Kenchanala | ಭಾರಿ ಮಳೆಗೆ ಶಾಲೆ ಮೇಲೆ ಉರುಳಿ ಬಿದ್ದ ಬೃಹತ್ ಮರ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೆಂಚನಾಲ ಗ್ರಾಮದಲ್ಲಿರುವ ಉರ್ದು ಮಾಧ್ಯಮ ಶಾಲೆಯ ಮೇಲೆ ಬೃಹತ್ ಮರವೊಂದು ಬಿದ್ದು ಕಟ್ಟಡ ಜಖಂಗೊಂಡಿರುವ ಘಟನೆ ನಡೆದಿದೆ.
ಭಾರಿ ಗಾಳು ಮಳೆಗೆ ಕೆಂಚನಾಲದ ಉರ್ದು ಶಾಲೆಯ ಮೇಲೆ ಮರ ಬಿದ್ದು ಮೇಲ್ಛಾವಣಿ ಹಾನಿಯಾಗಿದೆ.ಕೊಠಡಿಯೊಳಗಿದ್ದ ಪೀಠೋಪಕರಣಗಳು ಜಖಂಗೊಂಡಿದೆ.ಕಟ್ಟಡದ ಮಧ್ಯಭಾಗದ ಮೇಲೆ ಬಿದ್ದಿರುವುದರಿಂದ ಆಚೆ ಈಚೆ ಹೊಂದಿಕೊಂಡಿರುವ ಕೊಠಡಿಗಳಿಗೂ ಹಾನಿಯಾಗಿದೆ.
ಶಾಲೆಗಳಿಗೆ ರಜೆಯಾಗಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ.