Headlines
GridArt 20250627

ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ – ಲೈಸೆನ್ಸ್ ರದ್ದುಗೊಳಿಸಿದ ಜಿಲ್ಲಾಧಿಕಾರಿ | ನಾಮಫಲಕಗಳ ತೆರವು

ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ – ಲೈಸೆನ್ಸ್ ರದ್ದುಗೊಳಿಸಿದ ಜಿಲ್ಲಾಧಿಕಾರಿ | ನಾಮಫಲಕಗಳ ತೆರವು ರಿಪ್ಪನ್ ಪೇಟೆ : ಪಟ್ಟಣದ ಸಾಗರ ರಸ್ತೆಯ ಗ್ರಾಮ-ಓನ್ ಕೇಂದ್ರದಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ವರದಿಯನ್ನಾಧರಿಸಿ ಗ್ರಾಮ-ಓನ್ ಕೇಂದ್ರದ ಲೈಸೆನ್ಸ್(ಐಡಿ)ನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶ ಹೊರಡಿಸಿದ್ದಾರೆ. ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗ್ರಾಮ ಒನ್ ಕೇಂದ್ರಗಳು ಕೆಲವೆಡೆ…

Read Full News
GridArt 20250626

ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು – ಗುರಣ್ಣ ಹೆಬ್ಬಾಳ್

ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು – ಗುರಣ್ಣ ಹೆಬ್ಬಾಳ್   ರಿಪ್ಪನ್ ಪೇಟೆ : ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯ ಅನೇಕ ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ಒಳಗಾಗಿ ತನ್ನ ಜೀವವನ್ನೆ ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದಿವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಮಾಜ ಮಾದಕ ವಸ್ತುಗಳಿಂದ ಮುಕ್ತವಾಗಿರಬೇಕು ಎಂದು ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಹೆಬ್ಬಾಳ್ ಹೇಳಿದರು ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ತಿಕೆರೆ ಪದವಿಪೂರ್ವ ಕಾಲೇಜಿನಲ್ಲಿ ಮಾದಕ…

Read Full News
Images (55)

ಭಾರಿ ಮಳೆ | ಹೊಸನಗರ ತಾಲೂಕಿನಾದ್ಯಂತ ಶಾಲೆಗಳಿಗೆ ‘ರಜೆ’ ನೀಡುವ ನಿರ್ಧಾರ ಶಾಲಾಭಿವೃದ್ದಿ ಸಮಿತಿಗೆ

ಭಾರಿ ಮಳೆ | ಹೊಸನಗರ ತಾಲೂಕಿನಾದ್ಯಂತ ಶಾಲೆಗಳಿಗೆ ‘ರಜೆ’ ನೀಡುವ ನಿರ್ಧಾರ ಶಾಲಾಭಿವೃದ್ದಿ ಸಮಿತಿಗೆ ಹೊಸನಗರ ತಾಲ್ಲೂಕಿನ ನಗರ ಹೋಬಳಿಯ ನಿಟ್ಟೂರು ಭಾಗದಲ್ಲಿ ಮುಂಗಾರು ಮಳೆ ರಭಸವಾಗಿ  ಸುರಿಯುತ್ತಿರುವುದು ಮುಂದುವರೆದಿರುವುದು ವರದಿಯಾಗಿದ್ದು ಈ ಬಗ್ಗೆ ತಹಶೀಲ್ದಾರ್ ರಶ್ಮಿ ಹಾಲೇಶ್ ರವರೊಂದಿಗೆ ಚರ್ಚಿಸಿದ್ದು, ಅವರ ಸೂಚನೆಯಂತೆ, ಇದೇ ರೀತಿ ಪರಿಸ್ಥಿತಿ ತಾಲ್ಲೂಕಿನ  ಕೆಲವು ಭಾಗದಲ್ಲಿಯೂ ಇರುವ ಕಾರಣ ಮಕ್ಕಳಿಗೆ ಶಾಲೆಗೆ ಬರಲು ತೊಂದರೆಯಾಗುವ  ಪರಿಸ್ಥಿತಿಯಿದ್ದಲ್ಲಿ ಎಸ್ ಡಿಎಂಸಿ ಯವರೊಂದಿಗೆ ಚರ್ಚಿಸಿ ರಜೆ ನೀಡಲು ಕ್ರಮವಹಿಸಲು ತಾಲೂಕಿನ ಎಲ್ಲಾ ಶಾಲೆಯ…

Read Full News
GridArt 20250625

ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮುಖ್ಯ : ಪಿಎಸ್ಐ ರಾಜುರೆಡ್ಡಿ

ರಸ್ತೆ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮುಖ್ಯ : ಪಿಎಸ್ಐ ರಾಜುರೆಡ್ಡಿ ರಿಪ್ಪನ್ ಪೇಟೆ : ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಯುವ ಸಮೂಹ ರಸ್ತೆ ಸುರಕ್ಷತೆಯ ಬಗ್ಗೆ ಅರಿವನ್ನು ಹೊಂದಿರಬೇಕು ಆಗ ಮಾತ್ರ ಅಪಘಾತಗಳಿಂದ ಉಂಟಾಗುವ ಸಾವು ನೋವುಗಳಿಂದ ಮತ್ತು  ಅಪಾಯದಿಂದ ಪಾರಾಗಬಹುದು ಎಂದು ರಿಪ್ಪನ್ ಪೇಟೆಯ ನೂತನ  ಪಿಎಸ್ಐ ರಾಜುರೆಡ್ಡಿ ಹೇಳಿದರು. ಪಟ್ಟಣದ ರೋಟರಿ ಕ್ಲಬ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ರಸ್ತೆ…

Read Full News
IMG 20250625 WA0044

ಲೈಂಗಿಕ ಕಿರುಕುಳದ ಆರೋಪ : ಮೆಗ್ಗಾನ್ ಭೋಧನಾ ಆಸ್ಪತ್ರೆಯ ಸಹ ಪ್ರಾಧ್ಯಾಪಕನನ್ನು ಬಂಧಿಸಿ, ಕ್ರಮ ಜರುಗಿಸಲು ಆಗ್ರಹ

ಲೈಂಗಿಕ ಕಿರುಕುಳದ ಆರೋಪ: ಸಹ ಪ್ರಾಧ್ಯಾಪಕನನ್ನು ಬಂಧಿಸಿ, ಕ್ರಮ ಜರುಗಿಸಲು ಆಗ್ರಹ ಶಿವಮೊಗ್ಗ: ನಗರದ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ|| ಅಶ್ವಿನ್ ಹೆಬ್ಬಾರ್  ವೈದ್ಯ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ  ಆರೋಪದ ಹಿನ್ನೆಲೆಯಲ್ಲಿ  ಅವರನ್ನು ಬಂಧಿಸಿ ಕ್ರಮ ಜರುಗಿಸಬೇಕೆಂದು ಪೀಪಲ್ ಲಾಯರ್ಸ್ ಗೀಲ್ಡ್‌ನ ಮುಖ್ಯಸ್ಥ ಕೆ.ಪಿ. ಶ್ರೀಪಾಲ್ ಆಗ್ರಹಿಸಿದ್ದಾರೆ. ಬುಧವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಪ್ರಕರಣ ದಾಖಲಾಗುತ್ತಿದ್ದಂತೆ ಡಾ|| ಅಶ್ವಿನ್ ಹೆಬ್ಬಾರ್ ನಾಪತ್ತೆಯಾಗಿದ್ದಾರೆ. ಆತನನ್ನು ಹುಡುಕಿ ಬಂಧಿಸಬೇಕು. ಪೊಲೀಸರು ಕೂಡ ಸುಮ್ಮನಿದ್ದಾರೆ. ಜಿಲ್ಲಾಧಿಕಾರಿ ಮತ್ತು…

Read Full News
Images (54)

ಭಾರಿ ಮಳೆಯ ಹಿನ್ನಲೆ – ಹೊಸನಗರ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ

ಭಾರಿ ಮಳೆಯ ಹಿನ್ನಲೆ – ಹೊಸನಗರ ತಾಲೂಕಿನಾದ್ಯಂತ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಹೊಸನಗರ ತಾಲ್ಲೂಕಿನಾದ್ಯಂತ ಭಾರಿ ಮಳೆಯಾಗುತ್ತಿರುವ ಇಂದು (ಜೂ.25) ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಹೊಸನಗರ ತಾಲ್ಲೂಕಿನಲ್ಲಿ ತೀವ್ರ ಮಳೆಯಾಗುತ್ತಿದೆ, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸನಗರ ತಾಲೂಕಿನಾದ್ಯಂತ ಜೂ. 25 ರಂದು ಎಲ್ಲಾ ಅಂಗನವಾಡಿ ಕೇಂದ್ರಗಳು, ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಹಾಗೂ ಈ ದಿನದಂದು ರಜೆ ಘೋಷಿಸಲಾಗಿದೆ…

Read Full News
GridArt 20250624

ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್

ಭಾರಿ ಮಳೆಗೆ ಹೆದ್ದಾರಿ ಮೇಲೆ ಬಿದ್ದ ಮರ | ಸಂಚಾರ ವ್ಯತ್ಯಯ , ತಪ್ಪಿದ್ ಭಾರಿ ಅನಾಹುತ್ ರಿಪ್ಪನ್‌ಪೇಟೆ : ಪಟ್ಟಣದ ಸಾಗರ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ಬೃಹತ್ ಮರವೊಂದು ಬಿದ್ದು ಸಂಚಾರ ವ್ಯತ್ಯಯವಾಗಿದೆ.ಮರ ಬಿದ್ದ ಪಕ್ಕದಲ್ಲಿಯೇ ಪಿಕಪ್ ವಾಹನವೊಂದು ನಿಂತಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಭಾರಿ ಅನಾಹುತವೊಂದು ತಪ್ಪಿದೆ. ಸಾಗರ ರಸ್ತೆಯ ಮುಸ್ಲಿಂ ಖಬರ್ ಸ್ಥಾನ್ ಮುಂಭಾಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು ಸಂಚಾರ ವ್ಯತ್ಯಯವಾಗಿದೆ.ಈ ಸಂಧರ್ಭದಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಪಿಕಪ್ ವಾಹನದ…

Read Full News
Screenshot 2025 06 23 21 22 53 956 com.facebook.katana edit

RIPPONPETE | ಹಾರೋಹಿತ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಅಳಿವಿನಂಚಿನಲ್ಲಿರುವ ಹಾರುವ ಓತಿ

RIPPONPETE | ಹಾರೋಹಿತ್ಲು ಗ್ರಾಮದಲ್ಲಿ ಕಾಣಿಸಿಕೊಂಡ ಅಳಿವಿನಂಚಿನಲ್ಲಿರುವ ಹಾರುವ ಓತಿ ರಿಪ್ಪನ್ ಪೇಟೆ : ಅಳಿವಿನಂಚಿನಲ್ಲಿರುವ ಅಪರೂಪದ ಜೀವಿ ಹಾರುವ ಓತಿ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಹಾರೋಹಿತ್ತಲು ಗ್ರಾಮದಲ್ಲಿ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಶಿಕ್ಷಕ ಮಾಲತೇಶ್ ಅವರ ಮನೆ ಸಮೀಪ ಕಾಣಿಸಿಕೊಂಡ ಓತಿ ಕೆಲಕಾಲ ಮಕ್ಕಳು ಮತ್ತು ಹಿರಿಯರಿಗೆ ಆಕರ್ಷಣೀಯವಾಗಿದ್ದು, ತನ್ನ ವಿಶಿಷ್ಟ ಸೌಂದರ್ಯದ ದರ್ಶನ ನೀಡಿತು. ಜನರ ಸದ್ದು ಗದ್ದಲ ಹೆಚ್ಚಾಗುತ್ತಿದ್ದಂತೆ ತನಗೆ ಪ್ರಾಶಸ್ಯವಾದ ಅಡವಿಯನ್ನು ಸೇರಿಕೊಂಡಿತು. ಸರಿಸೃಪಗಳ ಪ್ರಭೇದಕ್ಕೆ ಸೇರಿರುವ ಈ…

Read Full News
GridArt 20250623

RIPPONPETE |ಗ್ರಾಮ ಒನ್ ಕೇಂದ್ರದಲ್ಲಿ ಸೇವೆಗಳಿಗೆ ಹೆಚ್ಚುವರಿ ಹಣ ವಸೂಲಿ – ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ, ಸೂಕ್ತ ಕ್ರಮದ ಭರವಸೆ

ಗ್ರಾಮ ಒನ್ ಕೇಂದ್ರದಲ್ಲಿ ಸೇವೆಗಳಿಗೆ ಹೆಚ್ಚುವರಿ ಹಣ ವಸೂಲಿ – ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ, ಸೂಕ್ತ ಕ್ರಮದ ಭರವಸೆ ರಿಪ್ಪನ್ ಪೇಟೆ : ಸಮಾಜದ ದುರ್ಬಲ ವರ್ಗದವರಿಗೆ ಸರ್ಕಾರಿ ಸೇವೆಗಳನ್ನು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಗ್ರಾಮ ಒನ್ ಕೇಂದ್ರಗಳು ಕೆಲವೆಡೆ ಭ್ರಷ್ಟಾಚಾರದ ಕೂಪಗಳಾಗಿ ಮಾರ್ಪಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಆಘಾತಕಾರಿ ಘಟನೆಯೊಂದು ರಿಪ್ಪನ್ ಪೇಟೆ ಪಟ್ಟಣದ ಸಾಗರ ರಸ್ತೆಯ ಗ್ರಾಮ ಒನ್ ಕೇಂದ್ರದಲ್ಲಿ ಬೆಳಕಿಗೆ ಬಂದಿದ್ದು ಈ ಬಗ್ಗೆ ಪತ್ರಕರ್ತ ರಫ಼ಿ ರಿಪ್ಪನ್ ಪೇಟೆ…

Read Full News
GridArt 20250623

RIPPONPETE | ರಸಗೊಬ್ಬರ ದರ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ , ಪ್ರತಿಭಟನೆ

RIPPONPETE | ರಸಗೊಬ್ಬರ ದರ ಹೆಚ್ಚಳ ವಿರೋಧಿಸಿ ಯುವ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ , ಪ್ರತಿಭಟನೆ ರಿಪ್ಪನ್ ಪೇಟೆ : ಕೇಂದ್ರದ ಬಿಜೆಪಿ ಸರ್ಕಾರ ರಸಗೊಬ್ಬರ ಬೆಲೆ ಏರಿಸಿರುವುದನ್ನು ವಿರೋಧಿಸಿ ಇಂದು ರಿಪ್ಪನ್‌ಪೇಟೆಯ ವಿನಾಯಕ ವೃತ್ತದಲ್ಲಿ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೇತೃತ್ವದಲ್ಲಿ ರಸ್ತೆ ತಡೆ ನಡೆಸುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಮಾತನಾಡಿ, ಕೇಂದ್ರದ ಜನವಿರೋಧಿ ನೀತಿಯಿಂದಾಗಿ ಗೊಬ್ಬರ, ಗ್ಯಾಸ್ ಇಂಧನ…

Read Full News
GridArt 20250623

ಹೆಚ್ಚು ಮಕ್ಕಳ ಸಾಗಾಟ – 17 ಶಾಲಾ ಬಸ್‌ಗಳ ವಿರುದ್ದ ಕೇಸು

ಹೆಚ್ಚು ಮಕ್ಕಳ ಸಾಗಾಟ – 17 ಶಾಲಾ ಬಸ್‌ಗಳ ವಿರುದ್ದ ಕೇಸು ಶಿವಮೊಗ್ಗ: ಶಾಲಾ ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ ಸೋಮವಾರ  ಬೆಳಿಗ್ಗೆ ನಗರ ಸಂಚಾರಿ ಪೊಲೀಸರು ವಾಹನ ಸವಾರರಿಗೆ ಜಾಗೃತಿ ಮೂಡಿಸಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್, ಹೆಚ್ಚಿನ ಮಕ್ಕಳನ್ನ ಕರೆದುಕೊಂಡು ಹೋಗುವ ಪ್ರಕರಣ, ಹಾಗೂ ಎಫ್ ಸಿ ಆಗದ ಪ್ರಕರಣಗಳು ಬೆಳಕಿಗೆ ಬಂದಿದೆ. ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು  ಶಿವಮೊಗ್ಗ ನಗರದದಾದ್ಯಂತ ವಿವಿಧ ಸ್ಥಳಗಳಲ್ಲಿ ಹಾಗೂ ಪ್ರಮುಖ ವೃತ್ತಗಳಲ್ಲಿ…

Read Full News
GridArt 20250621

ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಕುಸಿತ – ಸ್ಥಳಕ್ಕೆ ತಹಶೀಲ್ದಾರ್ , ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ – ಆರ್ಥಿಕ ನೆರವು

ಜೇನಿ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಗೆ ಮನೆ ಕುಸಿತ – ಸ್ಥಳಕ್ಕೆ ತಹಶೀಲ್ದಾರ್ , ಶಾಸಕರ ಆಪ್ತ ಕಾರ್ಯದರ್ಶಿ ಭೇಟಿ – ಆರ್ಥಿಕ ನೆರವು ಹೊಸನಗರ : ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಗ್ರಾಮದಲ್ಲಿ ಬಾರಿ ಮಳೆಯಿಂದ ಮನೆಯೊಂದು ಕುಸಿತವಾಗಿದ್ದು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ತಹಸಿಲ್ದಾರ್ ರಶ್ಮಿ ಹಾಲೇಶ್ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳವಳ್ಳಿ ಗ್ರಾಮದ ಸೀತಮ್ಮ ಕೋಂ ಗಿರೀಶ್ ಎಂಬುವವರ…

Read Full News
GridArt 20250621

ಶಾಲಾ ವಾಹನಗಳ ದಿಢೀರ್ ತಪಾಸಣೆ –ಸುರಕ್ಷತಾ ನಿಯಮ ಪಾಲನೆಗೆ ಖಡಕ್ ವಾರ್ನಿಂಗ್

ಶಾಲಾ ವಾಹನಗಳ ದಿಢೀರ್ ತಪಾಸಣೆ –ಸುರಕ್ಷತಾ ನಿಯಮ ಪಾಲನೆಗೆ ಖಡಕ್ ವಾರ್ನಿಂಗ್ ಶಿವಮೊಗ್ಗ  ಜೂ. 21: ಶಿವಮೊಗ್ಗ ನಗರದಲ್ಲಿ ಜೂ. 21 ರಂದು ಪೂರ್ವ ಹಾಗೂ ಪಶ್ಚಿಮ ಟ್ರಾಫಿಕ್ ಠಾಣೆಗಳ ಪೊಲೀಸರು, ಖಾಸಗಿ ಶಾಲಾ ವಾಹನಗಳ ದಿಢೀರ್ ತಪಾಸಣೆ ನಡೆಸಿ, ಸುರಕ್ಷತಾ ನಿಯಮಗಳ ಪಾಲನೆ ಕುರಿತಂತೆ ಚಾಲಕರಿಗೆ ಖಡಕ್ ಎಚ್ಚರಿಕೆ ನೀಡಿದರು. ‘ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಟ್ರಾಫಿಕ್ ಠಾಣೆಗಳ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿವಮೊಗ್ಗ ನಗರಾದ್ಯಂತ ಶಾಲಾ ವಾಹನಗಳ…

Read Full News
IMG 20250621 WA0012

ಸಾಗರದ ಉದ್ಯಮಿ ಟಿಪ್ ಟಾಪ್ ಬಶೀರ್ ಮನೆ ಮೇಲೆ ಇ ಡಿ ದಾಳಿ : ಅಧಿಕಾರಿಗಳಿಂದ ದಾಖಲೆ ತಪಾಸಣೆ

ಸಾಗರದ ಉದ್ಯಮಿ ಟಿಪ್ ಟಾಪ್ ಬಶೀರ್ ಮನೆ ಮೇಲೆ ಇ ಡಿ ದಾಳಿ : ಅಧಿಕಾರಿಗಳಿಂದ ದಾಖಲೆ ತಪಾಸಣೆ ಸಾಗರದ ಉದ್ಯಮಿ ಟಿಪ್ ಟಾಪ್ ಬಶೀರ್ ಮನೆ ಮೇಲೆ ಇ ಡಿ ದಾಳಿ : ಅಧಿಕಾರಿಗಳಿಂದ ದಾಖಲೆ ತಪಾಸಣೆ ಎಲ್ಲಾ ದಾಖಲೆಗಳು ಪಾರದರ್ಶವಾಗಿರುವುದರಿಂದ ಯಾವುದೇ ವಸ್ತುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿಲ್ಲ. ಕತಾರ್ ನಿಂದ ಹಣ ವರ್ಗಾವಣೆ ಕುರಿತು ಪ್ರಶ್ನೆ ಕೇಳಿದರು ಅದರ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು. ಸಾಗರ: ಸಾಗರದ ಕೆಳದಿ ರಸ್ತೆಯಲ್ಲಿರುವ ನಗರ  ಸಭಾ ಸದಸ್ಯ ಟಿಪ್​…

Read Full News
IMG 20250620 WA0027

ರೈತರ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಿರುದ್ದ ಕಟ್ಟುನಿಟ್ಟಿನ ಕ್ರಮ : ಗೋಪಾಲಕೃಷ್ಣ ಬೇಳೂರು

ರೈತರ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಿರುದ್ದ ಕಟ್ಟುನಿಟ್ಟಿನ ಕ್ರಮ : ಗೋಪಾಲಕೃಷ್ಣ ಬೇಳೂರು ಸಾಗರ :  ಕಾನೂನು ವ್ಯವಸ್ಥೆ ಹಾಳುಮಾಡುವವರು ಯಾರೇ ಆದರೂ ಕ್ರಮ ತೆಗೆದುಕೊಳ್ಳಿ. ನಮ್ಮ ಪಕ್ಷದವರೇ ಆಗಲೀ, ಯಾವುದೇ ಪಕ್ಷದವರಾದರೂ ಅಂತಹವರ ಬಗ್ಗೆ ಕರುಣೆ ಬೇಡ. ಯಾವುದೇ ಇಲಾಖೆಯವರು   ವಿನಾ ಕಾರಣ ರೈತರ ಮೇಲೆ ಹಲ್ಲೆ ಮಾಡಿದರೆ ಸಹಿಸಿಕೊಂಡಿರುವುದಿಲ್ಲ. ರೈತರ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ…

Read Full News
GridArt 20250619

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಸಾರ್ವಜನಿಕರ ಪರದಾಟ

ತುಂಗಾ ಸೇತುವೆ ಮೇಲೆ ರೀಲ್ಸ್ ಹುಚ್ಚಾಟ – ಸಾರ್ವಜನಿಕರ ಪರದಾಟ ತೀರ್ಥಹಳ್ಳಿ : ಸಾಮಾಜಿಕ ಜಾಲತಾಣಗಳಿಂದ ಎಷ್ಟು ಒಳ್ಳೆಯದೋ ಅದಕ್ಕಿಂತ ಜಾಸ್ತಿ ಹಾಳಾಗುವುದೇ ಹೆಚ್ಚು. ಅದರಲ್ಲೂ ಈಗ ರೀಲ್ಸ್ ಎಂಬ ಶೋಕಿ ಕೆಲವರಿಗೆ ಹುಚ್ಚಾಟವಾಗಿದೆ. ತೀರ್ಥಹಳ್ಳಿಯಲ್ಲಿ ತುಂಗಾ ನದಿಗೆ ಪರ್ಯಾಯವಾಗಿ ಅಡ್ಡಲಾಗಿ ಕಟ್ಟಿರುವ ಹೊಸ ಸೇತುವೆ ಮೇಲೆ ವಾಹನ ಓಡಾಡುವ ಸಂದರ್ಭದಲ್ಲಿ ಯುವಕರು ಹುಚ್ಚಾಟ ಮೆರೆದಿದ್ದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಲ್ಕೈದು ಬೈಕ್ ಸುತ್ತು ಹೊಡೆಯುತ್ತಿದ್ದು ಅದರ ಮಧ್ಯೆ ಓರ್ವ ಯುವಕ ಡ್ಯಾನ್ಸ್ ಮಾಡುತ್ತಿರುವ ರೀಲ್ಸ್…

Read Full News
N669095505175034396913452136bd924fa0fe0932fe6c2f98d5dff5dd072389ba54384e8aa7b3cdd7e9f09

ಭಾರಿ ಮಳೆಗೆ ಧರೆ ಕುಸಿದು ನೆಲಕ್ಕುರುಳಿದ 30 ಕ್ಕೂ ಹೆಚ್ಚು ಅಡಿಕೆ ಮರ

ಭಾರಿ ಮಳೆಗೆ ಧರೆ ಕುಸಿದು ನೆಲಕ್ಕುರುಳಿದ 30 ಕ್ಕೂ ಹೆಚ್ಚು ಅಡಿಕೆ ಮರ ತೀರ್ಥಹಳ್ಳಿ: ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿ ಮಳೆಯಿಂದ ಧರೆ ಕುಸಿದು ಅಡಿಕೆ ಮರ ಬಿದ್ದ ಘಟನೆ ತೂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ತೂದೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂಡ್ಲು ಎಂಬ ಗ್ರಾಮದ ಮಂಜುನಾಥ್ ಶೆಟ್ಟಿ ಎಂಬುವರ ತೋಟದ ಹಿಂಭಾಗ ಹಳ್ಳದ ನೀರು ಹರಿಯುತ್ತಿದ್ದು ಹಳ್ಳದ ನೀರಿನ ರಭಸಕ್ಕೆ ಧರೆ ಕುಸಿದು 30 ಕ್ಕೂ ಹೆಚ್ಚು ಅಡಿಕೆ ಮರ ನೆಲಕ್ಕೆ ಉರುಳಿದ್ದವು. ವಿಷಯ ತಿಳಿಯುತ್ತಿದ್ದಂತೆ ತಾಲೂಕು…

Read Full News
GridArt 20250619 112746149 wm

ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ರಾಜು ರೆಡ್ಡಿ ಅಧಿಕಾರ ಸ್ವೀಕಾರ

ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ರಾಜು ರೆಡ್ಡಿ ಅಧಿಕಾರ ಸ್ವೀಕಾರ ರಿಪ್ಪನ್ ಪೇಟೆ ಠಾಣೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಿಎಸ್‌ಐ ಪ್ರವೀಣ್ ಎಸ್ ಪಿ ರವರು ಆನಂದಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದಾರೆ. ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ರಾಜು ರೆಡ್ಡಿ ಅಧಿಕಾರ ಸ್ವೀಕಾರ ರಿಪ್ಪನ್ ಪೇಟೆ : ಪಟ್ಟಣದ ಪೊಲೀಸ್ ಠಾಣೆಯ ನೂತನ ಪಿಎಸ್‌ಐ ಆಗಿ ಇತ್ತೀಚೆಗೆ ವರ್ಗಾವಣೆಗೊಂಡ ಪಿಎಸ್‌ಐ ರಾಜು ರೆಡ್ಡಿ ಬೆನ್ನೂರು ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಜೂನ್ 07 ರಂದು ಶಿವಮೊಗ್ಗ…

Read Full News
GridArt 20250618

ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಪ್ರವೀಣ್ ಎಸ್ ಪಿ ಅಧಿಕಾರ ಸ್ವೀಕಾರ

ಆನಂದಪುರ ಪೊಲೀಸ್ ಠಾಣೆಯ ಪಿಎಸ್‌ಐ ಆಗಿ ಪ್ರವೀಣ್ ಎಸ್ ಪಿ ಅಧಿಕಾರ ಸ್ವೀಕಾರ ಆನಂದಪುರ : ಪಟ್ಟಣದ ಪೊಲೀಸ್ ಠಾಣೆಯ ನೂತನ ಪಿಎಸ್‌ಐ ಆಗಿ ಇತ್ತೀಚೆಗೆ ವರ್ಗಾವಣೆಗೊಂಡ ಪಿಎಸ್‌ಐ ಪ್ರವೀಣ್ ಎಸ್ ಪಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಜೂನ್ 07 ರಂದು ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೊಳಿಸಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ ಆರ್ ರವಿಕಾಂತೇ ಗೌಡ ಆದೇಶ ಹೊರಡಿಸಿದ್ದರು ಸದರಿ ಆದೇಶದಂತೆ ರಿಪ್ಪನ್ ಪೇಟೆ ಠಾಣೆಯಲ್ಲಿ ಕಾರ್ಯನಿರ್ವಹಿಸುತಿದ್ದ…

Read Full News
N66898448017502603226263304c85f58417b895f0c6702075e8868543b6d0c5bcdef83ff7f3cab0a3c0b0e

ಆಯತಪ್ಪಿ ಗುಂಡಿಗೆ ಬಿದ್ದ ಹಸು – ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ

ಆಯತಪ್ಪಿ ಗುಂಡಿಗೆ ಬಿದ್ದ ಹಸು – ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ ಶಿವಮೊಗ್ಗ: ಮೇವು ಅರಸಿ ಹೊರಟ ಹಸುವೊಂದು ಆಯ ತಪ್ಪಿ ಗುಂಡಿಗೆ ಬಿದ್ದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಸಿಬ್ಬಂದಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ. ಶಿವಮೊಗ್ಗದ ಹರಿಗೆ ಹಾತಿನಗರದ ಟಿಎಸ್‌ ಡಬ್ಲ್ಯೂ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ 2.25ರ ಸುಮಾರಿಗೆ ಹಸುವೊಂದು ಮೇವು ಅರಸಿ ಹೋಗುವಾಗ ಮನೆ ಹಿಂದೆ ನೀರಿಗಾಗಿ ತೋಡಿದ್ದ ಸಣ್ಣ ಗುಂಡಿಗೆ ಬಿದ್ದಿದೆ. ಈ ಕುರಿತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತು ದೂರು…

Read Full News
GridArt 20250618

RIPPONPETE | ಭಾರಿ ಮಳೆಗೆ ಕೊಟ್ಟಿಗೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು

RIPPONPETE | ಭಾರಿ ಮಳೆಗೆ ಕೊಟ್ಟಿಗೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಗವಟೂರು ವಾರ್ಡ್ 1 ರ ಕೆರೆಹಳ್ಳಿಯಲ್ಲಿ ಭಾರಿ ಮಳೆಗೆ ದನದ ಕೊಟ್ಟಿಗೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಲಾಗಿದೆ. ಕೆರೆಹಳ್ಳಿ ಗ್ರಾಮದ ಮಂಜೋಜಿರಾವ್ ಎಂಬುವವರ ದನದ ಕೊಟ್ಟಿಗೆ ಭಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿತ ಕಂಡಿತ್ತು ಈ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ…

Read Full News
1003617025

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ ಮಲೆನಾಡು ಕರಾವಳಿ ಸಂಪರ್ಕದ ​​ಪ್ರಮುಖ ಮಾರ್ಗಗಳಲ್ಲಿ ಒಂದಾದ ಹುಲಿಕಲ್ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರಮುಖ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯ ಸಾಲುಗಟ್ಟಿ ನಿಂತ ಘಟನೆ ನಡೆದಿದೆ. ಸೋಮವಾರ ಮಧ್ಯ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನ 1 ಗಂಟೆಯವರೆಗೂ ಸಂಚಾರ ಸ್ಥಗಿತವಾಗಿತ್ತು ನಗರ ಪೊಲೀಸ್…

Read Full News
GridArt 20250617

ಕಿಡಿಗೇಡಿಗಳಿಂದ ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ: ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ರಿಂದ ಸ್ಥಳ ಪರಿಶೀಲನೆ‌

ಕಿಡಿಗೇಡಿಗಳಿಂದ ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ: ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ರಿಂದ ಸ್ಥಳ ಪರಿಶೀಲನೆ‌ ಹೊಸನಗರ ತಾಲೂಕಿನ ಪುರಪ್ಪೆಮನೆ ಹಾಗೂ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕೈಗಾರಿಕಾ ತ್ಯಾಜ್ಯವನ್ನು ಎಸೆಯುವ ಮೂಲಕ ಅರಣ್ಯ ಜೀವಿಗಳ ಸಂತತಿಯ ಮೇಲೆ ಪರಿಣಾಮ ಬೀರುವ ಮತ್ತು ಜೀವ ವೈವಿಧ್ಯತೆಯನ್ನು ಕಡಿಮೆ ಮಾಡುವ ಯತ್ನ ಕಿಡಿಗೇಡಿಗಳಿಂದ ನಡೆಯುತ್ತಿದೆ. ಹೌದು ಹೊಸನಗರ ತಾಲೂಕಿನ ಪುರಪ್ಪೆಮನೆ ಹಾಗೂ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಕೈಗಾರಿಕಾ…

Read Full News
GridArt 20250617

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ – ಸಂಚಾರ ವ್ಯತ್ಯಯ ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ  ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಅದರಲ್ಲೂ ಮಣಿಪಾಲ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಗಳಿಗೆ ತೊಂದರೆಯಾಗಿದೆ. ಆಗುಂಬೆ ಘಾಟಿಯ ಪ್ರದೇಶದಲ್ಲಿ ಸಂಜೆ ಬಿರುಸಿನ ಗಾಳಿ ಮತ್ತು ಮಳೆಗೆ ಒಂದು ದೊಡ್ಡ ಮರ ರಸ್ತೆ ಮೇಲೆ ಬಿದ್ದ ಪರಿಣಾಮ, ರಾಷ್ಟ್ರೀಯ ಹೆದ್ದಾರಿ 169A–ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುದೀರ್ಘ ಸಮಯದವರೆಗೆ ಉಡುಪಿ ಮತ್ತು…

Read Full News
JPEG 20250617 121213 1562315879810902299 wm

RIPPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ

RIPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ ಗಮನಿಸುತಿದ್ದ ಸಾರ್ವಜನಿಕರು ಪೊಲೀಸಪ್ಪನ ಪರಿಯನ್ನು ಕಂಡು ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಇಂತಹವರೂ ಇದ್ದಾರಾ?ಎನ್ನುತ್ತಲೇ ಮುಂದೆ ಸಾಗುತಿದ್ದರು ಕಳೆದ ಕೆಲವು ತಿಂಗಳ ಹಿಂದೆ ಪಟ್ಟಣದ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡ ಈ ಪೇದೆ ಅಂದಿನಿಂದಲೂ ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲವೊಮ್ಮೆ ಸಾರ್ವಜನಿಕ ರೊಂದಿಗೆ ರಿಪ್ಪನ್ ಪೇಟೆ: ಕರ್ತವ್ಯದಲ್ಲಿರುವಾಗಲೇ ಪಾನಮತ್ತ ನಾಗಿರುವ ಪಟ್ಟಣದ ಪೊಲೀಸ್ ಪೇದೆಯೋರ್ವರು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಮಲಗಿ ಅಪಹಾಸ್ಯಕ್ಕೀಡಾಗಿರುವ ಘಟನೆ ಸೋಮವಾರ ನಡೆದಿದೆ. ಪೊಲೀಸ್ ಠಾಣೆಯ ಪಕ್ಕದ ರಸ್ತೆಯ…

Read Full News
IMG 20250616

HOSANAGARA | ಭಾರಿ ಮಳೆಗೆ ಭೂ ಕುಸಿತ – ಒಂದಡಿಯಷ್ಟು ಕೆಳಗೆ ಕುಸಿದ ರಸ್ತೆ

HOSANAGARA | ಭಾರಿ ಮಳೆಗೆ ಭೂ ಕುಸಿತ – ಒಂದಡಿಯಷ್ಟು ಕೆಳಗೆ ಕುಸಿದ ರಸ್ತೆ ಶಿವಮೊಗ್ಗ ಜಿಲ್ಲಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಹಲವಾರು ಕಡೆ ಅನಾಹುಗಳು ನಡೆದಿದೆ ಇನ್ನು ಹೊಸನಗರ ತಾಲೂಕಿನ ಅರಮನೆ ಗ್ರಾಪಂ ವ್ಯಾಪ್ತಿಯಲ್ಲಿ ಕುಂದಗಲ್ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಕುಂದಗಲ್‌ ಗ್ರಾಮದಲ್ಲಿ ಸುಮಾರು 200 ಅಡಿಯಷ್ಟು ವ್ಯಾಪ್ತಿಯಲ್ಲಿ ಭೂಕುಸಿತವಾಗಿರುವ ವರದಿಯಾಗಿದೆ.ಇನ್ನೂ ಈ ಕುಸಿತದಿಂದ ರಸ್ತೆ ಒಂದು ಅಡಿಯಷ್ಟು ಕೆಳಗೆ ಇಳಿದಿದೆ. ಕುಂದಗಲ್‌ ಗ್ರಾಮದಲ್ಲಿ ಸುಮಾರು ಒಂದು ಅಡಿಯಷ್ಟು ಭೂ ಕುಸಿತ ಉಂಟಾಗಿದೆ. ಕಳೆದ…

Read Full News
N6685330051749981547577769f780a16facbf4e5114cf9f858ee0456af4722f2618ef4b101ef52c942c01f

ಕಾಂತಾರ ಚಾಪ್ಟರ್-1 ಚಿತ್ರ ತಂಡಕ್ಕೆ ನೋಟೀಸ್ ಜಾರಿ ಮಾಡಿದ ಹೊಸನಗರ ತಹಶೀಲ್ದಾರ್ ರಶ್ಮಿ .! ಕಾರಣವೇನು!?

ಕಾಂತಾರ ಚಾಪ್ಟರ್-1 ಚಿತ್ರ ತಂಡಕ್ಕೆ ನೋಟೀಸ್ ಜಾರಿ ಮಾಡಿದ ಹೊಸನಗರ ತಹಶೀಲ್ದಾರ್ ರಶ್ಮಿ .! ಕಾರಣವೇನು!? ಶಿವಮೊಗ್ಗ: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ -1ರ ಚಿತ್ರೀಕರಣಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರೀಕರಣದ ವೇಳೆಯಲ್ಲಿ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದ ಘಟನೆ ಸಂಬಂಧ 3 ದಿನಗಳಲ್ಲಿ ಉತ್ತರಿಸುವಂತೆ ಹೊಸನಗರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಹೊಸನಗರ ತಹಶೀಲ್ದಾರ್ ರಶ್ಮಿ ಅವರು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದು, ದಿನಾಂಕ ಜೂನ್ 15ರಂದು ನಡೆದ ದೋಣಿ…

Read Full News
Images (47)

ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ

ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಶಿವಮೊಗ್ಗ: ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ಕ್ಷೇತ್ರದ ಮನೆ, ರಸ್ತೆಗಳು ಹಾನಿಗೊಂಡಿವೆ‌.ಸದರಿ ಪ್ರದೇಶಗಳಿಗೆ ತತ್ತಕ್ಷಣ ಭೇಟಿ ನೀಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ಶಾಸಕರ ಆಪ್ತ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ…

Read Full News
N66840477417499083031020f815d4fc0115377d3e404aa2cf3d3ffbc4f608e5c8a9ab632e473527545b794

ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು 625ಕ್ಕೆ 625 ಅಂಕ ಪಡೆದು ಟಾಪರ್ ಆದ ಸಂಜನಾ

ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು 625ಕ್ಕೆ 625 ಅಂಕ ಪಡೆದು ಟಾಪರ್ ಆದ ಸಂಜನಾ “ಥ ಇನ್ಫರ‍್ಮೇಶನ್ ಸೋರ್ಸ್ ಫಾರ್ ಮೇಕಿಂಗ್ ಪ್ರೋಟಿನ್ ಇನ್ ದ ಸೆಲ್ಸ್ ಇಸ್” ಎಂಬ ಬಹು ಆಯ್ಕೆಯ ಪ್ರಶ್ನೆಗೆ ಕೇಳಲಾಗಿತ್ತು. ಅದಕ್ಕೆ ಜೀನ್, ಕ್ರೋಮೋಜೋಮ್, ಡಿಎನ್‌ಎ, ರೈಬೊಝೋಮ್ ಎಂಬ ನಾಲ್ಕು ಆಯ್ಕೆ ಇತ್ತು. ಜೀನ್ ಸಹ ಪ್ರೋಟಿನ್ ಸೆಲ್ ಎಂದು ಸಂಜನಾ ಉತ್ತರ ನೀಡಿದ್ದಳು. ಆದರೆ ಸರಿಯಾದ ಉತ್ತರ ಡಿಎನ್‌ಎ ಎಂದಿತ್ತು. ಶಿವಮೊಗ್ಗ: ಒಂದು ಅಂಕದಿಂದ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಕನಸು…

Read Full News
IMG 20250612 WA0005 wm

ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ  ಟ್ರಾಫಿಕ್ ಜಾಮ್!!

ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ  ಟ್ರಾಫಿಕ್ ಜಾಮ್!! ತೀರ್ಥಹಳ್ಳಿ : ರಾಜ್ಯ ಹೆದ್ದಾರಿ 169 ಎ ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ – ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನವೊಂದರ ಆಕ್ಸೆಲ್  ಕಡಿತವಾದ್ದರಿಂದ ಘಾಟಿಯ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಘಾಟಿಯ ಎಂಟನೇ ತಿರುವಿನಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಆಗುಂಬೆ ಘಾಟಿಯ ಎರಡು ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ನಿನ್ನೆಯಿಂದ ಸಿಕ್ಕಾಪಟ್ಟೆ ಮಳೆ…

Read Full News